Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು  ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?

Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?

Published : Dec 18, 2025, 07:55 PM IST

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂಬ ವಿಚಾರ ವಿಧಾನಸಭೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು (ಡಿ.18): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆಯ ಹಣ ಪಾವತಿಯಲ್ಲಿನ ವ್ಯತ್ಯಯ ಈಗ ವಿಧಾನಸಭೆಯ ರಣರಂಗದಲ್ಲಿ ದೊಡ್ಡ ಮಟ್ಟದ ಜಟಾಪಟಿಗೆ ಕಾರಣವಾಗಿದೆ. ಕಳೆದ ಎರಡು ತಿಂಗಳ (ಫೆಬ್ರವರಿ ಮತ್ತು ಮಾರ್ಚ್‌) ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂಬ ವಿಚಾರವಾಗಿ ವಿರೋಧ ಪಕ್ಷ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಅಂತಿಮವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸದನದಲ್ಲಿ ತಪ್ಪು ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸಿದ್ದಾರೆ.

Gruha Lakshmi Scheme: ಗೃಹಲಕ್ಷ್ಮೀ ಹಣವನ್ನು ಕನಕ ಪಂಚಮಿ ಕಾರ್ಯಕ್ರಮಕ್ಕೆ ದಾನ ಮಾಡಿದ ಬಾದಾಮಿ ಮಹಿಳೆ!

ಬುಧವಾರ ಸದನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ನಾಯಕರು ಗೃಹಲಕ್ಷ್ಮಿ ಯೋಜನೆಯ ಲೆಕ್ಕಾಚಾರದ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರು. "ಎಲ್ಲಾ ಕಂತುಗಳ ಹಣ ಬಿಡುಗಡೆಯಾಗಿದೆ" ಎಂದು ಈ ಹಿಂದೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ನೀಡಿದ್ದ ಹೇಳಿಕೆಯನ್ನು ಸುಳ್ಳು ಎಂದು ಕರೆದ ವಿಪಕ್ಷ ನಾಯಕರು, ದಾಖಲೆಗಳನ್ನು ಪ್ರದರ್ಶಿಸಿ ಸರ್ಕಾರಕ್ಕೆ ಡಿಚ್ಚಿ ನೀಡಿದರು. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಸುಮಾರು 5,000 ಕೋಟಿ ರೂಪಾಯಿ ಹಣ ಇನ್ನೂ ಬಾಕಿ ಇರುವುದನ್ನು ಉಲ್ಲೇಖಿಸಿ 'ಕಮಲ ಪಡೆ' ಮುಗಿಬಿದ್ದಿತು.

 

 

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more