Jan 30, 2024, 1:13 PM IST
ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ(Hanuman flag) ವಿವಾದ ಪ್ರಕರಣದಲ್ಲಿ ಯಾರದ್ದು ಸರಿ ಇದೆ. ಯಾರದ್ದು ತಪ್ಪು ಎಂಬ ಚರ್ಚೆ ಜೋರಾಗಿದೆ. ಕೆರಗೋಡು(Keragodu) ಗ್ರಾಮಸ್ಥರು ಅನುಮತಿ ಪಡೆದದ್ದೆ ಒಂದು, ಮಾಡಿದ್ದೆ ಇನ್ನೊಂದಾ ಎಂಬ ಪ್ರಶ್ನೆ ಸಹ ಮೂಡಿದೆ. ನಕಲಿ ದಾಖಲೆ ಸೃಷ್ಟಿಸಿ ಧ್ವಜ ತೆರವು ಸಮರ್ಥಿಸಿಕೊಳ್ತಾ ಕಾಂಗ್ರೆಸ್(Congress) ಸರ್ಕಾರ ಎಂಬ ಪ್ರಶ್ನೆ ಎದ್ದಿದೆ. ಹನುಮಧ್ವಜ ಪ್ರಕರಣ ಕುರಿತ ಪರ-ವಿರೋಧದ ದಾಖಲೆ ಬಿಡುಗಡೆಯಾಗಿದೆ. ಗ್ರಾ.ಪಂ ನಡಾವಳಿ ಪತ್ರ ಬಿಡುಗಡೆ ಮಾಡಿ ಅನುಮತಿ ಇತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಹನುಮಧ್ವಜ ಹಾರಾಟದ ಬಗ್ಗೆ ಗ್ರಾ.ಪಂನ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿತಂತೆ. 22 ಸದಸ್ಯ ಬಲದ ಪೈಕಿ 18 ಸದಸ್ಯರು ಹನುಮಧ್ವಜಕ್ಕೆ ಬೆಂಬಲ ನೀಡಿದ್ದಾರೆ. ರಾಷ್ಟ್ರೀಯ, ನಾಡ ಹಬ್ಬ ಹೊರತುಪಡಿಸಿ ಉಳಿದೆಲ್ಲಾ ದಿನ ಹನುಮಧ್ವಜಕ್ಕೆ ಅವಕಾಶ ನೀಡಲಾಗಿತ್ತು. ಹನುಮಧ್ವಜಕ್ಕೆ ಅವಕಾಶ ಎಂದು ನಡಾವಳಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಇದನ್ನೂ ವೀಕ್ಷಿಸಿ: ಮಂಡ್ಯ ಹೋರಾಟ ರಾಜಕೀಯ ಲೆಕ್ಕಾಚಾರ..! ಹಿಂದುತ್ವದ ಮೂಲಕ ಎಂಟ್ರಿ ಕೊಡಲು ಕುಮಾರಸ್ವಾಮಿ ಸಜ್ಜು..?