Jun 19, 2024, 10:39 AM IST
ಅಧಿಕಾರ ತಂದುಕೊಟ್ಟ ಗ್ಯಾರಂಟಿಗೆ(Guarantee) ಕಾಂಗ್ರೆಸ್‌ನಲ್ಲೇ(Congress) ಅಪಸ್ವರ ಶುರುವಾಗಿದೆ. ನಂಬಿ ವೋಟು ಕೊಟ್ಟ ಮತದಾರನಿಗೆ ಸಿದ್ದು(Siddaramaiah) ಸರ್ಕಾರ ಕಂಡೀಷನ್ ಹಾಕುತ್ತಾ ಚರ್ಚೆ ಶುರುವಾಗಿದೆ. ಲೋಕಸಭಾ ಎಲೆಕ್ಷನ್‌ನಲ್ಲಿ(Lok Sabha Election) ಕಾಂಗ್ರೆಸ್ ನಿರೀಕ್ಷೆಯಂತೆ ರಿಸಲ್ಟ್ ಬಂದಿಲ್ಲ. ಗ್ಯಾರಂಟಿಗಳೂ ಷರತ್ತು ಹಾಕದೇ ಜಾರಿಗೆ ತಂದ್ರು ಕೈ ಪಾಳಯ ಎರಡಕ್ಕಿ ದಾಟಿಲ್ಲ. ಹೀಗಾಗಿ ಗ್ಯಾರಂಟಿ ವಿರುದ್ಧ ಶಾಸಕರೇ ಅಪಸ್ವರ ಎತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಷರತ್ತು ಹಾಕಿ ಎಂದು ಒತ್ತಡ ಹಾಕ್ತಿದ್ದರಂತೆ. ಎಲ್ಲರಿಗೂ ಯೋಜನೆ ಕೊಡೋದು ಬೇಡ. ನಕಲಿ ಬಿಪಿಎಲ್ ಕಾರ್ಡ್ ಅಕ್ರಮಕ್ಕೆ ಕಡಿವಾಣ ಹಾಕಿದ್ರೆ 20 ಸಾವಿರ ಕೋಟಿ ಉಳಿಯುತ್ತೆ ಅಂತಿದ್ದಾರೆ ಅಂತೆ.
ಇದನ್ನೂ ವೀಕ್ಷಿಸಿ: ಚನ್ನಪಟ್ಟಣ ಅಖಾಡಕ್ಕೆ ಇಳಿಯಲು ರೆಡಿಯಾದ್ರಾ ಡಿಕೆಶಿ? ದಳಪತಿಗೆ ಸಡ್ಡು ಹೊಡೆಯಲು ಅಖಾಡಕ್ಕೆ ಇಳಿತಾರಾ?