ಬಿಜೆಪಿ ಕೈಗೆ ಅಸ್ತ್ರ ಕೊಟ್ಟರಾ ಕಾಂಗ್ರೆಸ್‌ ನಾಯಕರು..? ತನಿಖೆಗೆ ವಹಿಸಿದ್ದು ರಾಜಕೀಯ ದ್ವೇಷ ಎಂದ ಕಾಂಗ್ರೆಸ್..!

Nov 25, 2023, 3:41 PM IST

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(DK Shivakumar) ಅವರ ಮೇಲೆ ಆದಾಯ ಮೀರಿ ಆಸ್ತಿ ಸಂಪಾದನೆ ಮಾಡಿರೋ ದೊಡ್ಡ ಆರೋಪವಿದೆ. ಇದೇ ವಿಚಾರಕ್ಕೆ ಅವರು ತಿಹಾರ್ ಜೈಲು ವಾಸವನ್ನೂ ಅನುಭವಿಸಿದ್ದಾರೆ. ಹಿಂದೆ ಬಿಜೆಪಿ(BJP) ಸರ್ಕಾರವಿದ್ದಾಗ ಅವರ ಮೇಲಿನ ಆರೋಪದ ತನಿಖೆ ಮಾಡೋಕೆ ಸಿಬಿಐಗೆ (CBI) ಆದೇಶ ನೀಡಿತ್ತು. ಈಗ ಆ ಆದೇಶವನ್ನ ಸಿದ್ದು ಸರ್ಕಾರ ವಾಪಸ್ ಪಡೆದಿರೋದು ಚರ್ಚೆಗೆ ಗ್ರಾಸವಾಗಿದೆ. ಅಕ್ರಮ ಆಸ್ತಿಗಳಿಕೆ ಪ್ರಕರಣವನ್ನ ಹಿಂದಿನ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿತ್ತು. ಸಿಬಿಐ ಕೂಡ ತನಿಖೆ ಶುರು ಮಾಡಿತ್ತು. 90 ಪರ್ಸಂಟ್ ತನಿಖೆಯೂ ಮುಗಿದಿತ್ತು. ಆದ್ರೆ ಈಗ ಸಿದ್ದು ಸರ್ಕಾರ ಸಿಬಿಐ ತನಿಖೆಗೆ ರೆಡ್ ಸಿಗ್ನಲ್ ಕೊಟ್ಟಿದೆ. ಈ ಮೂಲಕ ಡಿಕೆ ಶಿವಕುಮಾರ್ ಅವರನ್ನ ಕಾಪಾಡೋಕೆ ಮುಂದಾಗಿದೆ. ಡಿ.ಕೆ ಶಿವಕುಮಾರ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಈಗ ರಾಜ್ಯದಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡ್ತಾ ಇದೆ. ಡಿಕೆಶಿ ವಿರುದ್ಧ ಸಿಬಿಐ ತನಿಖೆ ಹಿಂಪಡೆಯಲು ಸರ್ಕಾರ ನಿರ್ಧಾರಕ್ಕೆ ಬಂದಿದೆ. ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ ಸಿಬಿಐ ತನಿಖೆಯನ್ನ ಹಿಂಪಡೆದಿದೆ. ಡಿಕೆಶಿ ಮೇಲೆ ಬಿಜೆಪಿಯವರು ಹಾಕಿದ್ದ ಪ್ರಕರಣ ರಾಜಕೀಯ ಪ್ರೇರಿತವಾಗಿದ್ದು ಅನ್ನೋದು ಸಂಪುಟ ಸದಸ್ಯರ ವಾದ. ಈ ಪ್ರಕರಣವನ್ನ ಹಿಂಪಡೆಯೋಕೆ ಸುಮಾರು 35 ನಿಮಿಷ ಚರ್ಚೆಯೂ ಆಗಿದೆ. ಆ ಬಳಿಕ ಕ್ಯಾಬಿನೆಟ್ನಲ್ಲಿ ನಿರ್ಣಯಕ್ಕೆ ಬರಲಾಗಿದೆ. ಹಿಂದಿನ ಸರ್ಕಾರ ನಿಯಮ ಬಾಹಿರವಾಗಿ ಆದೇಶ ಮಾಡಿತ್ತು. ಶಾಸಕರಾಗಿದ್ದ ಡಿಕೆ ಶಿವಕುಮಾರ್ ಮೇಲೆ ತನಿಖೆಗೆ ಆದೇಶ ಕೊಡೋಕೆ ಸಭಾಪತಿಗಳ ಅನುಮತಿ ಪಡದೇ ಇರ್ಲಿಲ್ಲಾ. ಮೌಕಿಕ ಆದೇಶಕ್ಕೆ ಯಾವುದೇ ಬೆಲೆಯಿಲ್ಲ. ಬರವಣಿಗೆಯಲ್ಲಿ ಆದೇಶವೂ ಇಲ್ಲ.ಹೀಗಾಗಿ ನಿಯಮಗಳನ್ನ ಗಾಳಿಗೆ ತೂರಿ ಡಿಕೆಶಿ ಮೇಲೆ ರಾಜಕೀಯ ದ್ವೇಷ ಸಾಧಿಸೋಕೆ ಬಿಜೆಪಿಗರು ಹೋಗಿದ್ದರು. ನಿಯಮ ಬಾಹಿರವಾಗಿ ಅನುಮತಿ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಸಿಬಿಐ ತನಿಖೆಯನ್ನ ವಾಪಸ್ ಪಡೆಯಲಾಗಿದೆ ಅನ್ನೋದು ಕಾಂಗ್ರೆಸ್(Congress) ವಾದವಾಗಿದೆ.

ಇದನ್ನೂ ವೀಕ್ಷಿಸಿ:  ಓದಿದ್ದು SSLC..ಗಳಿಸಿದ್ದು ಕೋಟಿ ಕೋಟಿ..! ಮೋಸಗಾರ ಸುಕೇಶ್ ತಗಲಾಕಿಕೊಂಡಿದ್ದು ಹೇಗೆ..?