ಗ್ರಾಹಕರಿಗೆ ಹಾಲಿನ ದರ ಏರಿಕೆ, ರೈತರಿಗೆ ಮಾರಟ ದರ ಇಳಿಕೆ: ಅನ್ನದಾತನಿಗೆ ಕೋಚಿಮುಲ್‌ನಿಂದ ಬಿಗ್ ಶಾಕ್!

Jul 5, 2024, 10:03 AM IST

ಕೋಚಿಮುಲ್‌ನಿಂದ (Kochimul) ರೈತರಿಗೆ (Farmers)ಬಿಗ್ ಶಾಕ್ ನೀಡಲಾಗಿದ್ದು, ಹಾಲು ಉತ್ಪಾದಕರಿಗೆ 2 ರೂಪಾಯಿ ಕಡಿತ ಮಾಡಿ ಆದೇಶ ಹೊರಡಿಸಲಾಗಿದೆ. ದಿಢೀರನೆ 2 ರೂಪಾಯಿಯನ್ನು ಕೋಚಿಮುಲ್ ಆಡಳಿತ ಮಂಡಳಿ ಕಡಿಮೆ ಮಾಡಿದೆ. ಪ್ರತಿ ಲೀಟರ್ ಹಾಲಿನ ಮೇಲೆ 2 ರೂ ಕಡಿತ (Milk Price) ಮಾಡಲಾಗಿದೆ. ನಾಳೆ ಬೆಳಗ್ಗೆಯಿಂದ ಜಾರಿಗೆ ಬರುವಂತೆ ಕೋಚಿಮುಲ್‌ನಿಂದ ಆದೇಶ ಹೊರಡಿಸಲಾಗಿದೆ. ಒಕ್ಕೂಟದಿಂದ ಸಂಘಗಳಿಗೆ ಪ್ರತಿ ಲೀಟರ್‌ಗೆ ಪ್ರಸ್ತುತ 35.85 ರೂ ನಿಗಧಿ ಮಾಡಲಾಗಿದ್ದು, ನಾಳೆಯಿಂದ ಪರಿಷ್ಕೃತ ಪ್ರತಿ ಲೀಟರ್ ಗೆ 33.85 ರೂ. ನೀಡಲಾಗುವುದು. ಸಂಘಗಳಿಂದ ಹಾಲು ಉತ್ಪಾದಕರಿಗೆ ಪ್ರಸ್ತುತ ಲೀಟರ್‌ಗೆ 33.40 ರೂ ನಿಗಧಿ ಮಾಡಿದ್ದು, ಉತ್ಪಾದಕರಿಗೆ ಪರಿಷ್ಕೃತ ದರ ಲೀಟರ್‌ಗೆ 31.40 ರೂ. ನೀಡಲು ಆದೇಶಿಸಲಾಗಿದೆ. ಜನವರಿಯಲ್ಲಿ ಪ್ರತಿ ದಿನ ಕೋಚಿಮುಲ್ ಗೆ 9.65 ಲಕ್ಷ ಲೀಟರ್ ಹಾಲು (Milk)ಸಂಗ್ರಹವಾಗಿತ್ತು. ಜೂನ್ ತಿಂಗಳಿನಿಂದ ಪ್ರತಿ ದಿನ ಕೋಚಿಮುಲ್ ಗೆ 12.37 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಕೋಲಾರ - ಚಿಕ್ಕಬಳ್ಳಾಪುರ ಎರಡೂ ಜಿಲ್ಲೆಗಳಿಂದ 2.50 ಲಕ್ಷ ಲೀಟರ್ ನಷ್ಟು ಹಾಲು ಹೆಚ್ಚಳವಾಗಿದೆ. ಹಾಲಿನ ಶೇಖರಣೆ ಹೆಚ್ಚಿಗೆ ಹಾಗೂ ಒಕ್ಕೂಟದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೋಚಿಮುಲ್ ಈ ನಿರ್ಧಾರ ಕೈಗೊಂಡಿದೆ. ಕೋಚಿಮುಲ್ ನಿರ್ಧಾರದಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದನ್ನೂ ವೀಕ್ಷಿಸಿ:  ವಾಣಿಜ್ಯನಗರಿಯಲ್ಲಿ ಕ್ರಿಕೆಟ್‌ ಪ್ರೇಮಿಗಳ ಸಂಭ್ರಮ: ಮುಂಬೈ ಬೀದಿಗಳಲ್ಲಿ ಅಭಿಮಾನಿಗಳ ಹರ್ಷೋದ್ಘಾರ