ಕುರಿಗಾಹಿಗಳಿಂದ ಸಂಭ್ರಮದ ದೀಪಾವಳಿ ಆಚರಣೆ: ಕುರಿಗಳಿಗೆ ಬಣ್ಣದ ಅಲಂಕಾರ ಮಾಡಿ ಸಡಗರ

Nov 14, 2023, 10:34 AM IST

ಕುರಿಗಳಿಗೆ ಬಣ್ಣದ ಅಲಂಕಾರ.. ಹಟ್ಟಿಗೆ ತೆಂಗಿನಗರಿ, ಕಬ್ಬಿನಿಂದ ಸಿಂಗಾರ. ಮನೆ ಮಂದಿಯೆಲ್ಲ ಸೇರಿ ಪೂಜಿಸಿ, ಹಬ್ಬದ ಊಟ ಸವಿಯೋಯೋದೇ ಚೆಂದ.ಇದು ಉತ್ತರ ಕರ್ನಾಟಕದ ದೀಪಾಳಿಯ ಸ್ಪೆಷಲ್. ದೀಪಾವಳಿ (Deepavali) ಬಂತಂದ್ರೆ ಸಾಕು ಕುರಿಗಾಹಿಗಳಿಗೆ(shepherds) ಖುಷಿಯೋ ಖುಷಿ. ಮಕ್ಕಳಿಗಂತೂ ಕುರಿಗಳನ್ನ ಅಲಂಕರಿಸೋದೇ ಒಂದು ಸಂಭ್ರಮ. ಹೌದು ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ದೀಪಾವಳಿ ದಿನ ಕುರಿಗಾಹಿಗಳು ಇಂಥದ್ದೊಂದು ವಿಭಿನ್ನ ಆಚರಣೆ ಮಾಡಿಕೊಂಡು  ಬಂದಿದ್ದಾರೆ. ಬಲಿ ಪಾಡ್ಯ ದಿನ ತಮ್ಮ ಹಟ್ಟಿಯಲ್ಲಿನ ಕುರಿಗಳಿಗೆಲ್ಲ ಬಣ್ಣ ಹಚ್ಚಿ, ಅಲಂಕಾರ ಮಾಡಿ, ಹೂವಿನ ಹಾರ ಹಾಕುತ್ತಾರೆ. ಕುರಿ ಹಟ್ಟಿಯನ್ನೂ ಅಲಂಕರಿಸಿ ಪೂಜೆ ಮಾಡುತ್ತಾರೆ. ದೇವರಾದ ಬೀರಪ್ಪ ನೀನೇ ಎಂದು ಕುರಿಗಳಿಗೆ ಪೂಜಿಸುವ ಸಂಪ್ರದಾಯ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ. ಗಂಡಸರು, ಮಕ್ಕಳೆಲ್ಲ ಕುರಿ ಹಟ್ಟಿ, ಕುರಿಗಳನ್ನು ಸಿಂಗರಿಸಿದ್ರೆ, ಇತ್ತ ಹೆಣ್ಣು ಮಕ್ಕಳು ತರಹೇವಾರಿ ಅಡುಗೆ ಸಿದ್ಧಪಡಿಸುತ್ತಾರೆ. ಮನೆಯಲ್ಲಿ  ಸಿದ್ಧಪಡಿಸಿದ ಹೋಳಿಗೆ, ಹುಗ್ಗಿ, ಸಿಹಿ ಪದಾರ್ಥಗಳನ್ನು ಕಟ್ಟಿಕೊಂಡು ಕುರಿ ಹಟ್ಟಿಗೆ ಬರ್ತಾರೆ. ಕುಟುಂಬ ಸದಸ್ಯರೆಲ್ಲಾ ಒಟ್ಟುಗೂಡಿ ಕುರಿಗಳಿಗೆ ಪೂಜಿಸಿ, ಲಕ್ಷ್ಮೀಗೆ ನಮಿಸುತ್ತಾರೆ.. ಜಾನಪದ ಹಾಡುಗಳನ್ನು ಹಾಡಿ ಸಂಭ್ರಮಿಸುತ್ತಾರೆ. ಬಳಿಕ ಮನೆಯಿಂದ ತಂದ ಅಡುಗೆಯನ್ನು ಮನೆಮಂದಿಯೆಲ್ಲಾ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ.. ಇಡೀ ದಿನ ಹಟ್ಟಿಯಲ್ಲೇ ಕಾಲ ಕಳೆಯುತ್ತಾ ಸಂಭ್ರಮಿಸುತ್ತಾರೆ.

ಇದನ್ನೂ ವೀಕ್ಷಿಸಿ:  ಉತ್ತರಕನ್ನಡದಲ್ಲಿ ಬಲಿ ಚಕ್ರವರ್ತಿಯ ವಿಶಿಷ್ಟ ಆರಾಧನೆ: ಪ್ರಾದೇಶಿಕವಾಗಿ ಭಿನ್ನವಾಗಿ ಬೆಳಕಿನ ಹಬ್ಬ ಆಚರಣೆ