ಪುತ್ತಿಗೆ ಮಠದ ಸಾರಥ್ಯದಲ್ಲಿ ಕೋಟಿಗೀತಾ ಲೇಖನಯಜ್ಞ: ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಗೀತೋತ್ಸವ

ಪುತ್ತಿಗೆ ಮಠದ ಸಾರಥ್ಯದಲ್ಲಿ ಕೋಟಿಗೀತಾ ಲೇಖನಯಜ್ಞ: ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಗೀತೋತ್ಸವ

Published : Dec 24, 2023, 11:22 AM IST

ಬೆಂಗಳೂರಿನ ನಾಷ್ಯನಲ್ ಕಾಲೇಜು ಮೈದಾನದಲ್ಲಿ  ಪುತ್ತಿಗೆ ಮಠ ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು. ಪವಿತ್ರ ಗ್ರಂಥ ಭಗವದ್ಗೀತೆಯನ್ನು ಒಂದು ಕೋಟಿಗೂ ಅಧಿಕ ಭಕ್ತರು ಬರೆಯೋ ಮೂಲಕ ಹೊಸ ಸಾಧನೆ ಮಾಡಿದ್ರು. ಗೀತೋತ್ಸವಕ್ಕೆ  ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಸುಶ್ರೇಂದ್ರ ತೀರ್ಥ ಚಾಲನೆ ಕೊಟ್ರೆ..ಗಣ್ಯರು ಭಾಗಿಯಾಗಿದ್ರು.

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕೋಟಿ ಗೀತೋತ್ಸವ ಕಾರ್ಯಕ್ರಮ(Koti gitostava program) ನಡೆಯಿತು. ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಪುತ್ತಿಗೆ ಮಠದ(Puttige Matha) ಉಭಯ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಶ್ರೀ ಸುಶ್ರೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಗೀತೋತ್ಸವ ವಿಜೃಂಭಣೆಯಿಂದ ಜರಗಿತು. 4 ನೇ ವರ್ಷದ ಪರ್ಯಾಯದ ಅಂಗವಾಗಿ ನಡೆಯುತ್ತಿರುವ ಕೋಟಿ ಗೀತಾ ಲೇಖನ ಯಜ್ಞದಲ್ಲಿ ಒಂದು ಕೋಟಿ ಜನ ಭಗವದ್ಗೀತೆ ಬರೆದ್ರು. ಬಸವನಗುಡಿಯ(Basavanagudi) ಗೋವರ್ಧನಗಿರಿ ಮಠದ ಮುಂಭಾಗದಲ್ಲಿ ಅಶ್ವೀನಿ ಪುನೀತ್ ರಾಜ್‍ಕುಮಾರ್(Ashwini Puneeth Rajkumar) ಹಾಗೂ ಎನ್.ಆರ್ ರಮೇಶ್ ಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು. ಭಗವದ್ಗೀತೆಯ 18 ಅಧ್ಯಾಯವನ್ನೊಳಗೊಂಡ ಗ್ರಂಥವನ್ನು ಬೆಳ್ಳಿಯ ರಥದಲ್ಲಿ ಇರಿಸಿ ತರಲಾಗಿದ್ದು ರಥೋತ್ಸವಕ್ಕೆ ಉಭಯ ಮಠಾಧೀಶರಾದ ಸುಗುಣೇಂದ್ರ ತೀರ್ಥರು ಹಾಗೂ ಸುಶೀಂದ್ರ ಶ್ರೀಪಾದರು ಚಾಲನೆ ಕೊಟ್ರು . ಬೆಳ್ಳಿಯ ಪಲ್ಲಕ್ಕಿಯಲ್ಲಿ ಭಗವದ್ಗೀತೆ ಗ್ರಂಥವನ್ನು ಇಟ್ಟು ಉತ್ಸವ ಜೊತೆಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಗವದ್ಗೀತೆಯ ಪಠಣ ಮೊಳಗಿತು. ಗುರುಗಳ ಸಮ್ಮುಖದಲ್ಲಿ ನಡೆದ ಭಗವದ್ಗೀತೆಯ ಸಾಮೂಹಿಕ ಪಾರಾಯಣದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ರು. 

ಗೀತೋತ್ಸವ ಕಾರ್ಯಕ್ರಮದಲ್ಲಿ ಗೀತಾ ಪಾರಾಯಣ(Gita Parayana) ಕಾರ್ಯಕ್ರಮ ಮಾತ್ರವಲ್ಲ.ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನ್ಯಾಷನಲ್ ಕಾಲೇಜ್ ಮೈದಾನ ಸಾಕ್ಷಿಯಾಯ್ತು. ಪ್ರವೀಣ್ ಗೋಲ್ಕಿಂಡಿಯವರ ಕೊಳಲು ನಾದ ನೆರೆದಿದ್ದವರಿಗೆ ಮುದ ನೀಡಿತು‌. ಇದರ ಜೊತೆ ಆಚಾರ್ಯ ತ್ರಯರ ಪ್ರಬಂಧ ಮಂಡನೆ ಕಾರ್ಯಕ್ರಮವೂ ಜನಮನ ಗೆದ್ದಿತು. ಸಭಾ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸಂಸದ, ನಟ ಜಗ್ಗೇಶ್, ನಟಿ ರಾಧಿಕಾ ನಾರಾಯಣ್, ಸುವರ್ಣ ನ್ಯೂಸ್, ಕನ್ನಡಪ್ರಭ ಚೀಫ್ ಮೆಂಟರ್ ರವಿ ಹೆಗಡೆ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿ ಭಗವದ್ಗೀತೆ ಗುಣಗಾನ ಮಾಡಿದ್ರು. ಇಂದೂ ಕೂಡ ಗೀತೋತ್ಸವ ಕಾರ್ಯಕ್ರಮ ನಡೆಯಲಿದ್ದು ಹಲವು ಕಾರ್ಯಕ್ರಮಗಳಿಗೆ ಗೀತೋತ್ಸವ ಸಾಕ್ಷಿಯಾಗಲಿದೆ. ಅರಳು ಮಲ್ಲಿಗೆ ಪಾರ್ಥ ಸಾರಥಿ ನೇತೃತ್ವದಲ್ಲಿ ಉಭಯ ಮಠಾಧೀಶರ ಸಮ್ಮುಖದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಜರುಗಲಿದೆ. ಸಮಾರೋಪ ಸಮಾರಂಭದಲ್ಲಿ ಗೃಹಸಚಿವ ಜಿ.ಪರಮೇಶ್ವರ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್,ತೇಜಸ್ವಿನಿ ಅನಂತ್ ಕುಮಾರ್,ಹೇಮಚಂದ್ರ ಸಾಗರ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ. ಪುತ್ತಿಗೆ ಮಠದ ಗೀತೋತ್ಸವ ಕಾರ್ಯಕ್ರಮ ಭಕ್ತರ ಮನಸ್ಸು ಗೆದ್ದಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ರು. 

ಇದನ್ನೂ ವೀಕ್ಷಿಸಿ:  ಪಾಂಡವಪುರ ಸಂಭ್ರಮ: ಸಾಧಕ ರೈತರಿಗೆ ಸನ್ಮಾನ.. ಹುತಾತ್ಮ ಅನ್ನದಾತರಿಗೆ ನಮನ

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more