ಮಠದ ಸ್ವಾಮೀಜಿ ಹುಡ್ಗಿ ಜೊತೆ ಎಸ್ಕೇಪ್..! ಈಗಾಗಲೇ ಮದ್ವೆಯಾಗಿತ್ತಾ ಸ್ವಾಮೀಜಿಗೆ?

Mar 6, 2020, 1:08 PM IST

ಕೋಲಾರ(ಮಾ.06): ಮಠವೊಂದನ್ನು ಸ್ಥಾಪಿಸಿ ಗೋ ಆಶ್ರಮ ಮಾಡುತ್ತೇನೆಂದು ಬೆಂಗಳೂರಿನಿಂದ ಬಂದ ಸ್ವಾಮೀಜಿಯೊಬ್ಬರು 19 ವರ್ಷದ ಯುವತಿ ಜೊತೆ ಪರಾರಿ ಆಗಿರುವ ಘಟನೆ ಕೋಲಾರ ತಾಲೂಕಿನ ಹೊಳಲಿ ಗ್ರಾಮದಲ್ಲಿ ನಡೆದಿತ್ತು.  ವಿರೋಧದ ನಡುವೆ ಮದುವೆಯಾಗಿದ್ದ ಯುವತಿ ಇದೀಗ ಸ್ವಾಮೀಜಿಯನ್ನು ತೊರೆದಿದ್ದು, ಅವರು ಕಂಬಿ ಎಣಿಸುವುದು ಅನಿವಾರ್ಯವಾಗಿದೆ.

ಸ್ವಾಮೀಜಿಗೆ ಕೈಕೊಟ್ಟ ಯುವತಿ: ಮಠದಲ್ಲಿರಬೇಕಾದವನು ಜೈಲು ಪಾಲು

ಹೊಳಲಿ ಗ್ರಾಮದ ಸೇವಾಶ್ರಮ ಸಂಸ್ಥಾಪಕ ಪೀಠಾಧ್ಯಕ್ಷ ದತ್ತಾತ್ರೇಯ ಅವಧೂತ ಸ್ವಾಮೀಜಿ ಪ್ರೇಮ ಬಲೆಗೆ ಬಿದ್ದು, ಶ್ಯಾಮಲಾ ಎಂಬ ಯುವತಿಯೊಂದಿಗೆ ಪರಾರಿಯಾಗಿದ್ದರು. ಟಿಕ್‌ಟಾಕ್‌ನಲ್ಲೂ  ವಿಡಿಯೋ ಮಾಡೋ ಈ ಸ್ವಾಮೀಜಿಗೆ ಟ್ಯಾಟೂ ಪ್ರೀತಿಯೋ ಕಡಿಮೆ ಏನಲ್ಲ. ಅಂತೂ ಯುವತಿಯೊಂದಿಗೆ ಪರಾರಿಯಾದ ಕಳ್ಳ ಸ್ವಾಮಿಯ ಗೆಟಪ್ ಫುಲ್ ಚೇಂಜ್. ಇಲ್ಲಿದೆ ಕಾಮುಕ ಸ್ವಾಮಿಯ ಲವ್‌ ಸ್ಟೋರಿ. ನೋಡಿ ಸುವರ್ಣ ಎಫ್‌ಐಆರ್.

ಕಾಣೆಯಾಗಿದ್ದ ಸನ್ಯಾಸಿ ಸಂಸಾರಿಯಾಗಿ ಪತ್ತೆ..!