ಮಂಡ್ಯದ ಬೇಬಿ ಬೆಟ್ಟದಲ್ಲಿ ನಡೆದಿದ್ದೆಲ್ಲ ಅಕ್ರಮನಾ ? ಸಿಎಂ ಅಪರ ಕಾರ್ಯದರ್ಶಿ ಸೇರಿ 13 ಅಧಿಕಾರಿಗಳಿಂದ ಗಣಿಗಾರಿಕೆಗೆ ಸಾಥ್?

Jul 14, 2024, 11:40 AM IST

ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆಯಂತೆ. ಅಕ್ರಮ ಕಲ್ಲು ಗಣಿಗಾರಿಕೆ (Illegal mining) ಕರಾಳತೆಯನ್ನು ಲೋಕಾಯುಕ್ತ ವರದಿ ಬಿಚ್ಚಿಟ್ಟಿದೆ. ಬೇಬಿಬೆಟ್ಟ (Baby Betta), ಚಿನಕುರುಳಿ, ಹೊನಗಾನಹಳ್ಳಿ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆದಿದೆ. ಸರ್ಕಾರಕ್ಕೆ ರಾಜಧನ ಪಾವತಿಸದೆ ಅಕ್ರಮ ಕಲ್ಲು ಗಣಿಕಾರಿಕೆ ನಡೆಸಲಾಗಿದೆ. ಲೋಕಾಯುಕ್ತ(Lokayukta) ತನಿಖಾ ವರದಿಯಲ್ಲಿ ಅಧಿಕಾರಿಗಳ ಕಳ್ಳಾಟ ಬಯಲಾಗಿದೆ. ಸಿಎಂ ಅಪರ ಕಾರ್ಯದರ್ಶಿ ಸೇರಿ 13 ಅಧಿಕಾರಿಗಳಿಂದ ಅಕ್ರಮಕ್ಕೆ ಸಾಥ್ ನೀಡಲಾಗಿದೆಯಂತೆ. ಲೋಕಾಯುಕ್ತ ಅಧೀಕ್ಷಕರಿಗೆ ಡಿವೈಎಸ್‌ಪಿ ಸಲ್ಲಿಸಿದ ವರದಿ ಇದನ್ನು ಬಹಿರಂಗ ಪಡಿಸಿದೆ. ವರದಿಯಲ್ಲಿ ಸಿಎಂ ಅಪರ ಕಾರ್ಯದರ್ಶಿ ಜಿಯಾವುಲ್ಲಾ ಹೆಸರು ಉಲ್ಲೇಖ ಮಾಡಲಾಗಿದೆ. 2003-04ನೇ ಸಾಲಿನಿಂದ 2017-18ನೇ ಸಾಲಿನವರೆಗೆ ಗಣಿಗಾರಿಕೆ ನಡೆದಿದೆ. ಕೆಲವು ಸರ್ಕಾರಿ ಅಧಿಕಾರಿಗಳ ಸಹಾಯದಿಂದಲೇ ಅಕ್ರಮ ಗಣಿಗಾರಿಕೆ ನಡೆದಿದೆ ಎನ್ನಲಾಗ್ತಿದೆ. ಜಿಯಾವುಲ್ಲ ಸೇರಿ 13 ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ವಿಸ್ತೃತ ವರದಿ ನೀಡಲಾಗಿದೆ. ಲೋಕಾಯುಕ್ತ ಡಿವೈಎಸ್ಪಿ ತನಿಖಾ ವರದಿಯನ್ನು ರವೀಂದ್ರ ಬಿಡುಗಡೆ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ವಿಜಯನಗರದಲ್ಲಿ ಸಿದ್ದರಾಮಯ್ಯ ಸೈಟ್ ಪಡೆದುಕೊಂಡಿದ್ದೇಕೆ? ಉದ್ದೇಶಪೂರ್ವಕವಾಗಿಯೇ ಜಮೀನು ಪಡೆದ್ರಾ?