ಏನಾಗಲಿದೆ ಡಿಕೆಶಿ ಅಕ್ರಮ ಆಸ್ತಿ ಪ್ರಕರಣ..? ತನಿಖೆ ಬಗ್ಗೆ ಮಾಜಿ ಸ್ಪೀಕರ್ ಕೊಟ್ಟ ಉತ್ತರ ಏನು..?

Nov 26, 2023, 1:02 PM IST

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಅವರ ಮೇಲೆ ಇರೋ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನ ಸಿಬಿಐ(CBI) ತನಿಖೆಯಿಂದ ವಾಪಸ್ ಪಡೆದ ಮೇಲೆ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಕಾಂಗ್ರೆಸ್ ತಮ್ಮ ಸರ್ಕಾರದ ನಿರ್ಧಾರವನ್ನ ಸಮರ್ಥನೆ ಮಾಡಿಕೊಳ್ತಾ ಇದ್ರೆ ಅತ್ತ ಬಿಜೆಪಿ(BJP) ಜೆಡಿಎಸ್ ಸರ್ಕಾರದ ವಿರುದ್ಧ ಸಮರ ಸಾರಿವೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮೇಲೆ ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿರೋ ದೊಡ್ಡ ಆರೋಪವಿದೆ. ಇದೇ ವಿಚಾರಕ್ಕೆ ಅವರು ತಿಹಾರ್ ಜೈಲು ವಾಸವನ್ನೂ ಅನುಭವಿಸಿದ್ದಾರೆ. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಅವರ ಮೇಲಿನ ಆರೋಪದ ತನಿಖೆ ಮಾಡೋಕೆ ಸಿಬಿಐಗೆ ಆದೇಶ ನೀಡಿತ್ತು. ಈಗ ಆ ಆದೇಶವನ್ನ ಸಿದ್ದು ಸರ್ಕಾರ ವಾಪಸ್ ಪಡೆದಿರೋದು ಚರ್ಚೆಗೆ ಗ್ರಾಸವಾಗಿದೆ. ಹಿಂದಿನ ಸರ್ಕಾರ ನಿಯಮ ಬಾಹಿರವಾಗಿ ಆದೇಶ ಮಾಡಿತ್ತು. ಶಾಸಕರಾಗಿದ್ದ ಡಿಕೆ ಶಿವಕುಮಾರ್ ಮೇಲೆ ತನಿಖೆಗೆ ಆದೇಶ ಕೊಡೋಕೆ ಸಭಾಪತಿಗಳ ಅನುಮತಿ ಪಡದೇ ಇರ್ಲಿಲ್ಲಾ. ಮೌಕಿಕ ಆದೇಶಕ್ಕೆ ಯಾವುದೇ ಬೆಲೆಯಿಲ್ಲ. ಬರವಣಿಗೆಯಲ್ಲಿ ಆದೇಶವೂ ಇಲ್ಲ. ಹೀಗಾಗಿ ನಿಯಮಗಳನ್ನ ಗಾಳಿಗೆ ತೂರಿ ಡಿಕೆಶಿ ಮೇಲೆ ರಾಜಕೀಯ ದ್ವೇಷ ಸಾಧಿಸೋಕೆ ಬಿಜೆಪಿಗರು ಹೋಗಿದ್ದರು. ನಿಯಮ ಬಾಹಿರವಾಗಿ ಅನುಮತಿ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಸಿಬಿಐ ತನಿಖೆಯನ್ನ ವಾಪಸ್ ಪಡೆಯಲಾಗಿದೆ ಅನ್ನೋದು ಕಾಂಗ್ರೆಸ್ ವಾದ. ಆದ್ರೆ ಆಗಿನ ಸಭಾಪತಿಗಳಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಇದೊಂದು ಆರೋಪಕ್ಕೆ ಉತ್ತರ ಕೊಟ್ಟಿದ್ದಾರೆ. ತಮ್ಮ ನಿರ್ಣಯ ಮಾಡಿಕೊಳ್ಳೋಕೆ ಸ್ಪೀಕರ್ ಸ್ಥಾನವನ್ನ ದುರ್ಬಳಕೆ ಮಾಡಿಕೊಂಡಿರೋದು ದುರ್ದೈವದ ಸಂಗತಿ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ:  ಗಂಡ ಜೈಲಿಗೆ.. ಹೆಂಡತಿ ಪರಲೋಕಕ್ಕೆ..ಮಕ್ಕಳು ಅನಾಥ..! ಪ್ರೀತಿಸಿದವಳನ್ನು ಪತಿರಾಯ ಕೊಂದಿದ್ದೇಕೆ ?