ಸಲಿಂಗ ಕಾಮ ಆರೋಪ: ಈ ಬಗ್ಗೆ ಮಾತಾಡೋಕೆ ನಮಗೂ ಮುಜುಗರವಾಗುತ್ತೆ ಎಂದ ಚಲುವರಾಯಸ್ವಾಮಿ

Jun 23, 2024, 1:22 PM IST

ಮಂಡ್ಯ: ಸೂರಜ್ ರೇವಣ್ಣ(Suraj Revanna) ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಚಲುವರಾಯಸ್ವಾಮಿ(Minister Chaluvarayaswamy) ಮಾತನಾಡಿದ್ದು, ಇದು ಮಾಧ್ಯಮಗಳಿಗೆ ಬಿಟ್ಟ ವಿಚಾರ. ಕಾನೂನು , ಕೋರ್ಟ್ ಇದೆ. ಇದು ಬಹಿರಂಗವಾಗಿ ಚರ್ಚೆ ಮಾಡುವ ವಿಚಾರವಲ್ಲ. ನಮಗೂ ಇದರ ಬಗ್ಗೆ ಮಾತನಾಡಲು ಮುಜುಗರ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಏನು ಮಾಡುವುದು ಇದು ನಮ್ಮ ಕೈಯಲ್ಲಿ ಇದೀಯಾ ? ಇದನ್ನ ಸರಿಪಡಿಸುವುದು ನಮ್ಮ ಕೈಯಲ್ಲಿ ಇಲ್ಲ. ಇಬ್ಬರು ದೂರು ನೀಡಿದ್ದಾರೆ. ಈ ಬಗ್ಗೆ ತನಿಖೆ ಆಗುತ್ತೆ. ಕೇಸ್ ಅಂಡ್ ಕೌಂಟರ್ ಕೇಸ್ ಆಗಿದೆ. ಇದರಲ್ಲಿ ರಾಜಕೀಯ ಏನು ಬರುತ್ತದೆ.ಅವರ ಮನೆತನವೇ ರಾಜಕಾಣದಲ್ಲಿ ಬೆಳದಿದೆ. ಈ ಪರಿಸ್ಥಿತಿ ನಿರ್ಮಾಣಕ್ಕೆ ಅವರೇ ಕಾರಣ. ನಾವು ಏನು ಮಾಡಲು ಸಾಧ್ಯ. ಈ ಹಿಂದೆ ಕುಮಾರಸ್ವಾಮಿ ಸಿಎಂ ಆದಾಗ ಗಣಿಗಾರಿಕೆ ಬೇಡ ಎಂದಿದ್ದರು. ನೋಡೋಣಾ ಸಾರ್ವಜನಿಕರ ಗಮನದಲ್ಲಿ ಇಟ್ಟುಕೊಂಡು ಮಾಡಬೇಕು. ರಾಜ್ಯಕ್ಕೆ ಕುಮಾರಸ್ವಾಮಿ ಒಳ್ಳೇಯದು ಮಾಡಲಿ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಸಲಿಂಗ ಕಾಮ ಆರೋಪ: ಮೆಡಿಕಲ್ ಟೆಸ್ಟ್ ಬಳಿಕ ಜಡ್ಜ್ ಮುಂದೆ ಸೂರಜ್ ರೇವಣ್ಣ ಹಾಜರ್!