ಜೂನ್ 4ರ ನಂತರ ಕಾಂಗ್ರೆಸ್‌ನಲ್ಲಿ ಬದಲಾವಣೆ ಆಗುತ್ತಾ? ಡಿಕೆಶಿಯ ಈ ಮಾತಿನಲ್ಲೂ ಇದೆಯಾ ಸಂದೇಶ..?

ಜೂನ್ 4ರ ನಂತರ ಕಾಂಗ್ರೆಸ್‌ನಲ್ಲಿ ಬದಲಾವಣೆ ಆಗುತ್ತಾ? ಡಿಕೆಶಿಯ ಈ ಮಾತಿನಲ್ಲೂ ಇದೆಯಾ ಸಂದೇಶ..?

Published : May 24, 2024, 05:07 PM IST

ಸ್ವಕ್ಷೇತ್ರದಲ್ಲಿ ಬೆಂಬಲ ಸಿಗದಿದ್ದರೆ ಸಿದ್ದು CM ಕುರ್ಚಿ ಬಿಡಬೇಕಾ? 
ಸಚಿವರುಗಳಿಗೆ ಔತಣಕೂಟ ಏರ್ಪಡಿಸಿದ್ದರ ಉದ್ದೇಶವೇನು..? 
ರಾಜ್ಯಾಧ್ಯಕ್ಷ ಬದಲಾವಣೆ ಕುರಿತು ಜಾರಕಿಹೊಳಿ ಹೇಳಿದ್ದೇನು..? 

ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಾಕ್ಷ, ಉಪಮುಖ್ಯಮಂತ್ರಿಯಾಗಿರುವ ಡಿಕೆ ಶಿವಕುಮಾರ್(DK Shivakumar) ಮೊನ್ನೆ ಆಡಿದ ಆ ಒಂದು ಮಾತು ರಾಜಕೀಯ ವಲಯದಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಡಿಕೆಶಿ ಹೇಳಿದ ಆ ಒಂದು ಮಾತಿನಿಂದ ಕೆಲವರಲ್ಲಿ ಕುತೂಹಲ ಹೆಚ್ಚಾದ್ರೆ ಇನ್ನು ಕೆಲ ನಾಯಕರಿಗೆ ಟೆನ್ಷನ್ ಹೆಚ್ಚಾಗಿದೆ. ಲೋಕಸಭಾ ಚುನಾವಣೆ(Lok Sabha Elections) ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಲೋಕಲ್‌ಬಾಡಿ ಎಲೆಕ್ಷನ್(Local Body Election) ಶುರುವಾಗಲಿದೆ. ಈ ಕುರಿತು ಚರ್ಚಿಸಿಲು ಮೊನ್ನೆ ಕಾಂಗ್ರೆಸ್(Congress) ಪಕ್ಷದ ರಾಜ್ಯಾಧ್ಯಕ್ಷರಾದ ಡಿಕೆ ಶಿವಕುಮಾರ್ ಅವ್ರು ಲೋಕಲ್ ಲೀಡರ್‌ಗಳೊಂದಿಗೆ ಮೀಟಿಂಗ್ ಮಾಡಿದ್ರು. ಈ ಸಂದರ್ಭದಲ್ಲಿ ಲೋಕಲ್ ಲೀಡರ್‌ಗಳನ್ನುದ್ದೇಶಿ ಮಾತ್ನಾಡುತ್ತಿರುವಾಗ ಡಿಕೆಶಿ ಈ ಮಾತನ್ನು ಹೇಳಿದ್ರು. ನಾನು ಅಧ್ಯಕ್ಷನಾಗಿ ನಾಲ್ಕು ವರ್ಷಗಳಾಯ್ತು. ಇನ್ನೆಷ್ಟು ದಿನ ಇರ್ತೇನೆ ಅನ್ನೋದು ಮುಖ್ಯವಲ್ಲವೆಂದು ಡಿಕೆಶಿ ಮಾತ್ನಾಡಿದ್ದಾರೆ. ಈ ನಾಲ್ಕು ವರ್ಷಗಳಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ ಅನ್ನೋದನ್ನು ಡಿಕೆಶಿ ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಮೊನ್ನೆ ತಾನೇ ಒಂದು ವರ್ಷ ಪೂರೈಸಿದೆ. ಕಳೆದ ವರ್ಷ ಮೇ 20 ರಂದು ಸಿದ್ದರಾಮಯ್ಯನವರು ಸಿಎಂ ಆಗಿ ಪ್ರಮಾಣ ವಚನ ತೆದುಕೊಂಡ್ರೆ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣ ವಚನ ತೆಗೆದುಕೊಂಡಿದ್ರು. 

ಇದನ್ನೂ ವೀಕ್ಷಿಸಿ: ಪಶ್ಚಿಮ ಬಂಗಾಳ ಒಬಿಸಿ ಮೀಸಲು ರದ್ದು! ಹೈಕೋರ್ಟ್ ತೀರ್ಪು ಒಪ್ಪಲ್ಲ..ಇದು ಬಿಜೆಪಿ ಪಿತೂರಿ ಎಂದ ದೀದಿ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more