ಸಿಲಿಕಾನ್ ಸಿಟಿಯಲ್ಲಿ ಮೇಳೈಸಿದ ಕರಾವಳಿ ಕಂಬಳ.. ಕೋಣಗಳ ಮಿಂಚಿನ ಓಟಕ್ಕೆ ಬೆಂಗಳೂರಿಗರು ಫಿದಾ !

Nov 27, 2023, 11:35 AM IST

ರಾಜ್ಯ ರಾಜಧಾನಿಯಲ್ಲಿ ಎರಡು ದಿನಗಳ ಕಾಲ ಕರಾವಳಿ ಜನಪ್ರಿಯ ಕಲೆ ಕಂಬಳ(Kambala) ಅದ್ಧೂರಿಯಾಗಿ ಮೇಳೈಸಿದೆ. ಕಂಬಳ ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ಆಗಮಿಸಿದ್ದು. ಕೋಣಗಳ ಮಿಂಚಿನ ಓಟ ಬೆಂಗಳೂರಿಗರ(Bengaluru) ಮೈನವಿರೇಳಿಸುವಂತಿತ್ತು. ಎರಡು ದಿನ ಅರಮನೆ ಮೈದಾನದಲ್ಲಿ(palace grounds) ಕಂಬಳ ನಡೆದಿದೆ. ವೀಕೆಂಡ್ ಬೇರೆ. ಹೀಗಾಗಿ ಸಿಲಿಕಾನ್ ಸಿಟಿ ಮಂದಿಗೆ ಮಸ್ತ್ ಮನರಂಜನೆ. ಮೊದಲ ದಿನ ತಡರಾತ್ರಿವರೆಗೂ ನಡೀತು. ಎರಡನೇ ದಿನ ಬೆಳಗೆಗಯಿಂದಲೇ ಕಂಬಳ ವೀಕ್ಷಣೆಗೆ ಜನಜಂಗುಳಿ. ರಾಜ ಕರೆ.. ಮಹಾರಾಜ ಕರೆಯಲ್ಲಿ ಕೋಣಗಳು ಓಟಕ್ಕಿಳಿದರೆ.. ಸುತ್ತಲೂ ನೆರೆದಿದ್ದ ಜನರ ಶಿಳ್ಳೆ, ಚಪ್ಪಳೆಗಳ ಸುರಿಮಳೆ ಹರಿಯುತ್ತಿತ್ತು. ವೀಕೆಂಡ್ನಲ್ಲಿ ಮಾಲ್, ಸಿನಿಮಾಗಳಲ್ಲಿ ಜನಜಂಗುಳಿ ಇರುತ್ತೆ.. ಆದ್ರೆ, ಈ ವಿಕೆಂಡ್ನಲ್ಲಿ ಕಂಬಳದತ್ತ ಮುಖಮಾಡಿದ್ದಾರೆ. ಇದರ ಜೊತೆಗೆ ಎರಡನೇ ದಿನದ ಕಂಬಳದಲ್ಲಿ ಸಿನಿ ತಾರೆಯರು ಕಾಣಿಸಿಕೊಂಡಿದ್ದು ಕಂಬಳದ ಮೆರಗು ಹೆಚ್ಚಿಸಿತು..ಉಪೇಂದ್ರ, ರಕ್ಷಿತ್ ಶೆಟ್ಟಿ ,ಪೂಜಾ ಹೆಗ್ಡೆ, ಸಂಜನಾ ಗಲ್ರಾನಿ, ರಮೇಶ್ ಅರವಿಂದ್, ಮುಖ್ಯಮಂತ್ರಿ ಚಂದ್ರು ಕರಾವಳಿಯ ಕ್ರೀಡೆ ಕಂಡು ಪುಳಕಿತರಾದ್ರು. ಕರಾವಳಿಯಲ್ಲಿ ಕಂಬಳಗಳು ನಡೆಯುತ್ತಲೇ ಇರುತ್ತವೇ.. ಅಪರೂಪದಲ್ಲೇ ಅಪರೂಪ ಎನ್ನುವಂತೆ ಬೆಂಗಳೂರಲ್ಲಿ ನಡೆದ ಕಂಬಳಕ್ಕೆ ಜನಸಾಮಾನ್ಯರ ಜೊತೆ ರಾಜಕೀಯ ಗಣ್ಯರು ಹಾಜರಾದ್ರು. ಸಿಎಂ ಸೇರಿದಂತೆ ಹಲವು ಕಾಂಗ್ರೆಸ್ಸಿಗರು ಕಂಬಳ ಕಣ್ತುಂಬಿಕೊಂಡರೆ. ಇಂದು ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಿ.ಟಿ ರವಿ, ಅಶ್ವಥ್ ನಾರಾಯಣ್ ಹೀಗೆ ಹಲವು ಬಿಜೆಪಿಗರು ಕಂಬಳ ವೀಕ್ಷಿಸಿದ್ರು.

ಇದನ್ನೂ ವೀಕ್ಷಿಸಿ:  ಸಿಲಿಕಾನ್ ಸಿಟಿಯಲ್ಲಿ ಕೋಣಗಳ ಮೇಳ! ಭರ್ಜರಿಯಾಗಿದೆ ಕರಾವಳಿಯ ಕಂಬಳ..!