Nov 17, 2023, 11:32 AM IST
ಗ್ರಾಹಕರ ಅಟ್ರಾಕ್ಷನ್ ಮಾಡೋಕೆ ಕಲರ್‌ಫುಲ್ ಲೈಟಿಂಗ್. ಡಿಫರೆಂಟ್ ನೇಮ್..ಮಡಿಕೇರಿ ಹೋಟೆಲ್‌ಗಳು(Hotels) ಗ್ರಾಹಕರ ಸಳೆಯೋದ್ರಲ್ಲಿ ಎತ್ತಿದ ಕೈ..ಅಷ್ಟೇ ಅಲ್ಲ ಜನರಿಗೆ ತಿಂದ್ರೆ ನಾಲಿಗೆಗೆ ರುಚಿ ಹತ್ತುವ ಅಡುಗೆ ನೀಡೋದ್ರಲ್ಲೂ ಫೇಮಸ್.. ಆದ್ರೆ, ಈ ಹೋಟೆಲ್ಗಳ ಕತೆ ಹೊರಗೆಲ್ಲ ಥಳುಕು.. ಒಳಗೆಲ್ಲ ಹುಳುಕು ಅನ್ನೋದು ಬಯಲಾಗಿದೆ. ಮಡಿಕೇರಿ ನಗರಸಭೆ ಸದಸ್ಯರು(Madikeri Municipal Council members), ಆರೋಗ್ಯ ಅಧಿಕಾರಿಗಳ(Health officials) ದಾಳಿ ವೇಳೆ ಹೋಟೆಲ್ಗಳ ಅಸಲಿ ರಹಸ್ಯ ಬಯಲಾಗಿದೆ. ಆಹಾ ಎಂತಹ ಬಿರಿಯಾನಿ. ಕಬಾಬ್ ಸಿಕ್ಕಾಪಟ್ಟೆ ಟೇಸ್ಟ್. ಹೀಗಂತ ಬಾಯಿ ಚಪ್ಪರಿಸಿಕೊಂಡು ತಿನ್ನೋರಿಗೆ ಇಲ್ಲಿದೆ ನೋಡಿ ಶಾಕಿಂಗ್ ರಹಸ್ಯ. ಎಲ್ಲಿ ನೋಡಿದ್ರೂ ಗಲೀಜು. ಕಳಪೆ ಚಿಕನ್,ಮಟನ್, ಗಲೀಜಾದ ಅಡುಗೆ ಮನೆ ಕಂಡು ನಗರಸಭೆ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ. ಇದನ್ನು ಜನರು ತಿಂದ್ರೆ ಏನಾಗಬಹುದು ಅಂತಾ ಅಧಿಕಾರಿಗಳು ಪ್ರಶ್ನಿಸಿದ್ರೆ ಕೆಲ ಹೋಟೆಲ್ ಮಾಲೀಕರು ಅಧಿಕಾರಿಗಳ ವಿರುದ್ಧವೇ ರೇಗಾಡಿದ್ರು.ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ಸ್ವಚ್ಛತೆ ಕಾಪಾಡದ ಹೋಟೆಲ್‌ಗಳಿಗೆ 5 ಸಾವಿರ ದಂಡ ಹಾಕಿ ಎಚ್ಚರಿಕೆ ನೀಡಿದ್ರು. ಹೋಟೆಲ್ಗಳು ಮಾತ್ರವಲ್ಲ.. ಸ್ವೀಟ್ ಅಂಗಡಿ, ಬೇಕರಿಗಳಲ್ಲೂ ಇಂಥದ್ದೇ ದೃರ್ಶಯ ಕಂಡು ಬಂತು.. ಬೇಕರಿಯಲ್ಲಿ ಸ್ಪೀಟ್ ಪಾತ್ರೆಗೆ ಮುತ್ತಿಕ್ಕುವ ನೋಣನೋಡಿ ಅಧಿಕಾರಿಗಳು ಕಕ್ಕಾಬಿಕ್ಕಿಯಾದ್ರು. ಮಂಜಿನ ನಗರಿ ಪ್ರವಾಸಿಗರ ಹಾಟ್ಸ್ಪಾಟ್.. ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರ್ತಾರೆ.. ಪ್ರವಾಸಿ ತಾಣಗಳ ಸೌಂಧರ್ಯ ಸವಿಯಲು ಬರುವ ಪ್ರವಾಸಿಗರು ಇಂಥ ಹೋಟೆಲ್ಗಳಲ್ಲೇ ಊಟ, ತಿಂಡಿ ಮಾಡುತ್ತಾರೆ.. ಆದ್ರೆ, ಸ್ವಚ್ಛತೆ ಕಾಪಾಡಿಕೊಳ್ಳದ ಇಂತ ಹೋಟೆಲ್, ಬೇಕರಿಗಳಿಂದ ಪ್ರವಾಸೋದ್ಯಮದ ಮೇಲೂ ಕೆಟ್ಟು ಪರಿಣಾಮ ಬೀರುತ್ತೆ.. ಹೀಗಾಗಿ ಹೋಟೆಲ್,ಬೇಕರಿಗಳಿಗೆ ಎಚ್ಚರಿಕೆ ಕೊಟ್ಟಿರುವ ಆಯುಕ್ತರು ಪರವಾನಗಿ ರದ್ದುಗೊಳಿಸೋದಾಗಿ ವಾರ್ನ್ ಮಾಡಿದ್ದಾರೆ.
ಇದನ್ನೂ ವೀಕ್ಷಿಸಿ: ಪಾಠ ಬಿಟ್ಟು ಪ್ರತಿಭಟನೆಗೆ ಇಳಿದ ಶಿಕ್ಷಕರು..! ಮೂರು ತಿಂಗಳು ಸಂಬಳವಿಲ್ಲದೇ ಪರದಾಟ..!