News Hour: ಟಿಪ್ಪು ಸಹಚರನಿಂದ ಮಳಲಿ ಮಠ ನಾಶ? ನೀಲಕಂಠ ವೈಭವ ಪುಸ್ತಕದಲ್ಲಿರುವ ಸತ್ಯವೇನು?

News Hour: ಟಿಪ್ಪು ಸಹಚರನಿಂದ ಮಳಲಿ ಮಠ ನಾಶ? ನೀಲಕಂಠ ವೈಭವ ಪುಸ್ತಕದಲ್ಲಿರುವ ಸತ್ಯವೇನು?

Published : May 27, 2022, 12:06 AM IST

ಟಿಪ್ಪು ಸಹಚರ ಶೇಖ್‌ ಆಲಿ ನವಾಬ ಮಳಲಿ ಮಠದ ಮೇಲೂ ದಾಳಿ ನಡೆಸಿದ್ದನು ಎನ್ನುವ ವಿಚಾರ 2000ನೇ ಇಸವಿಯಲ್ಲಿ ಪ್ರಕಟಗೊಂಡ ನೀಲಕಂಠ ವೈಭವ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ

ಮಂಗಳೂರು (ಮೇ 26): ಮಳಲಿ ಮಸೀದಿಯಲ್ಲಿ (Malali Masjid) ಗೋಚರವಾಗಿರುವುದು ಮಠವೋ ಅಥವಾ ದೇವಸ್ಥಾನವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮುಂದುವರಿಯುತ್ತಿರುವಂತೆಯೇ ಟಿಪ್ಪು ಸುಲ್ತಾನ್‌ ಸಹಚರನ ದಾಳಿಯಿಂದ ಮಳಲಿ ಮಠ ನಾಶವಾದ ಬಗ್ಗೆ ಜಂಗಮ ಮಠದ ಪುಸ್ತಕದಲ್ಲಿ ಸ್ಫೋಟಕ ಅಂಶವೊಂದು ಬಹಿರಂಗವಾಗಿದೆ.

ಮಳಲಿ ಮಸೀದಿ ಜಾಗದಲ್ಲಿದ್ದ ಶೈವ ಸಂಪ್ರದಾಯದ ಮಠಕ್ಕೆ ಟಿಪ್ಪು ಸಹಚರ ದಾಳಿ ನಡೆಸಿದ್ದ. ಟಿಪ್ಪು ಸಹಚರ ಶೇಖ್‌ ಆಲಿ ನವಾಬನಿಂದ ಮಳಲಿ ಮಠದ ಮೇಲೂ ದಾಳಿ ನಡೆಸಿದ್ದನು ಎನ್ನುವ ವಿಚಾರ 2000ನೇ ಇಸವಿಯಲ್ಲಿ ಪ್ರಕಟಗೊಂಡ ನೀಲಕಂಠ ವೈಭವ ಪುಸ್ತಕದಲ್ಲಿ ಟಿಪ್ಪು ಸಹಚರನ ದಾಳಿಯ ಬಗ್ಗೆ ಉಲ್ಲೇಖಿಸಲಾಗಿದೆ. ಈ ಪುಸ್ತಕ ಗುರುಪುರದ ಜಂಗಮ ಲಿಂಗಾಯತ ಮಠದಿಂದ ಪ್ರಕಟಗೊಂಡಿದೆ.ಕೆಳದಿ ಅರಸರ ಬಳಿಕ ಮಳಲಿ ಪ್ರಾಂತ್ಯದಲ್ಲಿ ಟಿಪ್ಪು ಆಳ್ವಿಕೆ ನಡೆಸಿದ್ದ. ಈ ವೇಳೆ ಟಿಪ್ಪು ಸಹಚರನಿಂದ ಲಿಂಗಾಯತ ಜಂಗಮ ಮಠದ ಹಲವು ಮಠಗಳ ಮೇಲೆ ದಾಳಿ ನಡೆದಿದೆ.

ಇದನ್ನೂ ಓದಿ: ಟಿಪ್ಪು ಸುಲ್ತಾನ್ ದಾಳಿಗೆ ತುತ್ತಾಯ್ತಾ ಮಳಲಿ ಮಠ?: ಗುರುಪುರ ಮಠಕ್ಕೂ ಮಸೀದಿ ವಾಸ್ತುಶಿಲ್ಪಕ್ಕೂ ಸಾಮ್ಯತೆ!

ಮಂಗಳೂರಿನಲ್ಲಿ 48 ಲಿಂಗಾಯತ ಮಠಗಳ ಪೈಕಿ 21 ಮಠಗಳು ನಾಶವಾಗಿವೆ. ಇದೇ ದಾಳಿಗೆ ತುತ್ತಾಗಿ ಮಸೀದಿ ಜಾಗದ ಲಿಂಗಾಯತ ಮಠವೂ ನಾಶವಾದ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆ. ನವೀಕರಣ ವೇಳೆ ಮಳಲಿ ಮಸೀದಿಯಲ್ಲಿ ಪತ್ತೆಯಾಗಿದ್ದು ಲಿಂಗಾಯತ ಸಂಪ್ರದಾಯಕ್ಕೆ ಸೇರಿದ ಶೈವ ಮಠ ಎಂಬ ಚರ್ಚೆಗೆ ಗುರುಪುರದ ಜಂಗಮ ಲಿಂಗಾಯತ ಮಠದ ರುದ್ರಮುನಿ ಸ್ವಾಮೀಜಿ ಈ ಸ್ಪಷ್ಟನೆ ನೀಡುತ್ತಿದ್ದಾರೆ.

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more