KBJNL ಶಿಫ್ಟ್‌ಗೆ ಆದೇಶವಿದ್ರೂ ಎಂಡಿ ಕಳ್ಳಾಟ: ಬೆಂಗಳೂರಿನ ಕಚೇರಿಗೆ ವಿಜಯಪುರ ರೈತರ ಅಲೆದಾಟ

KBJNL ಶಿಫ್ಟ್‌ಗೆ ಆದೇಶವಿದ್ರೂ ಎಂಡಿ ಕಳ್ಳಾಟ: ಬೆಂಗಳೂರಿನ ಕಚೇರಿಗೆ ವಿಜಯಪುರ ರೈತರ ಅಲೆದಾಟ

Published : Sep 02, 2023, 11:02 AM IST

ದೇವರು ವರ ಕೊಟ್ರೂ ಪೂಜಾರಿ ಕೊಡಲ್ಲ ಅಂದಹಾಗೆ ಅಧಿಕಾರಿಗಳ ಕಳ್ಳಾಟ ಮುಂದುವರೆದಿದೆ. ಕೆಬಿಜೆಎನ್ಎಲ್ ಎಂಡಿ ಮೊಂಡುತನದಿಂದ ವಿಜಯಪುರದ ಅನ್ನದಾತರು ನಿತ್ಯ ಪರಿತಪರಿಸುವಂತಾಗಿದೆ.

ವಿಜಯಪುರದ ರೈತರ ಜೀವನಾಡಿ ಆಲಮಟ್ಟಿ ಡ್ಯಾಂ. ಈ ಡ್ಯಾಂ ನಿರ್ಮಾಣಕ್ಕೆ ರೈತರು ತಮ್ಮ ಮನೆ-ಮಠ ಜಮೀನುಗಳನ್ನು ಬಿಟ್ಟುಕೊಟ್ಟಿದ್ರು.. ಡ್ಯಾಂ ನಿರ್ಮಾಣದ ಬಳಿಕ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಸ್ಥಾಪನೆಯಾಯ್ತು.. ಆದರೆ ಕೆಬಿಜೆಎನ್ಎಲ್(KBJNEL) ಕಚೇರಿ ಮಾತ್ರ ಬೆಂಗಳೂರಿನಲ್ಲೇ ಬೇರೂರಿದೆ.. ರೈತರ(Farmer) ಅಲೆದಾಟ ಮುಂದುವರೆದಿದೆ. ಆಡಳಿತಾತ್ಮಕ ದೃಷ್ಟಿಯಿಂದ ಹಿಂದಿನ ಸರ್ಕಾರ, ಕೆಬಿಜೆಎನೆಲ್ ಕಚೇರಿಯನ್ನು ಆಲಮಟ್ಟಿ ಡ್ಯಾಂಗೆ(Alamatta Dam) ಸ್ಥಳಾಂತರಿಸಲು ಆದೇಶಿಸಿತ್ತು. ಆದರೆ ಬೆಂಗಳೂರಿನಲ್ಲಿ(Bengaluru) ಕಾರ್ಯ ನಿರ್ವಹಿಸುತ್ತಿರುವ ಎಂಡಿ ಮಾತ್ರ ಬೆಂಗಳೂರು ಬಿಟ್ಟು ಕದಲುತ್ತಿಲ್ಲ. ಇನ್ನು ರೈತರು ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ರು. ಹೀಗಾಗಿ ಜಲ ಸಂಪನ್ಮೂಲ ಇಲಾಖೆಯ ಸರ್ಕಾರ ಅಧೀನ ಕಾರ್ಯದರ್ಶಿ  ಎಚ್.ಎಂ ಮಂಜುನಾಥ್, 2022 ರಂದು ಬೆಂಗಳೂರಿನ KBJNL ಕಚೇರಿಗಳನ್ನು ಸಿಬ್ಬಂದಿ ಸಮೇತವಾಗಿ ಸ್ಥಳಾಂತರ ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದ್ರು. ಅಂದು ತುರ್ತು ನೊಟೀಸ್ ನೀಡಿದ್ದರೂ ಸಹ ಎಂಡಿ ಆಲಮಟ್ಟಿಯತ್ತ ತಲೆ ಹಾಕಿಲ್ಲ. ಕೆಬಿಜೆಎನ್ಎಲ್ ಕಚೇರಿಯ ಕೆಲಸ ಕಾರ್ಯಗಳಿಗೆ ವಿಜಯಪುರದಿಂದ ರೈತರು ಬೆಂಗಳೂರಿಗೆ ಅಲೆದಾಡುವಂತಾಗಿದೆ. ಬೆಂಗಳೂರು ಬಿಟ್ಟು ಬರದ ಅಧಿಕಾರಿಗಳ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ್ದು, ವಿಧಾನಸಭೆ ಅಧಿವೇಶನ ವೇಳೆ ಈ ವಿಚಾರ ಪ್ರಸ್ತಾಪಿಸೋದಾಗಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಹಾವೇರಿಯಲ್ಲಿ ಬರದ ಪರಿಸ್ಥಿತಿ: ಹನಿ ನೀರಿಗೂ ಸಂಕಷ್ಟ..ಬೆಳೆದ ಬೆಳೆಯೂ ನಾಶ..!

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more