ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಹೈಟೆಕ್ ಟಚ್: ಇನ್ಮುಂದೆ ಪಾರ್ಕಿಂಗ್ ಸಮಸ್ಯೆಗೆ ಗುಡ್ ಬೈ

ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಹೈಟೆಕ್ ಟಚ್: ಇನ್ಮುಂದೆ ಪಾರ್ಕಿಂಗ್ ಸಮಸ್ಯೆಗೆ ಗುಡ್ ಬೈ

Published : Oct 02, 2023, 11:00 AM IST

ಯಶವಂತಪುರ ರೈಲ್ವೇ ನಿಲ್ದಾಣಕ್ಕೆ ಬಂದ್ರೆ ಪಾರ್ಕಿಂಗ್ ಎಲ್ಲಪ್ಪ ಮಾಡೋದು ಅಂತ ಯೋಚನೆ ಮಾಡ್ತಿದ್ದೀರಾ. ಇನ್ಮುಂದೆ ಆ ಚಿಂತೆ ಬಿಡಿ. ರೈಲ್ವೇ ನಿಲ್ದಾಣದಲ್ಲಿ ನಿಮ್ಮ ಗಾಡಿಯನ್ನ ಆರಾಮವಾಗಿ ನಿಲ್ಲಿಸಬಹುದು. ಜತೆಗೆ ಸೆಫ್ಟಿ ವಿತ್ ಸೆಕ್ಯುರಿಟಿ ಕೂಡ ಇರುತ್ತೆ. 
 

ಹೈಟೆಕ್ ಆಗ್ತಿರುವ ಯಶವಂತಪುರ ರೈಲ್ವೆ ನಿಲ್ದಾಣ ಪ್ರಯಾಣಿಕರನ್ನ ಸೆಳೆಯುತ್ತಿದೆ. ನಿತ್ಯ ಸಾವಿರಾರು ಜನ ಈ ನಿಲ್ದಾಣದ ಮೂಲಕ ಬೇರೆ ಬೇರೆ ಊರುಗಳಿಗೆ ಸಂಚರಿಸ್ತಾರೆ. ಆದ್ರೆ ಗಾಡಿ‌ ನಿಲ್ಲಿಸಲು ಸರಿಯಾದ ಜಾಗವಿಲ್ಲದೇ ಪ್ರಯಾಣಿಕರು ಪರದಾಡ್ತಿದ್ರು. ಆಟೋ-ಟ್ಯಾಕ್ಸಿ ಚಾಲಕರು ಪಾರ್ಕಿಂಗ್‌ಗಾಗಿಯೇ ಹೆಣಗಾಡ್ತಿದ್ರು. ಹೀಗಾಗಿ ನೈರುತ್ಯ ರೇಲ್ವೆ ಇಲಾಖೆ(South Western Railway) ಈ ಸಮಸ್ಯೆಗೆ ಫುಲ್ ಸ್ಟಾಪ್ ಇಡಲು ಮುಂದಾಗಿದೆ. ರೈಲ್ವೆ ನಿಲ್ದಾಣದಲ್ಲಿ ಹೈಟೆಕ್ ಮಲ್ಟಿ ಲೆವೆಲ್‌ ಪಾರ್ಕಿಂಗ್ ಕಾಂಪ್ಲೆಕ್ಸ್(Hi Tech Multi Level Parking) ನಿರ್ಮಾಣಕ್ಕೆ ಕೈ ಹಾಕಿದೆ. ಕಳೆದ‌ ಎರಡು ತಿಂಗಳಿಂದ ಯಶವಂತಪುರ ರೇಲ್ವೆ ನಿಲ್ದಾಣಕ್ಕೆ(Yeshwanthpur railway station) ಹೈಟೆಕ್ ಟಚ್ ನೀಡುವ ಕೆಲಸ ನಡೆಯುತ್ತಿದೆ. ದಿನದಿಂದ ದಿನಕ್ಕೆ ಯಶವಂತಪುರ ರೈಲ್ವೆ ನಿಲ್ದಾಣದ ಮೂಲಕ ಪ್ರಯಾಣಿಸುವವರ ಸಂಖ್ಯೆಯೂ ಅಧಿಕವಾಗ್ತಿದೆ. ಹೀಗಾಗಿ ಪಾರ್ಕಿಂಗ್ಗೆ ಅನುಕೂಲಕ್ಕಾಗಿ 5 ಹಂತಸ್ತಿನ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲಾಗ್ತಿದೆ. ಏಕಕಾಲಕ್ಕೆ 300 ವಾಹನ ನಿಲುಗಡೆ ಮಾಡಬಹುದಾಗಿದೆ. ಇದೇ ಮೊದಲ ಬಾರಿಗೆ ನೈರುತ್ಯ ರೈಲ್ವೆ ಮಲ್ಟಿ ಲೇವಲ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಿಸ್ತಿದೆ. ಮೊದಲ ಹಂತವಾಗಿ ಪ್ಲಾಟ್ ಫಾರ್ಮ್ ಒಂದರ ಪೂರ್ವ ಭಾಗದಲ್ಲಿ 600 ಚದರ ಅಡಿ ಜಾಗದಲ್ಲಿ ಬಹುಮಹಡಿ ಪಾರ್ಕಿಂಗ್ ಕಾಂಪ್ಲೆಕ್ಸ್ ಕಟ್ಟಲಾಗ್ತಿದೆ. ಗ್ರೌಂಡ್ ಫ್ಲೋರ್ ಸೇರಿ 5 ಮಹಡಿ ಇರಲಿದೆ. 380 ಕೋಟಿ ವೆಚ್ಚದಲ್ಲಿ ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಕೆಲ ತಿಂಗಳಲ್ಲಿ ಕಾಮಗಾರಿ‌ ಮುಗಿಯುವ ನಿರೀಕ್ಷೆಯಿದೆ. ವಾಹನ ಆಗಮನ‌ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ದ್ವಾರ ಕಲ್ಪಿಸಲಾಗ್ತಿದೆ. ಎರಡು ಕಡೆಯೂ ಎಲಿವೇಟರ್ ಅಳವಡಿಕೆ ಮಾಡಲಾಗ್ತಿದೆ. 200 ಬೈಕ್, 100 ಕಾರು ನಿಲ್ಲಿಸಲು ಅವಕಾಶವಿದೆ. 40 ಆಟೋ ನಿಲ್ಲಿಸಲು ಪ್ರತ್ಯೇಕ ಜಾಗ ಕೂಡ ಮಾಡಲಾಗುತ್ತೆ.‌ ಹಾಗೆಯೇ 250 ಚದರ ಅಡಿ ಜಾಗ ಓಲಾ-ಉಬರ್ ಪಾರ್ಕಿಂಗ್ಗೆ  ಮೀಸಲಿಡಲಾಗಿದೆ.

ಇದನ್ನೂ ವೀಕ್ಷಿಸಿ:  ಬೆಳ್ಳಿ ತೆರೆಗೆ ಬರ್ತಾರಂತೆ ಶ್ರುತಿ ಪುತ್ರಿ ಗೌರಿ: ಉಪ್ಪಿ ಮಗಳ ಗ್ರ್ಯಾಂಡ್ ಎಂಟ್ರಿ ಯಾವಾಗ..?

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
Read more