ದಕ್ಷಿಣ ಕಾಶಿ ಶಿವಗಂಗೆಯಲ್ಲಿ ಮೋಡಗಳ ಕಲರವ: ರಮಣೀಯ ದೃಶ್ಯ ಕ್ಯಾಮೆರಾದಲ್ಲಿ ಸೆರೆ

Nov 16, 2023, 12:21 PM IST

ನೆಲಮಂಗಲ : ಚುಮು ಚುಮು ಚಳಿಗಾಲದಲ್ಲಿ ದಕ್ಷಿಣ ಕಾಶಿ ಶಿವಗಂಗೆಯಲ್ಲಿ(Shivagange) ಮೋಡಗಳ ಕಲರವ ನೋಡುಗರ ಮನ ಸೆಳೆಯುತ್ತಿದೆ. ಚಾರುಣಿಗರನ್ನು ಎತ್ತರದ ಶಿಖರ ದಕ್ಷಿಣ ಕಾಶಿ ಶಿವಗಂಗೆ ಕೈಬೀಸಿ ಕರೆಯುತ್ತಿದೆ. ನೆಲಮಂಗಲ(Nelamangala) ತಾಲೂಕಿನ ಪ್ರಸಿದ್ಧ ಶಿವಗಂಗೆ ಬೆಟ್ಟದಲ್ಲಿ ರಮಣೀಯ ದೃಶ್ಯವನ್ನು ನೋಡಬಹುದಾಗಿದೆ. ಬೆಳ್ಳಂಬೆಳಗ್ಗೆ ಆಗಸದಲ್ಲಿ ಮೋಡಗಳು(Clouds) ಶಿವಗಂಗೆ ಬೆಟ್ಟವನ್ನ ಸ್ಪರ್ಶಿಸುವ ರಮಣೀಯ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಮುದ್ರ ಮಟ್ಟದಿಂದ ಮೂರು ಸಾವಿರ ಎತ್ತರದಲ್ಲಿ ಶಿವಗಂಗೆ ಬೆಟ್ಟ ಇದೆ. ನಾನಾ ಪವಾಡಗಳಿಗೆ ಈ ಬೆಟ್ಟ ಸಾಕ್ಷಿಯಾಗಿದೆ. ಶ್ರೀ ಗಂಗಾಧರೇಶ್ವರ ಸ್ವಾಮಿ ಹಾಗೂ ಹೊನ್ನಮ್ಮದೇವಿ ಶಿವಗಂಗೆ ಬೆಟ್ಟದಲ್ಲಿ ನೆಲೆಸಿದ್ದಾರೆ. ಪ್ರವಾಸಿಗರಿಗೆ ರಮಣೀಯ ತಾಣವಾಗಿ ಚಳಿಗಾಲದಲ್ಲಿ ಮನೋಹರವಾಗಿ ಕಂಗೊಳಿಸುವ ದೃಶ್ಯ ಸೆರೆಯಾಗಿದೆ.

ಇದನ್ನೂ ವೀಕ್ಷಿಸಿ:  ಯಶ್ 19 ಬಗ್ಗೆ ಕೊನೆಗೂ ಅನೌನ್ಸ್ ಮಾಡದ ಯಶ್: ಬೇಸರ ಹೊರಹಾಕಿದ ಅಭಿಮಾನಿಗಳು !