ಶವರ್ಮಾ‌ ತಯಾರಕರಿಗೆ ಶಾಕಿಂಗ್ ನ್ಯೂಸ್: ಇದರ ತಯಾರಿಕೆಗೆ ಬಳಸುವ ಬಣ್ಣ ಅಸುರಕ್ಷಿತ- ವರದಿ

Jun 30, 2024, 12:07 PM IST

ಗೋಬಿ, ಕಬಾಬ್, ಪಾನಿಪುರಿ ಆಯ್ತು ಈಗ ಶವರ್ಮಾ (Shawarma) ಸರದಿ, ಇದರ ತಯಾರಕರಿಗೆ ಶಾಕಿಂಗ್ ನ್ಯೂಸ್‌ವೊಂದು ಬಂದಿದೆ. ಶವರ್ಮಾ ತಯಾರಿಕೆಗೆ ಬಳಸುವ ಬಣ್ಣ(Colour) ಅಸುರಕ್ಷಿತ, ಇದನ್ನು‌ ಸೇವಿಸಿ ಫುಡ್‌ ಪಾಯಿಸನ್‌(Food poison) ಆಗಿದೆ ಎಂದು ವರದಿ ಹೇಳಿದೆ. 17 ಶವರ್ಮಾ‌ ಸ್ಯಾಂಪಲ್ ಟೆಸ್ಟ್ ಮಾಡಿಸಲಾಗಿದ್ದು, ಇದನ್ನು ಆಹಾರ ಇಲಾಖೆ ರುಚಿ ನೋಡಿದೆ. 17 ಮಾದರಿ ಪೈಕಿ 9 ಮಾದರಿಗಳು ಸುರಕ್ಷಿತ ಎಂದು ವರದಿಯಾಗಿದೆ. 8 ಮಾದರಿಗಳಲ್ಲಿ ಬ್ಯಾಕ್ಟೀರಿಯಾ, ಈಸ್ಟ್‌ಗಳು ಪತ್ತೆಯಾಗಿವೆ. ಬೆಂಗಳೂರು, ಮೈಸೂರು, ತುಮಕೂರು ಸೇರಿ ಹಲವೆಡೆ ಟೆಸ್ಟ್ ಮಾಡಲಾಗಿದೆ. 

ಇದನ್ನೂ ವೀಕ್ಷಿಸಿ:  ಒಕ್ಕಲಿಗ ಯುವ ಬ್ರಿಗೇಡ್‌ ವತಿಯಿಂದ ಸನ್ಮಾನ: ನ್ಯಾ. ಚಂದ್ರಶೇಖರಯ್ಯಗೆ ಜೀವಮಾನ ಸಾಧನೆಗೆ ಪ್ರಶಸ್ತಿ