ಜನದಟ್ಟಣೆಯ ಬೆಂಗಳೂರಲ್ಲಿ ಮತ್ತೆ ಚಿರತೆ ಕಾಟ: ಅಪಾರ್ಟ್‌ಮೆಂಟ್‌ಗೆ ಚಿರತೆ ಎಂಟ್ರಿ, ಬೆಚ್ಚಿ ಬಿದ್ದ ಜನ !

Oct 31, 2023, 10:58 AM IST

ಬೆಂಗಳೂರು ಜನದಟ್ಟಣೆ ನಗರ.. ಹಗಲು ರಾತ್ರಿ ಜನರ ಓಡಾಟವಿರುತ್ತೆ.. ಇಂಥ ಮಹಾನಗರದಲ್ಲಿ ಈಗ ಚಿರತೆ ಕಾಟ ಶುರುವಾಗಿದೆ.. ಯೆಸ್,  ಬೊಮ್ಮನಹಳ್ಳಿ ಸಮೀಪದ ಕೂಡ್ಲು ಸೇರಿದಂತೆ ಸುತ್ತಮುತ್ತಲಿನ ಕಡೆಗಳಲ್ಲಿ ಚಿರತೆ (Leopard) ಪ್ರತ್ಯಕ್ಷವಾಗಿದೆ. ಕಳೆದ ಮೂರು ದಿನಗಳಿಂದ ಕೂಡ್ಲುವಿನ cadenza ಅಪಾರ್ಟ್ಮೆಂಟ್ ಹಾಗೂ aecs ಲೇಔಟ್ ಸುತ್ತಮುತ್ತ ಚಿರತೆ ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ರಾತ್ರಿಯಾದ್ರೆ ಸಾಕು ಚಿರತೆ ರೌಂಡ್ಸ್ ಹೊಡೆಯುತ್ತಿದೆ. ಅಪಾರ್ಟ್ಮೆಂಟ್ಗಳ(Apartment) ಕಡೆಯೇ ಚಿರತೆ ಓಡಾಡುತ್ತಿರುವ ದೃಶ್ಯ ನೋಡಿ ಜನ ಬೆಚ್ಚಿಬಿದ್ದದಾರೆ.ರಾತ್ರಿ ಮನೆಯಿಂದ ಹೊರ ಬರೋಕು ಭಯಪಡುತ್ತಿದ್ದಾರೆ. ಕೂಡ್ಲೂಗೇಟ್ನ ಕಡನ್ಜ್ನ್ ಅಪಾರ್ಟ್ಮೆಂಟ್ ಬೇಸ್ಮೆಂಟ್, ಲಿಫ್ಟ್ ಬಳಿಯೆಲ್ಲಾ ಓಡಾಡಿದೆ. ಚಿರತೆ ಎಂಟ್ರಿ ಸುದ್ದಿ ತಿಳಿದು ಬೆಂಗಳೂರು ಜಿಲ್ಲೆ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. DCF ರವೀಂದ್ರ ಹಾಗೂ ಕೆ.ಆರ್.ಪುರಂ RFO ಶಿವಾರಾತ್ರೇಶ್ವರ ಸ್ವಾಮಿ ಮತ್ತು ಆನೇಕಲ್‌ನ RFO ಎಸ್.ಭರತ್ ಸೇರಿ 20ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಸೆರೆ ಹಿಡಿಯಲು ತಂತ್ರ ರೂಪಿಸಿದ್ದಾರೆ. ಚಿರತೆ ಓಡಾಡುವ ಪ್ರದೇಶಗಳಲ್ಲಿ ಎರಡು ಬೋನ್ಗಳನ್ನು ಇಟ್ಟಿದ್ದಾರೆ.ಕೂಡ್ಲು, ಸಿಂಗಸಂದ್ರ, ಸೋಮಸುಂದರ ಪಾಳ್ಯ, ಹೊಸಪಾಳ್ಯ, ಹೆಚ್ ಎಸ್ ಆರ್, ಪರಂಗಿಪಾಳ್ಯ, ಬಂಡೇಪಾಳ್ಯ ಸುತ್ತಮುತ್ತ ಅರಣ್ಯ ಇಲಾಖೆ ತಂಡ ಕಾರ್ಯಚರಣೆ ನಡೆಸ್ತಿದೆ. ಡ್ರೋಣ್  ಕ್ಯಾಮರಾ ಹಿಡಿದು ಚಿರತೆ ಬೇಟೆಗೆ ಇಳಿದಿದ್ದಾರೆ. ಚಿರತೆ ಸೆರೆ ಸಿಗೋವರೆಗೂ ಈ ಪ್ರದೇಶದ ಜನ ಎಚ್ಚರಿಕೆಯಿಂದ ಇರಬೇಕಿದೆ.

ಇದನ್ನೂ ವೀಕ್ಷಿಸಿ:  ಕನ್ನಡ ರಾಜ್ಯೋತ್ಸವಕ್ಕೆ ಯಶ್ ಕೊಡ್ತಾರೆ ಗುಡ್ ನ್ಯೂಸ್ ?ನ .01ಕ್ಕೆ ಅನೌನ್ಸ್ ಆಗೋದು ಯಶ್ 19ನಾ ? ರಾಮಾಯಣನಾ ?