ದಶಕದ ಹೋರಾಟ..ರೈತನಿಗೆ ಇನ್ನೂ ಸಿಕ್ಕಿಲ್ಲ ನ್ಯಾಯ..!

Aug 19, 2023, 10:23 AM IST

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮದ ಮಂಜುನಾಥ್‌ ರೈತರಾಗಿದ್ದಾರೆ. ಸುಮಾರು ದಶಕದ ಹಿಂದೆ ದೇವನಹಳ್ಳಿಯ(Devanahalli) ಹರಳೂರು ಗ್ರಾಮ ಸರ್ವೆ ನಂ 57 ರಲ್ಲಿ ಈತನ ಎರಡು ಎಕರೆ 14 ಕುಂಟೆ ಜಮೀನು ಭೂಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದ್ರೆ ಪರಿಹಾರದ ಹಣ(Money) ಬಿಡುಗಡೆ ಆದ್ರೂ ಈ ರೈತನ ಕೈ ಸೇರಿಲ್ಲ. ಕರ್ನಾಟಕ ಕೈಗಾರಿಕಾ ಪ್ರದೇಶ(Karnataka Industrial Area) ಅಭಿವೃದ್ಧಿಗೆ ಇವರ ಜಮೀನು ‌ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ. ಆದ್ರೆ ನಕಲಿ ದಾಖಲೆ ಸೃಷ್ಠಿಸಿ ಬ್ರೋಕರ್ ಪ್ರಭಾಕರ್ ಹಾಗೂ ಕೆಲ ಅಧಿಕಾರಿಗಳು ಮೂರು ಕೋಟಿ ಏಳೂವರೆ ಲಕ್ಷ ಹಣವನ್ನ ಬೇರೆಯವರ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಅನ್ನೋದು ಮಂಜುನಾಥ್ ಆರೋಪವಾಗಿದೆ. ಪಿಳ್ಳಮುನಿಶಾಮಪ್ಪ, ‌ಸಿಪಿ ರಾಮಕೃಷ್ಣಪ್ಪ ಭೂಸ್ವಾಧೀನ ಆಗಿರುವ ಜಮೀನಿನ ಮೂಲ ಮಾಲೀಕರು. ಇವರ ಮಗನೇ ಮಂಜುನಾಥ್. ಆದ್ರೆ, ಭೂಸ್ವಾಧೀನ ಅಧಿಕಾರಿ ಹಾಗೂ ದಲ್ಲಾಳಿ ಪ್ರಭಾಕರ್ ಶಾಮೀಲು ಆಗಿ ನಕಲಿ ರೈತನ ಅಕೌಂಟಿಗೆ ಹಣ ವರ್ಗಾವಣೆ ಮಾಡಿಸಿ, ನುಂಗಿ ಹಾಕಿದ್ದಾರೆ ಎನ್ನಲಾಗ್ತಿದೆ. ನಕಲಿ ರೈತನಿಂದ ಹಣ ರಿಕವರಿ ಮಾಡಿಕೊಡುವಂತೆ ಡಿಸಿ ಕೋರ್ಟ್ ಆದೇಶ ನೀಡಿದೆ. ಅದ್ರೆ ಅಧಿಕಾರಿಗಳು ಇದೀಗ ಬೇರೆ ಆಟ ಶುರುವಿಟ್ಟುಕೊಂಡಿದ್ದಾರೆ. ಭೂಸ್ವಾಧೀನ ಅಧಿಕಾರಿ ಬಾಳಪ್ಪ ನಾನಾ ಕಾರಣಗಳನ್ನು ಕೊಟ್ಟು ರೈತನ ಹಣ ರಿಕವರಿ ಮಾಡಲು ವಿಳಂಭ ಮಾಡುತ್ತಿದ್ದಾರಂತೆ. ಆದ್ರೆ ಅಧಿಕಾರಿ ಬಾಳಪ್ಪ ಮಾತ್ರ ಹೇಳೋದೇ ಬೇರೆ.

ಇದನ್ನೂ ವೀಕ್ಷಿಸಿ:  ಸಿದ್ದು ಸರ್ಕಾರದ ವಿರುದ್ಧ ಅಖಾಡಕ್ಕಿಳಿದ ಬಿಎಸ್‌ವೈ: ಬಿಬಿಎಂಪಿ ಕಮಿಷನ್ ಅಸ್ತ್ರ ಹಿಡಿದು ಹೋರಾಟಕ್ಕೆ ಪ್ಲ್ಯಾನ್ !