ಗಾಯಿತ್ರಿ ಸಿದ್ದೇಶ್ವರ್ ಸೋಲಿಗೆ ಲಗಾನ್ ಟೀಮ್ ನೇರ ಕಾರಣ: ರೇಣುಕಾಚಾರ್ಯ ವಿರುದ್ಧ ಸಿದ್ದೇಶ್ವರ್ ಟೀಮ್ ವಾಗ್ದಾಳಿ

ಗಾಯಿತ್ರಿ ಸಿದ್ದೇಶ್ವರ್ ಸೋಲಿಗೆ ಲಗಾನ್ ಟೀಮ್ ನೇರ ಕಾರಣ: ರೇಣುಕಾಚಾರ್ಯ ವಿರುದ್ಧ ಸಿದ್ದೇಶ್ವರ್ ಟೀಮ್ ವಾಗ್ದಾಳಿ

Published : Jul 21, 2024, 03:54 PM IST

ರೇಣುಕಾಚಾರ್ಯ ಪ್ರಚಾರ ಪ್ರಿಯ, ಟಿಆರ್‌ಪಿ ರಾಜಕಾರಣಿ. ಮೊಳಕಾಲೂದ್ಧದ ನೀರಲ್ಲಿ ಬೊಟ್ ಓಡಿಸಿ ಕುಖ್ಯಾತಿ ಪಡೆದ ವ್ಯಕ್ತಿ ಎಂದು  ಜಿಎಂ ಸಿದ್ದೇಶ್ವರ್ ಟೀಮ್ ವಾಗ್ದಾಳಿ ನಡೆಸಿದೆ.

ದಾವಣಗೆರೆ: ಮಾಜಿ ಸಚಿವ ರೇಣುಕಾಚಾರ್ಯ (Renukacharya) ಅಂಡ್ ಟೀಮ್ ವಿರುದ್ಧ ಜಿಎಂ ಸಿದ್ದೇಶ್ವರ್ (GM Siddeshwara) ಟೀಮ್ ವಾಗ್ದಾಳಿ ನಡೆಸಿದೆ. ದಾವಣಗೆರೆ (Davanagere) ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್ (Gayathri Siddeshwar) ಸೋಲಿಗೆ ಲಗಾನ್ ಟೀಮ್ ನೇರ ಕಾರಣವಾಗಿದೆ. ರೇಣುಕಾಚಾರ್ಯ ಪ್ರಚಾರ ಪ್ರಿಯ, ಟಿಆರ್‌ಪಿ ರಾಜಕಾರಣಿ. ಮೊಳಕಾಲೂದ್ಧದ ನೀರಲ್ಲಿ ಬೊಟ್ ಓಡಿಸಿ ಕುಖ್ಯಾತಿ ಪಡೆದ ವ್ಯಕ್ತಿ. ಅವಕಾಶವಾದಿ ರಾಜಕಾರಣಿ ಎಂದು ರೇಣುಕಾಚಾರ್ಯ ವಿರುದ್ದ ಮಾಜಿ ಜಿಲ್ಲಾ ಅಧ್ಯಕ್ಷ ವೀರೇಶ್ ಹನಗವಾಡಿ ಸೇರಿದಂತೆ ಹಲವು ನಾಯಕರು ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಜೋಶಿ, ಸಂತೋಷ ಜೀ ಹಲವು ನಾಯಕರ ವಿರುದ್ಧ ಮಾತಾಡಿದ್ದಾರೆ. ನಮ್ಮ ಅಭ್ಯರ್ಥಿ ಹೊನ್ನಾಳಿಗೆ ಹೋದಾಗ ಹಿಂಬಾಲಕರಿಂದ ಗೊಂದಲ ಸೃಷ್ಟಿ. ನಮಗೆ ನಮ್ಮ ಪಕ್ಷದ ವರಿಷ್ಟರ ಬಗ್ಗೆ ಅಸಮಾಧಾನ ಆಗುತ್ತಿದೆ. ಇಂತವರನ್ನು ಸಹಿಸಿಕೊಂಡಿದ್ದರಲ್ಲ ಅಂತಾ ಕಾರ್ಯಕರ್ತರಿಗೆ ಬೇಸರ ಆಗಿದೆ. ಮೋದಿ ಮತ್ತು ಕಾರ್ಯಕರ್ತರ ಶ್ರಮದಿಂದ ನಮ್ಮ ಅಭ್ಯರ್ಥಿ 6 ಲಕ್ಷಕ್ಕೂ ಅಧಿಕ ಮತ ಪಡೆದಿದ್ದಾರೆ. ದಾವಣಗೆರೆ ಸೋಲಿಗೆ ಸ್ವಯಂ ಕೃತ ಅಪರಾಧ ಕಾರಣ ಅಂತಾ ಹೇಳುತ್ತಿದ್ದೀರಿ. ವಿಧಾನಸಭೆ ಚುನಾವಣೆಯಲ್ಲಿ 66 ಸೀಟ್ ಬರಲು ಕಾರಣ ಬೇಡ ಜಂಗಮ ಸರ್ಟಿಫಿಕೇಟ್ ಕಾರಣ. ನಿಮ್ಮ ಮನೆಯಿಂದಲೇ ಬೇಡ ಜಂಗಮ ಸರ್ಟಿಫಿಕೇಟ್ ಪಡೆದು ನಮ್ಮ ಪಕ್ಷದ ನಾಯಕರ ವಿರುದ್ಧ ಸ್ಪರ್ಧೆ ನಡೆಸಿದ್ದಾರೆ. ಸಹಜವಾಗಿ ಪರಿಶಿಷ್ಟ ಜಾತಿಯ ವರ್ಗಗಳು ಬೇಸರ ಆಗಿದ್ದವು. ಇದ್ರಿಂದ ನಮಗೆ ಚುನಾವಣೆಯಲ್ಲಿ ಹಿನ್ನಡೆ ಆಗಿದೆ. ರೇಣುಕಾಚಾರ್ಯ ಭೂತನ ಬಾಯಲ್ಲಿ ಭಗವದ್ಗೀತೆ ಕೇಳಿದಂಗೆ ಆಗುತ್ತೆ. ನಮಗೆ ಎಚ್ಚರಿಗೆ ಕೊಡೊ ದೊಡ್ಡ ವ್ಯಕ್ತಿ ನೀನಲ್ಲ ಎಂದು ರೇಣುಕಾಚಾರ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ವೀಕ್ಷಿಸಿ:  ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗಲ್ಲ ಅಂತೀರಾ? ನೀವಾದ್ರೂ ಬರ್ತೀರಾ?: ಡಿಕೆಶಿ ವಿರುದ್ಧ ಅಶೋಕ್ ಕಿಡಿ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more