ದರ್ಶನ್, ಪವಿತ್ರಾ ಗೌಡ ವಿರುದ್ಧ ಪ್ರಬಲ ಸಾಕ್ಷ್ಯ ಸಂಗ್ರಹ: 10ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯ ಪಡೆದ ತನಿಖಾಧಿಕಾರಿಗಳು!

Jun 17, 2024, 4:50 PM IST

ರೇಣುಕಾಸ್ವಾಮಿ ಕೊಲೆ ಕೇಸ್‌​ನಲ್ಲಿ(Renukaswamy murder) ದರ್ಶನ್, ಪವಿತ್ರಾ ಗೌಡ ವಿರುದ್ಧ ಪ್ರಬಲ ಸಾಕ್ಷ್ಯ ದೊರೆತಿದೆ. ಈ ಪ್ರಕರಣದಲ್ಲಿ ದರ್ಶನ್(Darshan), ಪವಿತ್ರಾ ಗೌಡ ನೇರ ಪಾತ್ರ ಇರುವ ಬಗ್ಗೆ ಹಲವು ಸಾಕ್ಷ್ಯ ಸಿಕ್ಕಿದೆ. 10ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನ ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ. ಕೊಲೆಯಲ್ಲಿ(Murder) ದರ್ಶನ್ ನೇರಭಾಗಿಯಾಗಿರೋದಕ್ಕೆ ಅತ್ಯಂತ ಪ್ರಬಲ ಸಾಕ್ಷ್ಯ ಸಿಕ್ಕಿದೆ. ದರ್ಶನ್ ಬಟ್ಟೆಗಳ ಮೇಲೆ ಕೊಲೆಯಾದ ರೇಣಕಾಸ್ವಾಮಿ ರಕ್ತದ ಗುರುತು ಪತ್ತೆಯಾಗಿದ್ದು, ದರ್ಶನ್ ಮನೆಯಿಂದ ರಕ್ತಸಿಕ್ತ ಬಟ್ಟೆಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪವಿತ್ರಾ ಗೌಡ (Pavithra Gowda) ನೇರ ಪಾತ್ರದ ಬಗ್ಗೆಯೂ ತನಿಖಾಧಿಕಾರಿಗಳಿಗೆ ಸಾಕ್ಷ್ಯ ಸಿಕ್ಕಿದೆ. ಪವಿತ್ರಾ ಗೌಡ ಮನೆಯಿಂದ ಆಕೆಯ ಬಟ್ಟೆ, ಚಪ್ಪಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪವಿತ್ರಾ ಗೌಡ ಬಟ್ಟೆ ಮತ್ತು ಚಪ್ಪಲಿ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ಕೊಲೆಯಾದ ರೇಣುಕಾಸ್ವಾಮಿ ರಕ್ತದ ಮಾದರಿಯನ್ನು ಪೊಲೀಸರು ಸಂಗ್ರಹಿಸಿದ್ದು, ದರ್ಶನ್ ಮತ್ತು ಪವಿತ್ರಾಗೌಡ ಬಟ್ಟೆ ಮೇಲೆ ಸಿಕ್ಕ ರಕ್ತದ ಮಾದರಿ FSLಗೆ ಕಳುಹಿಸಲಾಗಿದೆ. ರಕ್ತದ ಮಾದರಿ ರೇಣುಕಾಸ್ವಾಮಿ ರಕ್ತಕ್ಕೆ ಹೋಲಿಕೆಯಾದ್ರೆ ಕಂಟಕ ಕಟ್ಟಿಟ್ಟ ಬುತ್ತಿಯಾಗಿದೆ. 

ಇದನ್ನೂ ವೀಕ್ಷಿಸಿ:  ಬಿಜೆಪಿ, ಜೆಡಿಎಸ್‌ನವರು ಪ್ರತಿಭಟನೆ ಮಾಡಬೇಕಿರೋದು ರಾಜ್ಯದ ವಿರುದ್ಧ ಅಲ್ಲ ಕೇಂದ್ರದ ವಿರುದ್ಧ: ಸಿಎಂ