Nov 9, 2023, 11:01 AM IST
ಕಿಯೋನಿಕ್ಸ್ ಎಂಡಿಯನ್ನು ಕಡ್ಡಾಯ ರಜೆಯ ಮೇಲೆ ಸರ್ಕಾರ ಕಳುಹಿಸಿದೆ. ಕಿಯೋನಿಕ್ಸ್(Kionics) ವ್ಯವಸ್ಥಾಪಕ ನಿರ್ದೇಶಕ ಸಂಗಪ್ಪ(Sangappa) ವಿರುದ್ಧ ಕ್ರಿಮಿನಲ್ ಆರೋಪ ಕೇಳಿಬರುತ್ತಿದ್ದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಸುದ್ದಿ ಬಿತ್ತರ ಮಾಡಲಾಗಿತ್ತು. ಗುತ್ತಿಗೆದಾರರ(Contractors) ಸಂಕಷ್ಟಕ್ಕೆ ಏಷ್ಯಾನೆಟ್ ಸುವರ್ಣ ನ್ಯೂಸ್ ಧ್ವನಿಯಾಗಿತ್ತು. ಹಾಗಾಗಿ ಅವರು ಧನ್ಯವಾದ ತಿಳಿಸಿದ್ದಾರೆ. ಎಂಡಿ ಸಂಗಪ್ಪ ಗುತ್ತಿಗೆದಾರರ ಬಳಿ ಕಮಿಷನ್ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಡಿಸೆಂಬರ್ 5ರವರೆಗೆ ರಜೆ ನೀಡಿ ಸರ್ಕಾರ ಕಳುಹಿಸಿದೆ. ಆದ್ರೆ ರಜೆಯಲ್ಲಿದ್ರೂ ಸಂಗಪ್ಪ ಗುತ್ತಿಗೆದಾರರ ಫೈಲ್ ತರಿಸಿಕೊಂಡಿದ್ದಾರೆ ಎಂಬ ಆರೋಪ ಸಹ ಕೇಳಿಬರುತ್ತಿದೆ.
ಇದನ್ನೂ ವೀಕ್ಷಿಸಿ: ಸಿದ್ದರಾಮಯ್ಯ ತಾಕೀತು ಬೆನ್ನಲ್ಲೇ ಅಖಾಡಕ್ಕಿಳಿದ ಸಚಿವರು: ಕೊಪ್ಪಳ ಕಾಂಗ್ರೆಸ್‌ನಲ್ಲಿ ಗರಿಗೆದರಿದ ಲೋಕಸಮರ ಸರ್ಕಸ್