ರೈತರು ಉಳುಮೆ ಮಾಡುವ ಜಮೀನು ಸರ್ಕಾರದ ಹೆಸರಿಗೆ:  ಸೌಕರ್ಯ ಸಿಗದೇ ಅನ್ನದಾತರು ಕಂಗಾಲು..!

ರೈತರು ಉಳುಮೆ ಮಾಡುವ ಜಮೀನು ಸರ್ಕಾರದ ಹೆಸರಿಗೆ: ಸೌಕರ್ಯ ಸಿಗದೇ ಅನ್ನದಾತರು ಕಂಗಾಲು..!

Published : Nov 10, 2023, 11:24 AM ISTUpdated : Nov 10, 2023, 11:25 AM IST

ಭೀಕರ ಬರದ ಮಧ್ಯೆ  ತತ್ತರಿಸಿರುವ ರೈತರಿಗೆ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ತುಂಡು ಭೂಮಿಯನ್ನು ನಂಬಿದ್ದ ರೈತರ ಜಾಗ ಇದೀಗ ಸರ್ಕಾರದ ಜಾಗ ಎಂದು ನಮೂದಾಗಿದೆ.
 

ಶತಮಾನಗಳಿಂದ ಜೀವನಕ್ಕಾಗಿ ತುಂಡು ಭೂಮಿಯನ್ನು ನಂಬಿದ್ದ ಅನ್ನದಾತರಿಗೆ(farmers) ಇದೀಗ ಆತಂಕ ಎದುರಾಗಿದೆ. ಗದಗ(Gadag) ಜಿಲ್ಲೆ ನರಗುಂದ ತಾಲೂಕಿನ ಕುರುಗೋವಿನಕೊಪ್ಪ ಗ್ರಾಮದ 538 ಎಕರೆ ಜಮೀನನ್ನ ರೈತರು ಉಳುಮೆ ಮಾಡ್ತಿದ್ರು.ಈ ಜಮೀನನ್ನೇ ನಂಬಿದ್ದ ರೈತರಿಗೆ ಭೂಮಿಯೂ ಕೈ ತಪ್ಪಿ ಹೋಗುವ ಆತಂಕ ಶುರುವಾಗಿದೆ. ಈ ಜಮೀನಿನ ದಾಖಲೆಗಳಲ್ಲಿ(Land Record) ಹರಿದೀಕ್ಷಿತ್ ಇನಾಮದಾರ್ ಹಾಗೂ ಇತರ ರೈತರ ಹೆಸರು ದಾಖಲಾಗಿತ್ತು. ಆದ್ರೇ ಇದೀಗ ರೈತರ ಹೆಸರಿನ ಬದಲಾಗಿ ಸರ್ಕಾರಿ ಜಾಗ ಅಂತಾ ನಮೂದಾಗಿದೆ.. ಈ ಭೂಮಿಯನ್ನೇ ನಂಬಿದ ರೈತರಿಗೆ ದಿಕ್ಕು ತೋಚದಂತಾಗಿದೆ. ಇನಾಮು ಜಮೀನಿನ ಹಕ್ಕು ಪತ್ರ  ನೀಡುವಂತೆ ಸರ್ಕಾರಕ್ಕೆ ರೈತರು ಪರಿ ಪರಿಯಾಗಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ.. 2021 ರೈತರ ಹೋರಾಟಕ್ಕೆ ಮಣಿದ ಸರ್ಕಾರ ಸರ್ವೆ ಮಾಡಲು ಸೂಚನೆ ನೀಡಿತ್ತು.. ಆದ್ರೀಗ ಪಹಣಿಯಿಂದ ರೈತ್ರ ಹೆಸರಿನ ಬದಲಾಗಿ, ಸರ್ಕಾರದ ಹೆಸರು ಬಂದಿದೆ.. ಇದ್ರಿಂದಾಗಿ ರೈತ ವಿಮೆ, ಬೆಳೆ ನಷ್ಟ ಪರಿಹಾರ ಸೇರಿ ರೈತರಿಗೆ ಸಿಗಬೇಕಾದ ಸೌಲಭ್ಯ ಸಿಗ್ತಿಲ್ಲ..ಆದಷ್ಟು ಬೇಗ ಈ ಸಮಸ್ಯೆಯನ್ನ ಸರ್ಕಾರ ಬಗೆಹರಿಸಬೇಕೆಂದು ರೈತರು ಆಗ್ರಹಿಸ್ತಿದ್ದಾರೆ. ಈ ಸಂಬಂಧ ಪಹಣಿಯಲ್ಲಿನ ಹೆಸರನ್ನು ಬದಲಾಯಿಸುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಭರವಸೆ ನೀಡಿದ್ದಾರೆ. ಜೀವನೋಪಾಯಕ್ಕೆ ಅಂತಿದ್ದ ತುಂಡು ಜಮೀನು ಈಗ ಸರ್ಕಾರದ ಹೆಸರಿಗೆ ಬದಲಾವಣೆಯಾಗಿದೆ.. ಬರ ಬಿದ್ದಿದ್ದು ಸರ್ಕಾರದಿಂದ ಸಿಗುವ ಯಾವುದೇ ಸೌಲಭ್ಯ ಸಿಗುವ ಭರವಸೆಯೂ ರೈತ್ರಿಗೆ ಉಳಿದಿಲ್ಲ.

ಇದನ್ನೂ ವೀಕ್ಷಿಸಿ:  IMA ಕೇಸ್‌ನಲ್ಲಿ ಹಣ ಕಳೆದುಕೊಂಡಿದ್ದವರಿಗೆ ಗುಡ್ ನ್ಯೂಸ್: 55 ಸಾವಿರ ಹೂಡಿಕೆದಾರರಿಗೆ 68 ಕೋಟಿ ಹಂಚಿಕೆ..!

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more