Jun 2, 2024, 12:42 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ(Bengaluru) ಮಳೆ ಅವಾಂತರವನ್ನು ಸೃಷ್ಟಿಸಿದ್ದು, ರಸ್ತೆಗಳು ನದಿಯಂತೆ ಬದಲಾಗಿವೆ. ಸಂಜೆ ಸುರಿದ ಮಳೆಯಿಂದ ಇಡಿ ಏರಿಯಾ ಜಾಲಾವೃತವಾಗಿದೆ. ಯಲಚೇನಹಳ್ಳಿಯಲ್ಲಿ ಮಳೆ(Rain) ನೀರು ಮನೆಗಳಿಗೆ ನುಗ್ಗಿದೆ. ಮನೆಯ ಮುಂದೆ ನೀರು ಹರಿದ್ರು ಕೇಳೋರಿಲ್ಲದಂತಾಗಿದೆ. ಐದಾರು ಅಡಿಯಷ್ಟು ನೀರು ಹರಿದ್ರು ಯಾವ ಅಧಿಕಾರಿಗಳು ಇತ್ತ ಗಮನಹರಿಸಿಲ್ಲ. ನೀರಿನಲ್ಲೇ ಮನೆಯ ಸಾಮಗ್ರಿಗಳು ಹರಿದು ಹೋಗುತ್ತಿವೆ. ಕೊಳೆತ ಪ್ಲಾಸ್ಟಿಕ್‌ಗಳು ನೀರಿನಲ್ಲಿ ಹರಿದು ಬರುತ್ತಿವೆ. ವಾಸನೆ ತಡೆಯಲಾರದೆ ಬೇರೆ ಕಡೆ ನಿವಾಸಿಗಳು ತೆರಳುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: ಈ ದೇಶ ಉಳಿಯಬೇಕಿದ್ರೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಅಷ್ಟೇ: ಹೆಚ್.ಡಿ.ರೇವಣ್ಣ