ಬರದ ನಡುವೆ ನಿಲ್ಲದ ಶಾಸಕರ ವಿದೇಶ ಪ್ರವಾಸ: ಗೆದ್ದ 5 ತಿಂಗಳಲ್ಲಿ 3ನೇ ಬಾರಿ ವಿದೇಶಕ್ಕೆ ದರ್ಶನ್ ಪುಟ್ಟಣ್ಣಯ್ಯ

ಬರದ ನಡುವೆ ನಿಲ್ಲದ ಶಾಸಕರ ವಿದೇಶ ಪ್ರವಾಸ: ಗೆದ್ದ 5 ತಿಂಗಳಲ್ಲಿ 3ನೇ ಬಾರಿ ವಿದೇಶಕ್ಕೆ ದರ್ಶನ್ ಪುಟ್ಟಣ್ಣಯ್ಯ

Published : Nov 03, 2023, 12:19 PM IST

ಒಮ್ಮೆ ವಿದೇಶಕ್ಕೆ ಹೋದರೆ ತಿಂಗಳುಗಟ್ಟಲೆ ಕ್ಷೇತ್ರಕ್ಕೆ ಬರಲ್ಲ
ಇಲ್ಲೇ ಇದ್ದು ಜನರ ಸಮಸ್ಯೆಗೆ ಸ್ಪಂದಿಸಲಿ ಎಂದು ಗೆಲ್ಲಿಸಿದ್ದೇವೆ
ವೈಯಕ್ತಿಕ ಕಾರಣ ನೀಡಿ ಪದೇ ಪದೇ ವಿದೇಶಕ್ಕೆ ಹೋಗ್ತಿದ್ದಾರೆ
ಆಕ್ರೋಶವನ್ನು ವ್ಯಕ್ತಪಡಿಸಿದ ಮೇಲುಕೋಟೆ ಕ್ಷೇತ್ರದ ಜನರು

ಬರ ಇದ್ದರೂ ಶಾಸಕರ ವಿದೇಶ ಪ್ರವಾಸ ಮಾತ್ರ ನಿಂತಿಲ್ಲ. ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿಗೆ ವಿದೇಶ ಪ್ರವಾಸಕ್ಕೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ(MLA Darshan Puttannaiah) ಹೋಗಿದ್ದಾರೆ. ಇವರು ಮೇಲುಕೋಟೆ(Melukote) ಶಾಸಕರಾಗಿದ್ದು, ಇವರ ನಡೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಚುನಾವಣೆ ವೇಳೆ ಕ್ಷೇತ್ರದಲ್ಲೇ ಇರುವುದಾಗಿ ಭರವಸೆಯನ್ನು ದರ್ಶನ್ ಪುಟ್ಟಣ್ಣಯ್ಯ ನೀಡಿದ್ದರು. ಅಲ್ಲದೇ ಅಮೆರಿಕಾದಲ್ಲಿನ(America) ತನ್ನ ಕಂಪನಿ ಮಾರಿ ಹುಟ್ಟೂರಲ್ಲೇ ಇರುವುದಾಗಿ ಭರವಸೆ ನೀಡಿದ್ದರು. ಆದರೆ ಗೆದ್ದ ಕೆಲವೇ ದಿನಗಳಲ್ಲಿ ಅಮೆರಿಕಾಕ್ಕೆ ದರ್ಶನ್ ಪುಟ್ಟಣ್ಣಯ್ಯ ತೆರಳಿದ್ದಾರೆ. ಆಗ ವಾಪಸ್‌ ಬಂದ ಬಳಿಕ ಕ್ಷೇತ್ರದ ಜನರ ಬಳಿ ಕ್ಷಮೆಯಾಚಿಸಿ, ಮತ್ತೆ ವಿದೇಶಕ್ಕೆ ಹೋಗಲ್ಲ ಎಂದಿದ್ದರು. ಕಳೆದ ಆಗಸ್ಟ್‌ನಲ್ಲೂ ವಿದೇಶಕ್ಕೆ ತೆರಳಿ ಸ್ವತಂತ್ರ ದಿನಾಚರಣೆಗೆ ಗೈರಾಗಿದ್ದರು. ಶಾಸಕರ ಅನುಪಸ್ಥಿತಿಯಲ್ಲಿ ಸ್ವತಂತ್ರ ದಿನಾಚರಣೆ ನಡೆದಿತ್ತು. ಈಗ ಮತ್ತೆ ಒಂದು ವಾರದ ಹಿಂದೆ ಅಮೆರಿಕಾಕ್ಕೆ ದರ್ಶನ್ಹೋಗಿದ್ದಾರೆ. ಕನ್ನಡ ರಾಜ್ಯೋತ್ಸವಕ್ಕೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರಾಗಿದ್ದಾರೆ. ಕಾವೇರಿ ಸಮಸ್ಯೆ, ಬರ, ಕರೆಂಟ್ ಹೀಗೆ ಸಾಲು ಸಾಲು ಸಮಸ್ಯೆ ಇದ್ದರೂ,ಅವರ ಈ ನಡೆಗೆ ಕ್ಷೇತ್ರದ ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿಜೆಪಿ ಅಧಿಕಾರದಲ್ಲಿ ಮುಸ್ಲಿಮರು ಸಂಕಷ್ಟಕ್ಕೆ ಸಿಲುಕಿದ್ರು: ಜಮೀರ್ ಅಹಮ್ಮದ್ ಖಾನ್

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
Read more