Sep 1, 2023, 11:09 AM IST
ನೆಚ್ಚಿನ ಗುರುಗಳ ಮೇಲೆ ಪುಷ್ಪಮಳೆ. ತೆರೆದ ವಾಹನದಲ್ಲಿ ಅದ್ಧೂರಿ ಮೆರವಣಿಗೆ. ಜ್ಞಾನದ ಬುತ್ತಿ ಬಿತ್ತಿದ ಶಿಕ್ಷಕನಿಗೆ(Teacher) ಕಣ್ಣೀರ ಬೀಳ್ಕೊಡುಗೆ. ಈ ದೃಶ್ಯ ಕಂಡು ಬಂದಿದ್ದು ಗದಗ(Gadag) ಜಿಲ್ಲೆಯ ನಾಗರಮಡುವು ಗ್ರಾಮದಲ್ಲಿ. ಪುಟ್ಟಹಳ್ಳಿಯಲ್ಲಿ ಬರೋಬ್ಬರಿ 16 ವರ್ಷ ಸಾರ್ಥಕ ಸೇವೆ ಸಲ್ಲಿಸಿದ ಶಿಕ್ಷಕ ಬಸವರಾಜ್ ಹೆಳವಿ ಅವರಿಗೆ ವರ್ಗಾವಣೆಯಾಗಿದೆ. ನೆಚ್ಚಿನ ಶಿಕ್ಷಕನನ್ನು ಗ್ರಾಮದ ರಸ್ತೆಗಳಲ್ಲಿ ರಂಗೋಲಿ ಹಾಕಿ. ತೋರಣಕಟ್ಟಿ..ತೆರದ ವಾಹನದಲ್ಲಿ ಮೆರವಣಿಗೆ ಮಾಡಿ ಬೀಳ್ಕೊಟ್ಟರು. 16 ವರ್ಷಗಳ ಕಾಲ ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದ ಶಿಕ್ಷಕನ ವರ್ಗಾವಣೆ (Transfer) ಕೆಲವರನ್ನು ಕಣ್ಣೀರ ಕಡಲಲ್ಲಿ ತೇಲಿಸಿತು. ಮಕ್ಕಳು ಮಾತ್ರವಲ್ಲ. ಪೋಷಕರೂ ಬಿಕ್ಕಿ ಬಿಕ್ಕಿ ಅತ್ತರು. ಇಂಗ್ಲಿಷ್ ಶಿಕ್ಷಕರಾಗಿದ್ದ ಬಸವರಾಜ್ ಹೆಳವಿ.. ಮಕ್ಕಳ ಅಭ್ಯುದಯಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದರು. ಬೆಳಗ್ಗೆ 6 ಗಂಟೆಯಿಂದ್ಲೆ ಫೀಲ್ಡ್ ಗೆ ಇಳೀತಿದ್ದ ಬಸವರಾಜ್ ಹೆಳವಿ(Basavaraj Helavi) ಮಕ್ಕಳಿಗೆ ಸ್ಪೋರ್ಟ್ಸ್ ಪ್ರ್ಯಾಕ್ಟೀಸ್ ಮಾಡಿಸುತ್ತಿದ್ರು. ರನ್ನಿಂಗ್, ಕಬ್ಬಡ್ಡಿ, ಹೈಜೆಂಪ್, ಕೋಕೋ, ಚೆಸ್ ಹೀಗೆ ವಿವಿಧ ಆಟಗಳ ಟ್ರೈನಿಂಗ್ ನೀಡುತ್ತಿದ್ದರು. ಇದರ ಫಲವಾಗಿ ಗ್ರಾಮದ ಮಕ್ಕಳು ಜಿಲ್ಲಾಮಟ್ಟ, ರಾಜ್ಯ ಮಟ್ಟದಲ್ಲೂ ಪ್ರಶಸ್ತಿ ಬಾಚಿದಾರೆ. ಆ ಗೆದ್ದ ಟ್ರೋಪಿಗಳನ್ನೆಲ್ಲಾ ತೆರೆದ ವಾಹನದಲ್ಲಿ ಇಟ್ಟು ಶಿಕ್ಷಕರ ಮೆರವಣಿಗೆ ಮಾಡಿದ್ರು.
ಇದನ್ನೂ ವೀಕ್ಷಿಸಿ: ಯೇಸು ಹೊಗಳಿಕೆ..ಹಿಂದೂ ದೇವರುಗಳ ಬಗ್ಗೆ ಅಶ್ಲೀಲ ಮಾತು: ವ್ಯಕ್ತಿಯ ವಿಡಿಯೋ ವೈರಲ್