31 ವರ್ಷದ ಹಿಂದೆ ರೈತರ ಜಮೀನು ಭೂಸ್ವಾಧೀನ: ಏಕಾಏಕಿ ಬಡವರ ಮನೆ ನೆಲಸಮಗೊಳಿಸಿದ KIADB

Oct 28, 2023, 10:43 AM IST

ಮನೆ ಮುಂದೆ ಜೆಸಿಬಿಗಳ ಘರ್ಜನೆ. ಕಷ್ಟಪಟ್ಟು ಕಟ್ಟಿಕೊಂಡಿದ್ದ ಮನೆಗಳು(Houses) ನೆಲಸಮ. ದಿಕ್ಕು ತೋಚದೆ ಕಂಗಾಲಾದ ಕುಟುಂಬ. ಈ ದೃಶ್ಯ ಕಂಡುಬಂದಿದ್ದು ಧಾರವಾಡದ(Dharwad) ಮುಮ್ಮಿಗಟ್ಟಿ ಗ್ರಾಮದಲ್ಲಿ. 31 ವರ್ಷಗಳ ಹಿಂದೆ ಕೆಐಎಡಿಬಿ ಇಲಾಖೆ ಮುಮ್ಮಿಗಟ್ಟಿ ಗ್ರಾಮದ ರೈತ ರಾಮಸಿಂಗ್ ಎಂಬುವರ 16 ಎಕರೆ 38 ಗುಂಟೆ ಜಮೀನನ್ನ ಸ್ವಾಧೀನ ಪಡಿಸಿಕೊಂಡಿತ್ತು. ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ನಿವೇಶನಗಳಿಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಕೆಐಎಡಿಬಿ(KIADB) ಭೂಸ್ವಾಧೀನ ಮಾಡಿಕೊಂಡ 7 ವರ್ಷದೊಳಗೆ ಕಾಮಗಾರಿ ಕೈಗೆತ್ತಿಕೊಳ್ಬೇಕು ಅನ್ನೋ ಆದೇಶವಿದೆ. ಆದರೆ 3 ದಶಕಗಳು ಕಳೆದರೂ ಯಾವುದೇ ಡೆವೆಲಪ್ ಮಾಡಿಲ್ಲ. ಹೀಗಾಗಿ ನಮ್ಮ ಜಮೀನು ನಮಗೆ ಬೇಕು ಎಂದು ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್‌ಗೆ(Farmers) ರಿಟ್ ಅರ್ಜಿ ಹಾಕಿದ್ದಾರೆ. ಆದ್ರೆ ಈಗ ಏಕಾಏಕಿ ಯಾವುದೇ ನೋಟಿಸ್ ಕೂಡ ನೀಡದೇ ಕೆಐಎಡಿಬಿ ಅಧಿಕಾರಿಗಳು ಜೆಸಿಬಿ ನುಗ್ಗಿಸಿ ಮನೆಗಳನ್ನ ನೆಲಸಮ ಮಾಡಿದ್ದಾರೆ. ನಮ್ಮ ಜಮೀನು ನಮಗೆ ಬೇಕು ಎಂದು ರೈತರು ಈಗಾಗಲೇ ಕೋರ್ಟ್ ಮೆಟ್ಟಿಲೇರಿದ್ದಾರೆ.. ಕೇಸ್ ಕೋರ್ಟ್‌ನಲ್ಲಿ ಇದ್ದರೂ ಈಗ ಕೆಐಎಡಿಬಿ ಅಧಿಕಾರಿಗಳು ಏಕಾಏಕಿ ಜೆಸಿಬಿ ನುಗ್ಗಿಸಿ ಎರಡು ಮನೆಗಳನ್ನು ನೆಲಸಮ ಮಾಡಿದ್ದಾರೆ.. ಇದರಲ್ಲಿ ಒಂದು ಅಂಗವಿಕಲನ ಕುಟುಂಬ. ಎರಡು ಮನೆ ನೆಲಸಮ ಮಾಡಿದ ಅಧಿಕಾರಿಗಳು ಇನ್ನೊಂದು ಮನೆ ತೆರವಿಗೂ  ಗಡುವು ಕೊಟ್ಟಿದ್ದಾರಂತೆ. ಇಷ್ಟು ವರ್ಷ ಸುಮ್ಮನಿದ್ದ ಅಧಿಕಾರಿಗಳು ಈಗ ಏಕಾಏಕಿ ಮನೆ ತೆರವು ಮಾಡ್ತಿದ್ದಾರೆ.. ಇದರ ಹಿಂದೆ ಕೆಲ ರಾಜಕಾರಣಿಗಳ ಷಡ್ಯಂತ್ರವಿದೆ ಅನ್ನೋದು ನೊಂದ ಕುಟುಂಬಗಳ ಆರೋಪ. ಕೆಐಎಡಿಬಿ ಅಧಿಕಾರಿಗಳು ನಮ್ಮ ಜಮೀನನ್ನು ವಶಪಡಿಸಿಕೊಂಡು ರಾಜಕೀಯ ಮುಖಂಡರುಗಳಿಗೆ ಬಾರ್ ಆ್ಯಂಡ್ ರೆಸ್ಟೊರೆಂಟ್ ತೆರೆಯಲು ಕೊಡಲು ಪ್ಲಾನ್ ಮಾಡಿದ್ದಾರೆ. ಆದ್ರೆ, ನಮ್ಮ ಜಮೀನು ನಮಗೆ ಬೇಕು, ನಾವು ಜಮೀನು ಬಿಟ್ಟುಕೊಡಲ್ಲ ಎಂದು ರೈತ ಕುಟುಂಬಗಳು ಕಣ್ಣೀರಿಡುತ್ತಿವೆ.

ಇದನ್ನೂ ವೀಕ್ಷಿಸಿ:  ಸ್ಯಾಂಡಲ್‌ವುಡ್‌ನಲ್ಲಿ ರಕ್ತ ಚರಿತ್ರೆಗೆ ರೆಡಿ ನೆಲ್ಸನ್! ಈ ಸಿನಿಮಾ ಕಥೆಯ ಹೀರೋ ಯಾರು ?