script type="application/ld+json"> { "@context": "https://schema.org", "@type": "WebSite", "name": "Asianet Suvarna News", "url": "https://kannada.asianetnews.com", "potentialAction": { "@type": "SearchAction", "target": "https://kannada.asianetnews.com/search?topic={search_term_string}", "query-input": "required name=search_term_string" } }

ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆ: ಸನ್ನತಿ ಬ್ಯಾರೇಜ್‌ನಿಂದ 1.5 ಲಕ್ಷ‌ ಕ್ಯೂಸೆಕ್ಸ್‌ ನೀರು ಬಿಡುಗಡೆ

Sep 29, 2021, 1:58 PM IST

ಕಲಬುರಗಿ(ಸೆ.29): ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹೀಗಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸನ್ನತಿ ಬ್ಯಾರೇಜ್‌ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಸನ್ನತಿ ಬ್ಯಾರೇಜ್‌ನಿಂದ 1.5 ಲಕ್ಷ‌ ಕ್ಯೂಸೆಕ್ಸ್‌ ನೀರನ್ನ ಭೀಮಾ ನದಿಗೆ ಬಿಡುಗಡೆ ಮಾಡಲಾಗಿದೆ. ಹಳ್ಳ-ಕೊಳ್ಳದಿಂದ ಭೀಮಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ನದಿಗೆ ಅಧಿಕ ನೀರು ಬಿಟ್ಟಿರುವ ಹಿನ್ನಲೆ ನದಿ ಪಾತ್ರದ ದೇಗುಲಗಳು ಜಲಾವೃತವಾಗಿವೆ. ನದಿ ದಡದಲ್ಲಿದ್ದ ಕಂಗಾಳೇಶ್ವರ ಹಾಗೂ ವೀರಾಂಜನೇಯ ದೇಗುಲ ಸಂಪೂರ್ಣ ಮುಳುಗಡೆಯಾಗಿವೆ. ನದಿ ಪಾತ್ರಕ್ಕೆ ಜನ ಮತ್ತು ಜಾನುವಾರು ತೆರಳದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ರಾಯಚೂರು: ಪತ್ನಿ, ನಾದಿನಿ, ಅತ್ತೆಯನ್ನ ಕೊಂದ ಅಳಿಯ, ಕಾರಣ?