ಬಂಜಾರ ಸಮುದಾಯ ವಿಶೇಷ ದೀಪಾವಳಿ ಆಚರಣೆ: ಮನೆ ಮನೆಗೂ ತೆರಳಿ ದೀಪ ಬೆಳಗಿದ ಯುವತಿಯರು

Nov 14, 2023, 11:47 AM IST

ದೀಪಾವಳಿ ಅಂದ್ರೆ ಮನೆ ಮನದಲ್ಲೂ ಸಂತಸ ಸಂಭ್ರಮ. ವಿಶೇಷವಾಗಿ ಬಂಜಾರ ಸಮುದಾಯದಲ್ಲಿ ದೀಪಾವಳಿಯ(Deepavali) ಆಚರಣೆಯೇ ವಿಭಿನ್ನ. ಕೋಟೆನಾಡು ಚಿತ್ರದುರ್ಗ(Chitradurga) ಜಿಲ್ಲೆಯ ಭರಮಸಾಗರ, ಹೊಳಲ್ಕೆರೆ ವ್ಯಾಪ್ತಿಯಲ್ಲಿ ಬರುವ ಹೆಚ್ಚಿನ ಲಂಬಾಣಿ ತಾಂಡಾಗಳಲ್ಲಿ(Lambani community) ಬೆಳಕಿನ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗ್ತದೆ. ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟು, ಗುಂಪು ಗುಂಪಾಗಿ ಒಂದೆಡೆ ಸೇರಿ ನೃತ್ಯ ಮಾಡೋದೆ ವಿಶೇಷ. ಸಮುದಾಯದ ಸಂಸ್ಕೃತಿ, ಪರಂಪರೆ ಉಳಿಸಲು ಸಂಭ್ರಮದಿಂದ ಆಚರಿಸ್ತೀವಿ ಅಂತಾರೆ ಬಂಜಾರ ಸಮುದಾಯದ ಮುಖಂಡರು. ತಾಂಡಾಗಳಲ್ಲಿ ಎಲ್ಲ ಯುವತಿಯರು ಲಂಬಾಣಿ ಉಡುಗೆಯನ್ನು ತೊಟ್ಟು, ಅಮಾವಾಸೆ ರಾತ್ರಿ ದಿನ ಪ್ರತೀ ಮನೆಗೆ ದೀಪ ಹಿಡಿದುಕೊಂಡು ತೆರಳಿ, ನಿಮ್ಮ ಮನೆಯಲ್ಲಿಯೂ ದೀಪ ಬೆಳಗಲಿ, ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಸಲ್ಲಿಸ್ತಾರೆ.ಸಂಸ್ಕೃತಿಯ ನೆಲೆಬೀಡು  ಕರುನಾಡಲ್ಲಿ ಇಂದಿಗೂ ಹಳೆಯ ಸಂಪ್ರದಾಯಗಳನ್ನು ಗ್ರಾಮೀಣ ಭಾಗದಲ್ಲಿ ಉಳಿಸಿ, ಬೆಳೆಸಿಕೊಂಡು ಹೋಗಲಾಗುತ್ತಿದೆ. ಇದಕ್ಕೆ ಈ ಬಂಜಾರ ಸಮುಧಾಯದ ಈ ವಿಶೇಷ ಆಚರಣೆಯೇ  ಸಾಕ್ಷಿಯಾಗಿದೆ.

ಇದನ್ನೂ ವೀಕ್ಷಿಸಿ:  ಹಾವೇರಿಯಲ್ಲಿ ಕಳೆಗಟ್ಟಿದ ರೈತಾಪಿ ವರ್ಗದ ದೀಪಾವಳಿ: ಮಣ್ಣಿನ ಧೂಳಿನೊಳಗೆ ಛಂಗನೇ ಬರೋ ಹೋರಿ ಹಿಡಿಯೋ ಹಬ್ಬ