ಗಣಿನಾಡಲ್ಲಿ ‘ಕೈ-ಕಮಲ’ದ ಮಧ್ಯೆ ಟವರ್ ರಾಜಕೀಯ.. ರಾಷ್ಟ್ರೀಯ ಪಕ್ಷಗಳ ಕಿತ್ತಾಟದಿಂದ ಅರ್ಧಕ್ಕೆ ನಿಂತ ಕೆಲಸ

ಗಣಿನಾಡಲ್ಲಿ ‘ಕೈ-ಕಮಲ’ದ ಮಧ್ಯೆ ಟವರ್ ರಾಜಕೀಯ.. ರಾಷ್ಟ್ರೀಯ ಪಕ್ಷಗಳ ಕಿತ್ತಾಟದಿಂದ ಅರ್ಧಕ್ಕೆ ನಿಂತ ಕೆಲಸ

Published : Nov 27, 2023, 10:37 AM IST

ಅದು ಬಳ್ಳಾರಿಗೆ ಐಕಾನ್ ನಂತಿರೋ ವೃತ್ತ. ದಶಕಗಳಿಂದಲೂ ಟವರ್‌ವೊಂದಿತ್ತು. ಅದನ್ನು ಕೆಡವಿ  ರಾಜ್ಯದಲ್ಲಿಯೇ ಅತಿ ಎತ್ತರದ ಟವರ್ ಕ್ಲಾಕ್ ನಿರ್ಮಾಣ ಮಾಡುವ ಕನಸು ಕನಸಾಗಿಯೇ ಉಳಿದಿದೆ. ಆಡಳಿತಾರೂಢ ಮತ್ತು ವಿರೋಧ ಪಕ್ಷದ ನಾಯಕರ ಮಧ್ಯೆ ಮುಸುಕಿನ ಗುದ್ದಾಟಕ್ಕೆ ಕಾರಣವಾಗಿದೆ.
 

ಲೆಬಾನಾನ್ ಮಾದರಿ ಟವರ್ ಮಾಡೆಲ್.. ಇದೇ ರೀತಿ ಬಳ್ಳಾರಿಯಲ್ಲಿ(Ballari) ಟವರ್ ಕಟ್ಟಿಸ್ತೀನಿ ಎಂದು ಶ್ರೀರಾಮುಲು(Sriramulu) ಕಾಮಗಾರಿಗೆ ಚಾಲನೆ ಕೊಟ್ಟಿದ್ರು. 7 ಕೋಟಿ ವೆಚ್ಚದಲ್ಲಿ 140 ಅಡಿ ಎತ್ತರದ 10 ಮಹಡಿಯ ಟವರ್(tower) ನಿರ್ಮಾಣಕ್ಕೆ ಬಿಜೆಪಿ(BJP) ಪ್ಲಾನ್ ಮಾಡಿತ್ತು. 7ನೇ ಮಹಡಿಯಲ್ಲಿ ವೀವ್ ಪಾಯಿಂಟ್.  8ನೇ ಮಹಡಿಯಲ್ಲಿ ಕ್ಲಾಕ್ ಸೇರಿದಂತೆ ಟವರ್ ಹಲವು ವಿಶೇಷತೆಗಳನ್ನ ಹೊಂದಿತ್ತು. ಆದರೆ, 2023ರಲ್ಲಿ ಚುನಾವಣೆ ವೇಳೆ ನೀತಿ ಸಂಹಿತೆ ಬರುತ್ತೆಂದು ತರಾತುರಿಯಲ್ಲಿ ಕಾಮಗಾರಿಗೆ ಚಾಲನೆ ಕೊಡಲಾಗಿತ್ತು. ಬಳ್ಳಾರಿ ನಗರದ ಹೃದಯಭಾಗದಲ್ಲಿರೋ ರಾಯಲ್ ವೃತ್ತದಲ್ಲಿ ಲೇಬಿನಾನ್ ದೇಶದ ಮಾದರಿ ಟವರ್ ನಿರ್ಮಿಸಿದ್ರೆ, ನಿರ್ವಹಣೆ  ಕಷ್ಟವಾಗಲಿದೆ. ಅದಕ್ಕಾಗಿ 140 ಅಡಿಯ ಬದಲು 117 ಅಡಿಗೆ ನಿಲ್ಲಿಸಲು ಲೋಕೋಪಯೋಗಿ ಇಲಾಖೆಯಿಂದ ಈಗಿನ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರೋ ಮಾಜಿ ಸಚಿವ ಶ್ರೀರಾಮುಲು ದ್ವೇಷದ ರಾಜಕೀಯ ಬಿಟ್ಟು ಅರ್ಧಕ್ಕೆ ನಿಂತಿರೋ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಟಾಂಗ್ ನೀಡಿದ್ದಾರೆ. ಇನ್ನೂ ಬಳ್ಳಾರಿಯ ಕ್ಲಾಕ್ ಟವರ್ಗೆ ತನ್ನದೇ ಆದ ಇತಿಹಾಸವಿದೆ. ಸ್ವಾತಂತ್ರ್ಯ ಹೋರಾಟಗಾರ ಗಡಿಗಿ ಚೆನ್ನಪ್ಪ ಹೆಸರಲ್ಲಿ ದಶಕಗಳ ಹಿಂದೆ ಕ್ಲಾಕ್ ಟವರ್ ನಿರ್ಮಿಸಲಾಗಿತ್ತು.. ಆದ್ರೆ, 2009ರಲ್ಲಿ ಜನಾರ್ದನ ರೆಡ್ಡಿ ಕಾಲದಲ್ಲಿ ರಾತ್ರೋರಾತ್ರಿ ಒಡೆದು ಹಾಕೋ ಮೂಲಕ ಹೊಸ ಟವರ್ ನಿರ್ಮಾಣ ಭರವಸೆ ಕೊಟ್ಟು ಸುಮ್ಮನಾಗಿದ್ರು.. ನಂತರ 2013ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ 40 ಅಡಿಯ ಕ್ಲಾಕ್ ಟವರ್ ನಿರ್ಮಾಣ ಮಾಡಲಾಯ್ತು.

ಅದನ್ನು ಕೂಡ 2022ರಲ್ಲಿ ಶ್ರೀರಾಮುಲು ಉಸ್ತುವಾರಿ ಸಚಿವರಿದ್ದಾಗ ರಾತ್ರೋರಾತ್ರಿ ಕೆಡವಿ 2022 ಆಗಸ್ಟ್ 15ರಂದು 7 ಕೋಟಿ ವೆಚ್ಚದಲ್ಲಿ ಲೇಬಿನಾನ್ ಮಾದರಿಯಲ್ಲಿ 140 ಅಡಿ ಎತ್ತರದ ಟವರ್ ನಿರ್ಮಾಣಕ್ಕೆ ಚಾಲನೆ ನೀಡಿದ್ರು. ಆದರೆ ಅದು ಕೂಡ ಇದೀಗ ಅರ್ಧಕ್ಕೆ ನಿಂತಿದೆ. ಆದರೆ ಹಾಲಿ ಬಳ್ಳಾರಿ ಉಸ್ತುವಾರಿ ಸಚಿವ ನಾಗೇಂದ್ರ ಮಾತ್ರ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡೋದಿಲ್ಲ. ಕಾಮಗರಿ ಪೂರ್ಣಗೊಳಿಸುತ್ತೇವೆ ಎನ್ನುತ್ತಿದ್ದಾರೆ. ರಾಷ್ಟ್ರೀಯಾ ಪಕ್ಷಗಳ ಕಿತ್ತಾಟದಿಂದ ಅರ್ಧಕ್ಕೆ ನಿಂತ ಟವರ್ ಪೂರ್ಣಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದು ಕಾರ್ತಿಕ ಪೌರ್ಣಮಿ ಇದ್ದು, ಮನಸ್ಸಿನ ನಿರಾಳತೆಗೆ ಚಂದ್ರ ದರ್ಶನ ಮಾಡಿ..

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more