ಹಾಸನದಲ್ಲಿ ದಿನದಿನಕ್ಕೂ ಹೆಚ್ಚಾಗ್ತಿದೆ ಡೆಂಘೀ ಆರ್ಭಟ: 6 ಮಂದಿ ಸಾವು, 6 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ

Jul 5, 2024, 3:06 PM IST

ಹಾಸನ: ಜಿಲ್ಲೆಯಾದ್ಯಂತ ಡೆಂಘೀ (Dengue fever) ಆರ್ಭಟ ಜೋರಾಗಿದ್ದು, ಮಹಾಮಾರಿಗೆ ಈವರೆಗೂ 6 ಮಂದಿ ಬಲಿಯಾಗಿದ್ದಾರೆ. ಹಾಸನದಲ್ಲಿ(Hassan) 5, ಮೈಸೂರಿನಲ್ಲಿ (Mysore)ಒಂದು ಮಗು ಸಾವಿಗೀಡಾಗಿದೆ. ಡೆಂಘೀಗೆ ಈಗಾಗಲೇ 39 ಮಕ್ಕಳು ಚಿಕಿತ್ಸೆ ಪಡೆಯುತ್ತಿವೆ. ಹಾಸನದಲ್ಲಿ ದಿನದಿನಕ್ಕೂ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ. ಡೆಂಘೀಗೆ ಈವರೆಗೂ 6 ಮಂದಿ ಬಲಿಯಾಗಿದ್ದಾರೆ. 6 ಮಕ್ಕಳಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ವಯಸ್ಸಾದವರಿಗೂ ಮಹಾಮಾರಿ ಡೆಂಘೀ ಆತಂಕ ಕಾಡುತ್ತಿದೆ. ಇನ್ನೂ ಇತ್ತ ಸಿಲಿಕಾನ್‌ ಸಿಟಿಯಲ್ಲೂ ದಿನೇ ದಿನೇ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿವೆ.

ಇದನ್ನೂ ವೀಕ್ಷಿಸಿ:  ನಟ ದರ್ಶನ್ ಗ್ಯಾಂಗ್‌ಗೆ ಮತ್ತೊಂದು ಸಂಕಷ್ಟ: ಮೂವರು ಸೇರಿ ಮಾಜಿ ಉಪಮೇಯರ್ ಮೋಹನ್ ರಾಜ್‌ಗೆ 2ನೇ ನೋಟಿಸ್