ಜೈಲಿಗೆ ಹೋಗುತ್ತಿದ್ದಂತೆ ದರ್ಶನ್‌ಗೆ ಆರೋಗ್ಯ ಕೆಟ್ಟಿದ್ದೇಕೆ..? ನಟನ ಬೇಡಿಕೆ ಒಪ್ಪದಂತೆ ಪೊಲೀಸ್ ಕೊಟ್ಟ ಕಾರಣವೇನು..?

ಜೈಲಿಗೆ ಹೋಗುತ್ತಿದ್ದಂತೆ ದರ್ಶನ್‌ಗೆ ಆರೋಗ್ಯ ಕೆಟ್ಟಿದ್ದೇಕೆ..? ನಟನ ಬೇಡಿಕೆ ಒಪ್ಪದಂತೆ ಪೊಲೀಸ್ ಕೊಟ್ಟ ಕಾರಣವೇನು..?

Published : Jul 19, 2024, 09:09 AM IST

ನಟ ದರ್ಶನ್‌ಗೆ ಅವಕಾಶ ಕೊಟ್ಟರೆ ಬೇರೆಯವರು ಕೇಳುವ ಸಾಧ್ಯತೆ
ಜೈಲಿನ ನಿಯಮಗಳ ಪ್ರಕಾರ ಆರೋಪಿ ಜೈಲಿನ ಬಟ್ಟೆ ಹಾಕಬೇಕು
ಕಾನೂನಿನ ಕಣ್ಣಿನಲ್ಲಿ ದರ್ಶನ್ ಕೂಡ ಇತರೇ ಆರೋಪಿಗಳಿಂತೆಯೇ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ(Renukaswamy murder case) ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ (Darshan) & ಗ್ಯಾಂಗ್‌ಗೆ ಮತ್ತೆ ನ್ಯಾಯಾಂಗ ಬಂಧನ (Judicial custody) ವಿಸ್ತರಣೆಯಾಗಿದೆ. ಮುಂದಿನ 14 ದಿನಗಳ ಕಾಲ, ಅಂದ್ರೆ ಆಗಸ್ಟ್ 1ರ ವರೆಗೂ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಹಾಗೆನೆ ಆರೋಪಿ ದರ್ಶನ್ ಇಟ್ಟಿದ್ದ ಕೆಲ ಬೇಡಿಕೆಗಳನ್ನು ಪೊಲೀಸರು(Police) ಪ್ರಶ್ನೆ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಪವಿತ್ರಾ ಗೌಡ(Pavitra gowda) ಮತ್ತು ದರ್ಶನ್ ಸೇರಿದಂತೆ ಒಟ್ಟು ಹದಿನೇಳು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇವರನ್ನೆಲ್ಲ ಕಳೆದ ತಿಂಗಳು 22 ರಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಎರಡು ಬಾರಿ ನ್ಯಾಯಾಂಗ ಬಂಧನ ವಿಸ್ತರಣೆ ನಂತರ ಇಂದು ಮತ್ತೆ ಈ ಆರೋಪಿಗಳ ನ್ಯಾಯಾಂಗ ಬಂಧನ ಮುಕ್ತಾಯಗೊಂಡಿತ್ತು. ಮತ್ತೆ ಈ 17 ಆರೋಪಿಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಲಾಗಿದೆ. ವಿಚಾರಣೆಯ ಮುಂದಿನ ದಿನಾಂಕವನ್ನು ಆಗಸ್ಟ್ 1ನೇ ತಾರೀಕಿಗೆ ಮುಂದೂಡಲಾಗಿದೆ. ಅಂದ್ರೆ ಮತ್ತೆ 14 ದಿನಗಳ ಕಾಲ ದರ್ಶನ್ & ಗ್ಯಾಂಗ್ ಮತ್ತೆ ನ್ಯಾಯಾಂಗ ಬಂಧನದಲ್ಲೇ ಇರಲಿದ್ದಾರೆ. ದರ್ಶನ್ ಕೆಲ ದಿನಗಳ ಹಿಂದೆ ಹಲವು ಬೇಡಿಕೆಗಳನ್ನಿಟ್ಟು ಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ದರ್ಶನ್ ಈ ಹಿಂದೆ ಯಾವೆಲ್ಲ ಬೇಡಿಕೆಗಳನ್ನಿಟ್ಟುದ್ದರು ಅನ್ನೋದನ್ನು ನೋಡೋದಾದ್ರೆ, ದರ್ಶನ್‌ಗೆ  ಮನೆ ಊಟ ಬೇಕೆಂದು ಅರ್ಜಿ ಸಲ್ಲಿಸಿದ್ದರು. ಜೈಲಿನಲ್ಲಿ ಕೊಡುವ ಊಟ ದರ್ಶನ್‌ಗೆ ಇಷ್ಟವಾಗುತ್ತಿಲ್ಲವಂತೆ. ದರ್ಶನ್ ಇಲ್ಲಿಯವರೆಗೂ ಜೈಲಿನ ಊಟ ಮಾಡಿದ್ದರಿಂದಾಗಿ ಹೊಟ್ಟೆ ಕೆಟ್ಟಿದೆಯಂತೆ. ವಾಂತಿ ಭೇದಿಯಾಗುತ್ತಿದೆಯಂತೆ. ಇದರಿಂದಾಗಿ ಆರೋಗ್ಯದಲ್ಲೂ ಒಂದಿಷ್ಟು ವ್ಯತ್ಯಾಸವಾಗಿದೆಯಂತೆ. ಹೀಗಾಗಿ ಜೈಲುಟ ಮಾಡಿ ತುಂಬಾನೇ ತೊಂದರೆ ಅನುಭವಿಸುತ್ತಿರುವ ದರ್ಶನ್ ಜೈಲಿನಲ್ಲಿ ಮನೆ ಊಟಕ್ಕೆ ಅವಕಾಶ ಕೋರಿದ್ದರು. ಆದ್ರೆ ದರ್ಶನ್ ಇಟ್ಟ ಈ ಬೇಡಿಕೆಯನ್ನು ಸರ್ಕಾರದ ಪರ ವಕೀಲರು ಮನೆಯೂಟ ಕೊಡ ಕೂಡದೆಂದು ವಾದ ಮಾಡಿದ್ದಾರೆ. 

ಇದನ್ನೂ ವೀಕ್ಷಿಸಿ:  ಸಿಎಂ ಅನುಭವಿಸಿದ್ದ ಪಂಚೆ ಅವಮಾನದ ಆ ಕಥೆ ಏನು? ಪಂಚೆ ಹಾಕೋರೆಲ್ಲಾ ಬಡವರಲ್ಲ, ಪ್ಯಾಂಟ್ ಹಾಕೋರೆಲ್ಲಾ ಶ್ರೀಮಂತರಲ್ಲ..!

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
25:38ರೌಡಿ ಶೀಟರ್‌ಗೆ ಹೆಂಡತಿ ಕಂಡರೆ 'ಫಿಯರ್': ಮಚ್ಚು ಹಿಡಿದು ಗಂಡನನ್ನೇ ಚೇಸ್ ಮಾಡಿದ ಕಿರಾತಕಿ ಹೆಂಡತಿ!
25:26Suvarna Special: ಏನದು 20 ವರ್ಷಗಳ ಸೇಡಿನ ಕಥೆ? ನಾರಾ ರೆಡ್ಡಿ, ಗಾಲಿ ರೆಡ್ಡಿ..ದಶಕಗಳ ದ್ವೇಷಚರಿತ್ರೆ!
25:27ಕಳ್ಳರ ಗೋಲ್ಡ್ ಬ್ಯುಸಿನೆಸ್​​: ಕಳ್ಳರು ಸಿಗಲ್ಲ, ಸಿಕ್ಕಿದ್ರೂ ಮಾಲು ಇರೊಲ್ಲ! 5 ರಾಬರಿ ಕೇಸ್, ಪೊಲೀಸರು ತನಿಖೆ ಠುಸ್!
20:21ಚಿತ್ರದುರ್ಗ ಬಸ್ ಅಗ್ನಿ ದುರಂತ: ಚಲಿಸುವ ಚಿತಾಗಾರ 'ಸ್ಲೀಪರ್ ಬಸ್‌'ಗಳ ಕರಾಳ ಸತ್ಯ ಬಯಲು
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
19:51ತಾನೇ ಕಟ್ಟಿದ ಕೋಟೆಯಿಂದ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು! ಹೇಗಿತ್ತು ಗೊತ್ತಾ ಹಿಂದೂ ಹೋರಾಟಗಾರನ ರಣ ಕರಾಳ ಚರಿತ್ರೆ?
21:55Suvarna Special: ಲಕ್ಷ್ಮೀ ಲೆಕ್ಕ..! ಎಲ್ಲಿ ಹೋಯ್ತು ಎರಡು ತಿಂಗಳ ಗೃಹಲಕ್ಷ್ಮೀ ದುಡ್ಡು..?
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!