ಆರ್‌ಡಿ ಪಾಟೀಲ್‌ ಕೇಸಲ್ಲಿ ನಿರ್ಲಕ್ಷ್ಯ ವಹಿಸಿದ್ರೆ ಕ್ರಮ: ಪೊಲೀಸರಿಗೆ ಪರಂ ವಾರ್ನಿಂಗ್

Nov 7, 2023, 1:02 PM IST

ಇತ್ತೀಚೆಗೆ ನಡೆದಂತಹ ರಾಜ್ಯದ ನಿಗಮ, ಮಂಡಳಿಗಳಲ್ಲಿನ ವಿವಿಧ ಹುದ್ದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದಂತಹ ಲಿಖಿತ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ನಡೆದ ಪರೀಕ್ಷಾ ಅಕ್ರಮದಲ್ಲಿ ತನ್ನ ಹೆಸರು ಪ್ರಸ್ತಾಪವಾಗಿದ್ದಲ್ಲದೆ, ಪೊಲೀಸ್‌ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಲಬುರಗಿಯಿಂದ(Kalaburagi) ಪರಾರಿಯಾಗಿದ್ದ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ್‌(RD Patil) ಸೋಮವಾರ ಕಲಬುರಗಿಯಲ್ಲೇ ದಿಢೀರ್‌ ಪ್ರತ್ಯಕ್ಷನಾದಾಗ, ಈತನ ಚಲನ ವಲನದ ಮೇಲೆ ನಿಗಾ ಇಟ್ಟಿದ್ದ ಕಲಬುರಗಿ ಪೊಲೀಸರು ಈತನ ಬಂಧನಕ್ಕೆ ಮುಂದಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದಾನೆಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿ ಪೊಲೀಸ್ ಆಯುಕ್ತರನ್ನು(Kalaburagi Police Commissioner) ಗೃಹ ಸಚಿವ ಪರಮೇಶ್ವರ್‌ ಕರೆಸಿಕೊಂಡಿದ್ದು, ಈ ಬಗ್ಗೆ ಆರ್‌. ಚೇತನ್‌ ಮಾಹಿತಿಯನ್ನು ನೀಡಿದ್ದಾರೆ. ಗೃಹ ಸಚಿವರ ಸದಾಶಿವನಗರ ನಿವಾಸದಲ್ಲಿ ಭೇಟಿಯಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಆಪರೇಷನ್ ಸುಳಿವು ನೀಡಿದ ಸಿಎಂ: ಜೆಡಿಎಸ್ ಭದ್ರಕೋಟೆಯಲ್ಲೇ ಡಿನ್ನರ್ ಮೀಟಿಂಗ್ !