ಕೋಟ್ಯಾಂತರ ರೂ. ಸ್ಮಾರ್ಟ್ ಸಿಟಿ ಯೋಜನೆ ಕಟ್ಟಡ: ಕಾಂಗ್ರೆಸ್-ಬಿಜೆಪಿ ಪಾಲಿಟಿಕ್ಸ್‌ಗೆ ಬಲಿಯಾದ ಕದ್ರಿ ಫುಡ್ ಕೋರ್ಟ್

Nov 4, 2023, 10:28 AM IST

ಸ್ಮಾರ್ಟ್ ಸಿಟಿ ಯೋಜನೆ(Smart City Project) ಅದೆಷ್ಟೋ ನಗರಗಳ ಅಭಿವೃದ್ಧಿಯ ದಿಕ್ಕನ್ನೇ ಬದಲಿಸಿದ ಯೋಜನೆ ಇದೆ. ಕಡಲ ತಡಿ ಮಂಗಳೂರು(Mangalore) ಕೂಡ ಹಲವು ವಿಚಾರಗಳಲ್ಲಿ ಸ್ಮಾರ್ಟ್ ಟಚ್ ಪಡೆದಿದೆ. ರಸ್ತೆ, ಪಾರ್ಕ್ ಸೇರಿದಂತೆ ಅನೇಕ ಜಾಗಗಳು ಅಭಿವೃದ್ಧಿಯಾಗಿದೆ. ಆದರೆ ಕದ್ರಿ ಪಾರ್ಕ್ ರಸ್ತೆಯ ಫುಡ್ ಕೋರ್ಟ್(Kadri Food Court) ಮಾತ್ರ ಇದಕ್ಕೆಲ್ಲಾ ವ್ಯತಿರಿಕ್ತ. 2023ರ ಮಾರ್ಚ್‌ನಲ್ಲಿ ಬಿಜೆಪಿ(BJP) ಸರ್ಕಾರ ಈ ಫುಡ್‌ ಕೋರ್ಟ್‌ನನ್ನು ಉದ್ಘಾಟಿಸಿತ್ತು. 12 ಕೋಟಿ ವೆಚ್ಚದಲ್ಲಿ 38 ಸ್ಮಾರ್ಟ್ ಸಿಟಿ ಫುಡ್ ಕೋರ್ಟ್ ಕೂಡ ಸಿದ್ಧಾಗಿತ್ತು. ಆದರೆ ಏಳೆಂಟು ತಿಂಗಳು ಕಳೆದರೂ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಉದ್ಯಮಿಯೊಬ್ಬರು ಟೆಂಡರ್ ಮೂಲಕ ಪಡೆದು ವ್ಯಾಪಾರ ಆರಂಭಿಸಲು ಸಿದ್ದತೆ ನಡೆಸಿದ್ದರು. ಆದರೆ ಅಷ್ಟೋತ್ತಿಗೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಕಾರಣಕ್ಕೆ ಎಲ್ಲವೂ ಸ್ಥಗಿತವಾಗಿತ್ತು. ಈಗ ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಹಳೆಯ ಟೆಂಡರ್ ರದ್ದುಗೊಳಿಸಿದ ಆರೋಪ ಕೇಳಿ ಬಂದಿದೆ. ಸದ್ಯ ಕಾಂಗ್ರೆಸ್ ನಾಯಕರ ಆಪ್ತರು ಕೆಲವೊಂದು ದಾಖಲೆ ತಯಾರಿಸಿ ಮಳಿಗೆ ಪಡೆಯಲು ಸಿದ್ದತೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇನ್ನು ಕದ್ರಿ ಪಾರ್ಕ್‌ ಉದ್ಯಾನವನ ರಸ್ತೆ ಮತ್ತು ಹೊರ ಆವರಣದ ಸಮಗ್ರ ಅಭಿವೃದ್ಧಿ ಸುಮಾರು 16 ಕೋ.ಟಿ. ರೂ. ವೆಚ್ಚದಲ್ಲಿ ನಡೆದಿದೆ. 850 ಮೀ. ಉದ್ದದ ಕಾಂಕೀಟ್‌ ರಸ್ತೆ ಎರಡೂ ಬದಿಗಳಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಫುಡ್ ಕೋರ್ಟ್ ಆರಂಭಕ್ಕೆ ಮಾತ್ರ ಉದ್ಘಾಟನೆ ಭಾಗ್ಯ ಬಂದಿಲ್ಲ. ಟೆಂಡರ್ ವಿಚಾರವೇ ಇಷ್ಟೆಲ್ಲಾ ಗೊಂದಲಕ್ಕೆ ಕಾರಣ ಎನ್ನುತ್ತಿದ್ದಾರೆ  ಸ್ಥಳೀಯರು. 

ಇದನ್ನೂ ವೀಕ್ಷಿಸಿ:  ದಸರಾದಲ್ಲಿ ಭಾಗಿಯಾಗಿದ್ದ ಕಲಾವಿದರ ಅಸಮಾಧಾನ: ಸ್ಪರ್ಧೆಯಲ್ಲಿ ಗೆದ್ರೂ ಸಿಗದ ಬಹುಮಾನದ ಮೊತ್ತ !