ಶಿಕ್ಷಕರ ಕಿತ್ತಾಟ,ಪೋಷಕರ ಹಠ..ಮಕ್ಕಳಿಗ್ಯಾಕೆ ಶಿಕ್ಷೆ..? ಬಿಇಒ ಬಳಿಕ ಡಿಡಿಪಿಐ ಹಂತಕ್ಕೆ ತಲುಪಿತು ಕ್ಷುಲ್ಲಕ ಜಗಳ..!

ಶಿಕ್ಷಕರ ಕಿತ್ತಾಟ,ಪೋಷಕರ ಹಠ..ಮಕ್ಕಳಿಗ್ಯಾಕೆ ಶಿಕ್ಷೆ..? ಬಿಇಒ ಬಳಿಕ ಡಿಡಿಪಿಐ ಹಂತಕ್ಕೆ ತಲುಪಿತು ಕ್ಷುಲ್ಲಕ ಜಗಳ..!

Published : Nov 21, 2023, 10:21 AM IST

ಮಕ್ಕಳ ವ್ಯಾಸಂಗಕ್ಕೆ ಪೋಷಕರ ಮೊಂಡಾಟವೆ ಮುಳುವಾಗಿದೆ. ಶಿಕ್ಷಕರಿಬ್ಬರ ನಡುವಿನ ಕಿತ್ತಾಟ ವಿದ್ಯಾರ್ಥಿಗಳನ್ನು ಶಾಲೆಯಿಂದ ದೂರ ಉಳಿಯುವಂತೆ ಮಾಡಿದೆ. ಸರ್ಕಾರಿ ಶಾಲೆಯ ಸಮಸ್ಯೆ ಜಿಲ್ಲಾ ಶಿಕ್ಷಣ ಇಲಾಖೆಗೆ ತಲೆನೋವು ತಂದಿಟ್ಟಿದೆ. 
 


ವಿದ್ಯಾರ್ಥಿಗಳ ಜೀವನ ರೂಪಿಸಬೇಕಿದ್ದ ಶಿಕ್ಷರಿಬ್ಬರ ಮಧ್ಯೆ ಮುಸುಕಿನ ಗುದ್ದಾಟ.. ಬೈದು ಬುದ್ಧಿ ಹೇಳಬೇಕಿದ್ದ ಪೋಷಕರ ಹಠ.. ಪರಿಣಾಮ 18 ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.. ಇದು ತುಮಕೂರು ಜಿಲ್ಲೆ ಗೇರಹಳ್ಳಿಯ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ(Government Urdu Primary School) ಕಥೆ. ಈ ಶಾಲೆಯಲ್ಲಿ 1ನೇ ತರಗತಿಯಿಂದ 7ನೇ ತರಗತಿವರೆಗೂ ಸುಮಾರು 125 ವಿದ್ಯಾರ್ಥಿಗಳು(Students) ಓದುತ್ತಿದ್ದಾರೆ. ಅಚ್ಚುಕಟ್ಟಾದ ಕಟ್ಟಡ.. ಮೂಲ ಸೌಕರ್ಯಕ್ಕೇನು ಕೊರತೆ ಇಲ್ಲ.. ಆದ್ರೆ ಭೋದನೆ ಮಾಡಬೇಕಿದ್ದ ಶಿಕ್ಷಕರ(Teachers) ನಡುವೆ ಉದ್ಭವಿಸಿದ ಶೀತಲ ಸಮರ 18 ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಮಾರಕವಾಗಿದೆ. ಶಾಲೆಯ 18 ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ ಆರಂಭದಲ್ಲಿ ಕರೆಕ್ಟಾಗಿ  ಶಾಲೆಗೆ ಬರ್ತಿದ್ರು. ಆದ್ರೆ ದಸರಾ ಹಬ್ಬ ಮುಗಿದ ಬಳಿಕ ಶಾಲೆಗೆ ಬರ್ತಾನೆ ಇಲ್ಲ.ಕಾರಣ ಕೇಳಿದ್ರೆ ಬೇರೆಯದ್ದೇ ಕತೆ ತೆರೆದುಕೊಳ್ತಿದೆ.. ಕೆಲ ತಿಂಗಳ ಹಿಂದೆ ಕನ್ನಡ ಶಿಕ್ಷಕ ಗೌಸ್‌ಪಿರ್‌ ವಿರುದ್ಧ  ಲೈಂಗಿಕ ದೌರ್ಜನ್ಯ ಆರೋಪ(Sexual assault Allegation) ಕೇಳಿ ಬಂದಿತ್ತು.ಈ ಪ್ರಕರಣದಲ್ಲಿ ಗೌಸ್‌ಪಿರ್‌ನನ್ನು ಅರೆಸ್ಟ್‌ ಕೂಡ ಮಾಡಲಾಗಿತ್ತು. ಆದ್ರೆ ಕೆಲ ಪೋಷಕರು ಮುಖ್ಯಶಿಕ್ಷಕಿ ನೂರ್‌ ಜಾನ್‌ ಪಿತೂರಿಯಿಂದಲೇ  ಗೌಸ್‌ಪಿರ್ ಅಮಾನತಾಗಿದ್ದು ಎಂದು ಆರೋಪಿಸಿದ್ದಾರಂತೆ. ಅಲ್ಲದೆ ನೂರ್‌ರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಪಟ್ಟುಹಿಡಿದಿದ್ದು, ಅಲ್ಲಿವರೆಗೂ ತಮ್ಮ ಮಕ್ಕಳನ್ನು ಶಾಲೆ ಕಳುಹಿಸಲ್ಲ ಎಂದು ಹಠ ಹಿಡಿದಿದ್ದಾರಂತೆ. ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.ಶಿಕ್ಷಣ ಇಲಾಖೆ ನಿಯಮದಂತೆ 7 ದಿನ ನಿರಂತರವಾಗಿ ಗೈರಾಗುವಂತಿಲ್ಲ... ಒಂದುವೇಳೆ ಗೈರಾದ್ರೆ ಶಿಕ್ಷಕರೇ ಖುದ್ದು ವಿದ್ಯಾರ್ಥಿಗಳ ಮನೆಗೆ ಭೇಟಿಕೊಟ್ಟು ಸಮಸ್ಯೆ ಆಲಿಸಬೇಕು.ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರ ಮನವೊಲಿಸಬೇಕು. ಆದರೆ ಈ ಶಾಲೆಯಲ್ಲಿ ನಿಯಮ ಪಾಲನೆಯಾಗಿಲ್ಲ. ಕೊನೆಗೆ ಸ್ಥಳೀಯರು ಸಮಸ್ಯೆ ಬಗ್ಗೆ ತುಮಕೂರು ಬಿಇಒ ಗಮನಕ್ಕೆ ತಂದಿದ್ರು. ಶಾಲೆಗೆ ಭೇಟಿ ಕೊಟ್ಟ ಬಿಇಒ ಪೋಷಕರ ಜೊತೆ ಸಭೆ ನಡೆಸಿ ತಿಳಿ ಹೇಳಿದ್ರು. ಆದರೂ ಪೋಷಕರು ತಮ್ಮ ಹಠ ಬಿಟ್ಟಿಲ್ಲ. ಇದರಿಂದ ಪ್ರಕರಣ ಡಿಡಿಪಿಐ ಹಂತಕ್ಕೆ ತಲುಪಿದೆ.. ಶೀಘ್ರವೇ ಶಾಲೆಗೆ ಭೇಟಿ ಕೊಟ್ಟು ಸಮಸ್ಯೆ ಬಗೆ ಹರಿಸುವುದಾಗಿ ಡಿಡಿಪಿಐ ರಂಗಧಾಮಯ್ಯ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ವಿಧಾನಸೌಧ ಸಮೀಪದಲ್ಲೇ ಶ್ರೀಗಂಧ ಕಳ್ಳರ ಕೈಚಳಕ: ರಾತ್ರೋ ರಾತ್ರಿ ಮರ ಹೊತ್ತೊಯ್ದ ಖದೀಮರು !

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
Read more