ವಕ್ಫ್ ಆದಾಯದಲ್ಲಿ ಕೋಟಿ ಕೋಟಿ ಗೋಲ್‌ಮಾಲ್ ? ಸುಲ್ತಾನಿ, ಮದೀನಾ ಮಸೀದಿಗೆ ಮಹಾ ಮೋಸ..?

ವಕ್ಫ್ ಆದಾಯದಲ್ಲಿ ಕೋಟಿ ಕೋಟಿ ಗೋಲ್‌ಮಾಲ್ ? ಸುಲ್ತಾನಿ, ಮದೀನಾ ಮಸೀದಿಗೆ ಮಹಾ ಮೋಸ..?

Published : Aug 17, 2023, 11:12 AM IST

ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಇರುವ ವಕ್ಫ್ ಬೋರ್ಡ್‌ನಲೇ ಮೋಸದಾಟ ಶುರುವಾಗಿದೆ. ಬಡ ಮುಸ್ಲಿಮರ ಏಳಿಗೆಗಾಗಿ ಬಳಸಬೇಕಾದ ಆದಾಯದಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ. 

ವಕ್ಫ್ ಬೊರ್ಡ್ ಅಂದ್ರೆನೇ ಚಿನ್ನದ ಮೊಟ್ಟೆ. ದೇಶದಲ್ಲಿ ಅತೀ ಹೆಚ್ಚು ಆದಾಯಗಳಿಕೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಮುಸ್ಲಿಂ ಸಮುದಾಯದ ಅಭಿವೃದ್ಧಿಯೇ ವಕ್ಫ್ ಮೂಲ ಉದ್ದೇಶವಾಗಿದೆ. ಆದ್ರೆ, ಉತ್ತರಕನ್ನಡ ಜಿಲ್ಲೆಯ ಶಿರಸಿ ವಕ್ಫ್ ಬೋರ್ಡ್‌ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ಮಸೀದಿ ಆಸ್ತಿ ಹಾಗೂ ಆದಾಯದಲ್ಲೇ ಭಾರೀ ಗೋಲ್‌ಮಾಲ್ ಮಾಡಿರುವ ಆರೋಪ ಕೇಳಿಬಂದಿದೆ. ವಕ್ಫ್‌ ಬೋರ್ಡ್‌ನಡಿ (waqf borad)ಸುಮಾರು 11 ಎಕರೆಗಿಂತಲೂ ಹೆಚ್ಚು ಜಾಗ ಸೇರಿ ಸುಮಾರು 250ಕೋಟಿ ರೂ. ಮೌಲ್ಯದ ಆಸ್ತಿಯಿದೆ. ಇದರಲ್ಲಿ 64 ಅಂಗಡಿಗಳು, 26 ಮನೆಗಳು ಹಾಗೂ ಮೂರು ಖಾಲಿ ಜಾಗಗಳು ಈ ಬೋರ್ಡ್‌ಗೆ ಸೇರಿಕೊಂಡಿದೆ. ಇದೇ ವಕ್ಫ್‌ನಡಿ ಶಿರಸಿ(shirasi) ಪಟ್ಟಣದ ಸುಲ್ತಾನಿ ಮತ್ತು ಮದೀನಾ ಮಸೀದಿ(Medina Mosque) ಕೂಡಾ ಸೇರಿದೆ. ಆದ್ರೆ, ಈ ಮಸೀದಿಗೆ ದೊರೆಯಬೇಕಾಗಿದ್ದ ಆದಾಯದಲ್ಲೇ ಗೋಲ್‌ಮಾಲ್ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಶಿರಸಿಯಲ್ಲಿ ವಕ್ಫ್ ಆಸ್ತಿ ಮೇಲೆ ಮರ್ಕಝ್ ಎಂಬ ಸ್ವಯಂ ಘೋಷಿತ ಸಮಿತಿ ಅಧಿಕಾರ  ಚಲಾಯಿಸ್ತಿದೆ. ವಕ್ಫ್ ಜಾಗದಲ್ಲಿ ಅಂಗಡಿ, ಹೋಟೆಲ್‌ಗಳನ್ನು  ಕೇವಲ 40ರಿಂದ 500 ರೂಪಾಯಿವರೆಗೆ ಬಾಡಿಗೆಗೆ ನೀಡಿದ್ದಾರೆ. ಹೀಗೆ ಕಡಿಮೆ ಬಾಡಿಗೆಗೆ ಪಡೆದ ಕೆಲ ಅಂಗಡಿ ಮಾಲೀಕರು 35,000 ದಿಂದ 40,000ರೂಪಾಯಿವರೆಗೆ ಸಬ್ ಲೀಸ್‌ಗೆ ನೀಡಿ ಬಾಡಿಗೆ ಪಡೆದು ಭರ್ಜರಿ ಜೇಬು ತುಂಬಿಸಿಕೊಳ್ಳುತ್ತಿದ್ದಾರಂತೆ.  ವಕ್ಫ್ ಬೋರ್ಡ್ ಚೇರ್‌ಮ್ಯಾನ್ ಹಾಗೂ ಸದಸ್ಯರೆ ಈ ಮಹಾ ಮೋಸದ ಜಾಲದ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  ಮಳೆ ಕೊರತೆ ಮಧ್ಯೆ ತಮಿಳುನಾಡಿಗೆ ನೀರು ರಿಲೀಸ್: ಸಿಟ್ಟಿಗೆದ್ದ ಕಾವೇರಿ ಕೊಳ್ಳದ ರೈತರಿಂದ ನೀರಿಗಿಳಿದು ಪ್ರೊಟೆಸ್ಟ್..!

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!