ವಿಶ್ವ ಪ್ರಸಿದ್ಧ ಮಾರುಕಟ್ಟೆಯಲ್ಲಿ ಮೂಲಸೌಲಭ್ಯ ಕೊರತೆ: ಗುಂಡಿ ಬಿದ್ದ ರಸ್ತೆ, ಧೂಳಿನಿಂದ ತುಂಬಿದ ಮಾರುಕಟ್ಟೆ!

ವಿಶ್ವ ಪ್ರಸಿದ್ಧ ಮಾರುಕಟ್ಟೆಯಲ್ಲಿ ಮೂಲಸೌಲಭ್ಯ ಕೊರತೆ: ಗುಂಡಿ ಬಿದ್ದ ರಸ್ತೆ, ಧೂಳಿನಿಂದ ತುಂಬಿದ ಮಾರುಕಟ್ಟೆ!

Published : Nov 18, 2023, 10:32 AM IST

ಅದು ಏಷ್ಯಾದಲ್ಲೇ 2ನೇ ಅತೀ ದೊಡ್ಡ ಟೋಮೊಟೋ ಮಾರುಕಟ್ಟೆ, ಅಲ್ಲಿಂದ ದೇಶ-ವಿದೇಶಗಳಿಗೆ ಈ ಕೆಂಪು ಸೇಬು ರಫ್ತು ಮಾಡಲಾಗುತ್ತೆ. ಆದ್ರೆ ಅಲ್ಲಿರುವ ವ್ಯವಸ್ಥೆ ಮಾತ್ರ ಹೇಳ ತೀರದಾಗಿದೆ. 
 

ಕಣ್ಣು ಹಾಯಿಸಿದಷ್ಟು ಕಾಣುತ್ತಿರುವ ಟೊಮ್ಯಾಟೋ(Tomato) ಮಂಡಿಗಳು, ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಟೋಮೊಟೋ ಲಾರಿಗಳು, ಕಿತ್ತು ಹೋಗಿರುವ ರಸ್ತೆಗಳಲ್ಲಿ ಲಾರಿ ಚಾಲಕರು, ರೈತರು(Farmers) ಪರದಾಟ. ಈ  ದೃಶ್ಯ ಕಂಡುಬಂದಿದ್ದು ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ. ಏಷ್ಯಾದಲ್ಲೇ 2ನೇ ಅತೀ ದೊಡ್ಡ ಟೊಮ್ಯಾಟೋ ಮಾರುಕಟ್ಟೆ ಅಂತಾನೆ ಪ್ರಸಿದ್ಧಿ ಆಗಿರುವ ಕೋಲಾರ (Kolar) ಎಪಿಎಂಸಿ ಮಾರುಕಟ್ಟೆ(APMC market) ಇಡೀ ದೇಶ ಹಾಗೂ ವಿದೇಶದಲ್ಲಿ ಫೇಮಸ್. ಇಲ್ಲಿಂದ ದೇಶದ ಮೂಲೆ ಮೂಲೆಗಳಲ್ಲದೇ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಹಲವು ದೇಶಗಳಿಗೂ ಟೊಮ್ಯಾಟೋ ರಫ್ತು ಮಾಡಲಾಗುತ್ತೆ. ಇಂಥ ಪ್ರತಿಷ್ಠಿತ ಮಾರುಕಟ್ಟೆಗೆ ಮೂಲಭೂತ ಸೌಲಭ್ಯವೂ ಸರಿಯಾಗಿಲ್ಲ ಎಂದು ರೈತರ ಆಕ್ರೋಶ ಹೊರಹಾಕಿದ್ರು. ರಸ್ತೆಯಲ್ಲಿನ ಮಾರುದ್ದ ಗುಂಡಿಗಳನ್ನ ನೋಡ್ತಿದ್ರೆನೇ ಭಯವಾಗುತ್ತೆ.. ಇಂಥ ಗುಂಡಿಗಳಲ್ಲೇ ನಿತ್ಯವೂ ಟೊಮ್ಯಾಟೋ ಕ್ರೇಟ್ಗಳನ್ನು ತುಂಬಿದ ಲಾರಿಯನ್ನು ಚಲಾಯಿಸಬೇಕು.. ಲಾರಿ ಚಾಲರ ಪರದಾಟ ನೋಡೋಕೆ ಆಗ್ತಿಲ್ಲ. ಅಂತಿದ್ದಾರೆ ಮಂಡಿ ಮಾಲೀಕರು ಕೋಲಾರದ ಎಪಿಎಂಸಿ ಮಾರುಕಟ್ಟೆ ಹೇಳಿಕೊಳ್ಳೋಕೆ ಮಾತ್ರ ಏಷ್ಯಾದಲ್ಲೇ 2ನೇ ಅತೀ ದೊಡ್ಡ ಮಾರುಕಟ್ಟೆ.. ಕನಿಷ್ಠ ಮೂಲಭೂತ ಸೌಕರ್ಯ ಹಾಗೂ ಸರಿಯಾದ ರಸ್ತೆ ಇಲ್ಲದೆ ರೈತರು, ಲಾರಿ ಚಾಲಕರು ಪರದಾಡುವಂತಾಗಿದೆ. ಇನ್ನಾದ್ರೂ ಇಲ್ಲಿನ ಅವ್ಯವಸ್ಥೆ ಸರಿಪಡಿಸಬೇಕಿದೆ.

ಇದನ್ನೂ ವೀಕ್ಷಿಸಿ:  ಬೆಂಗಳೂರು ಪಿಜಿ‌ ಮಾಲೀಕರಿಗೆ ಬಿಬಿಎಂಪಿ‌ ಶಾ‌ಕ್..! ಅನಧಿಕೃತ, ನಿಯಮ ಬಾಹಿರ ಪಿಜಿಗಳ ವಿರುದ್ಧ ಸಮರ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more