Aug 4, 2023, 11:16 AM IST
ಉಡುಪಿ ನೇತ್ರಾವತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಹಿಂದೂ ಯುವತಿಯರ ವಿಡಿಯೋ ವಿವಾದ(Udupi video case) ದೊಡ್ಡ ಕಿಚ್ಚು ಎಬ್ಬಿಸಿದೆ. ABVP, ಬಿಜೆಪಿ ಪ್ರತಿಭಟನೆ(BJP Protest) ಬಳಿಕ ಈಗ ಹಿಂದೂಸಂಘಟನೆಗಳು ಹೋರಾಟಕ್ಕೆ ಧುಮುಕಿವೆ. ವಿಶ್ವಹಿಂದೂ ಪರಿಷತ್, ಭಜರಂಗದಳದ ಸುಮಾರು 4 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಉಡುಪಿಯಲ್ಲಿ ನಿನ್ನೆ ಪ್ರತಿಭಟನೆ ಕಹಳೆ ಮೊಳಗಿಸಿದ್ರು. ಮೂರು ಕಿಲೋಮೀಟರ್ ಹಿಂದೂ ಸಂಘಟನೆಯ ಕಾರ್ಯಕರ್ತರು ಬೃಹತ್ ಜಾಥಾ ಮೂಲಕ ಸರ್ಕಾರದ ವಿರುದ್ಧ ಸಿಟ್ಟು ಹೊರಹಾಕಿದ್ರು. ರಶ್ಮಿ ಸಮಂತ್ ಪ್ರತಿಭಟನಾ ಮುಂಚೂಣಿಯಲ್ಲಿದ್ರೆ, ಶಾಸಕ ಸುನೀಲ್ ಕುಮಾರ್, ಉಡುಪಿ ವಿಧಾಸಭಾ ಕ್ಷೇತ್ರದ ಸಂಘಪರಿವಾರ ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ರು. ಪೊಲೀಸ್ ತನಿಖೆಯಲ್ಲಿ ನ್ಯಾಯ ಸಿಗೋಲ್ಲ ಎಸ್‌ಐಟಿಯಿಂದಲೇ ತನಿಖೆ ಮಾಡುವಂತೆ ಆಗ್ರಹಿಸಿದ್ರು. ಬೃಹತ್ ಮೆರವಣಿಗೆ ಬಳಿಕ ಉಡುಪಿ ಕೃಷ್ಣಾಮಠದ ಪಾರ್ಕಿಂಗ್ ಏರಿಯಾದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ವಿಎಚ್‌ಪಿ ಮುಖಂಡ ಶರಣು ಪಂಪ್‌ವೆಲ್ (Sharan Pumpwell) ಸೌಟು ಪೊರಕೆ ಹಿಡಿಯುವ ಕೈಗಳು ಮನೆಯ ಮಕ್ಕಳ ರಕ್ಷಣೆಗಾಗಿ ತಲ್ವಾರ್, ಕತ್ತಿಗಳನ್ನ ಹಿಡಿಬೇಕು ಎನ್ನುವ ಮೂಲಕ ಮತ್ತೊಂದು ವಿವಾದ ದೊಡ್ಡ ವಿವಾದ ಹುಟ್ಟುಹಾಕಿದ್ರು.
ಇದನ್ನೂ ವೀಕ್ಷಿಸಿ: ಶಿವಣ್ಣನಿಗೂ ಇಷ್ಟವಂತೆ ಕಾವಾಲಯ್ಯ ಹಾಡು...ಸಾಂಗ್‌ಗೆ ಹ್ಯಾಟ್ರಿಕ್ ಹೀರೋ ಮಸ್ತ್ ಡ್ಯಾನ್ಸ್