Prajwal Revanna arrest: ಪ್ರಜ್ವಲ್‌ ರೇವಣ್ಣ ಅರೆಸ್ಟ್..ಈ ಬಗ್ಗೆ ಗೃಹ ಸಚಿವ ಪರಮೇಶ್ವರ್‌ ಹೇಳಿದ್ದೇನು ?

May 31, 2024, 1:47 PM IST

ಪ್ರಜ್ವಲ್​ ರೇವಣ್ಣ ಅರೆಸ್ಟ್(Prajwal Revanna arrest) ಆದ​ ಬಳಿಕ ಗೃಹ ಸಚಿವ ಡಾ.ಜಿ. ಪರಮೇಶ್ವರ್(Dr. G. Parameshwar)​ ಪ್ರತಿಕ್ರಿಯೆ ನೀಡಿದ್ದು, ನಾನು ಎಸ್​​ಐಟಿ(SIT) ಅಧಿಕಾರಿಗಳನ್ನು ಭೇಟಿಯಾಗಿಲ್ಲ ಎಂದಿದ್ದಾರೆ. ಅವರು ವಿಷಯವನ್ನು ಗೌಪ್ಯವಾಗಿ ಇಟ್ಟುಕೊಳ್ತಾರೆ. ಪ್ರಜ್ವಲ್‌​ರನ್ನು ಕಾನೂನು ಪ್ರಕಾರ ಅರೆಸ್ಟ್​ ಮಾಡಿದ್ದಾರೆ. ಪ್ರಜ್ವಲ್​​ ತನಿಖೆಗೆ ಸಹಕಾರ ಕೊಡ್ತಿದ್ದಾರೆ. ಕೊಡಲೇಬೇಕು. ಎಸ್​ಐಟಿ ಮುಂದಿನ ಕ್ರಮ ಕೈಗೊಳ್ಳುತ್ತದೆ. ಕಾನೂನು ಪ್ರಕಾರ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಸಂತ್ರಸ್ತೆಯರು ಎಸ್​​​ಐಟಿ ಅಧಿಕಾರಿಗಳ ಬಳಿ ದೂರು ನೀಡಬಹುದು ಎಂದು ಗೃಹ ಸಚಿವರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಅರೆಸ್ಟ್‌ಗೂ ಮುನ್ನ ಏರ್​ಪೋರ್ಟ್‌ ನಲ್ಲಿ ನಡೆದಿದ್ದೇನು..? ಎಸ್​ಐಟಿ ಅಧಿಕಾರಿಗಳು ಬರುತ್ತಿದ್ದನ್ನು ಕಂಡು ಪ್ರಜ್ವಲ್​ ಗರಂ!