Dec 8, 2023, 9:50 AM IST
ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ. ಬೆಂಗಳೂರಿನ(Bengaluru) ಐತಿಹಾಸಿಕ ಹಿನ್ನಲೆಯುಳ್ಳ ದೇವಸ್ಥಾನ. ಇಲ್ಲಿ ವರ್ಷಕ್ಕೊಮ್ಮೆ ಕಾರ್ತಿಕ ಸೋಮವಾರದಂದು ನಡೆಯುವ ಕಡಲೆಕಾಯಿ ಪರಿಷೆ(Kadalekayi parishe) ಫೇಮಸ್. ಆದ್ರೆ ಈ ದೇವಾಲಯದ ವಿಮಾನ ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದ್ದು ಭಕ್ತರಲ್ಲಿ ಆತಂಕ ಹುಟ್ಟಿಸಿದೆ. ಕೆಂಪೇಗೌಡರು ಕ್ರಿ.ಶ 5ನೇ ಶತಮಾನದಲ್ಲಿ ಈ ದೇವಾಲಯವನ್ನು ಪುನಶ್ಚೇತನಗೊಳಿಸಿದ್ರು ಅನ್ನೋ ಉಲ್ಲೇಖವಿದೆ. ಸುಮಾರು 100-150 ವರ್ಷಗಳ ಹಿಂದೆ ದೇವಸ್ಥಾನಕ್ಕೆ ಐತಿಹಾಸಿಕ ವಿಮಾನ ಗೋಪುರದ ನಿರ್ಮಾಣ ಮಾಡಲಾಗಿದೆ. ದೇವಾಲಯದ ಮೇಲ್ಭಾಗದಲ್ಲಿ ಅರಳಿ ಗಿಡಗಳು ಬೆಳೆದಿದ್ದು ಅವುಗಳಿಂದಾಗಿ ದೇವಸ್ಥಾನ ಶಿಥಿಲಗೊಳ್ಳುವ ಹಂತದಲ್ಲಿದೆ. ಈ ದೇವಾಲಯವನ್ನು(Temple) ಪ್ರಾಚ್ಯ ವಸ್ತುಗಳ ಪಟ್ಟಿಯಲ್ಲಿ ಸೇರಿಸಲಾಗಿರುವುದರಿಂದ ಇಲಾಖೆಯ ಅನುಮತಿಯ ಹೊರತಾಗಿ ಬೇರೆ ಯಾವುದೇ ಕೆಲಸವನ್ನು ಆಡಳಿತ ಮಂಡಳಿ ಮಾಡುವಂತಿಲ್ಲ. ಆದ್ರೆ ಹಲವು ಬಾರಿ ಪತ್ರ ಬರೆದ್ರೂ ಪುರಾತತ್ವ ಇಲಾಖೆ ಎಚ್ಚೆತ್ತುಕೊಂಡಿಲ್ಲ ಅನ್ನೋದು ದೇವಸ್ಥಾನ ಆಡಳಿತ ಮಂಡಳಿ ಮತ್ತು ಸ್ಥಳೀಯರ ಆರೋಪ. ವಿಮಾನಗೋಪುರ ಶಿಥಲಿಗೊಂಡ ಬಗ್ಗೆ ನಾವು ವರದಿ ಬಿತ್ತರಿಸುತ್ತಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಪುರಾತತ್ವ ಇಲಾಖೆಯ(Department of Archaeology) ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ರು. ಬಳಿಕ ಐತಿಹಾಸಿಕ ವಿಮಾನ ಗೋಪುರವನ್ನು ಸರಿಪಡಿಸುವ ಭರವಸೆ ನೀಡಿದ್ದಾರೆ. ದೊಡ್ಡ ಬಸವಣ್ಣ ದೇವಸ್ಥಾನದ ವಿಮಾನ ಗೋಪುರ ಸರಿಪಡಿಸುವ ಜೊತೆಗೆ ದೇವಸ್ಥಾನಕ್ಕೆ ಸುಣ್ಣ ಬಣ್ಣ ಬಳಿಯುವ ಆಶ್ವಾಸನೆಯೂ ದೊರೆತಿದೆ. ಮುಂದಿನ ಸೋಮವಾರವೇ ಕಡಲೆಕಾಯಿ ಪರಿಷೆ ನಡೆಯಲಿದೆ.
ಇದನ್ನೂ ವೀಕ್ಷಿಸಿ: ಯಶ್19 ಸಿನಿಮಾ ಅನೌನ್ಸ್‌ಗೆ ಕೌಂಟ್‌ಡೌನ್! 11 ದೇಶಗಳಲ್ಲಿ ಸಿನಿಮಾ ಟೈಟಲ್ ರಿವೀಲ್..!