Kodagu : ಸೇತುವೆ ಕುಸಿದು 6 ತಿಂಗಳಾದರೂ ಅಧಿಕಾರಿಗಳು ಗಪ್‌ಚುಪ್: ಪ್ರಾಣ ಪಣಕ್ಕಿಟ್ಟು ಹಳ್ಳ ದಾಟುವ ಜನರು

Kodagu : ಸೇತುವೆ ಕುಸಿದು 6 ತಿಂಗಳಾದರೂ ಅಧಿಕಾರಿಗಳು ಗಪ್‌ಚುಪ್: ಪ್ರಾಣ ಪಣಕ್ಕಿಟ್ಟು ಹಳ್ಳ ದಾಟುವ ಜನರು

Published : Dec 17, 2022, 11:19 AM IST

ಕುಶಾಲನಗರ ತಾಲೂಕಿನ ಯಡವನಾಡು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಸೇತುವೆ, ಕುಸಿದು ಬಿದ್ದು ಆರು ತಿಂಗಳಾದರೂ ಇಂದಿಗೂ ಸೇತುವೆ ನಿರ್ಮಿಸಿಲ್ಲ.
 

ಕೊಡಗು : ಯಡವನಾಡು ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕು ಕೇಂದ್ರದಿಂದ 15 ಕಿಲೋ ಮೀಟರ್ ದೂರದಲ್ಲಿರುವ ಗ್ರಾಮ. ಕಳೆದ ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿರುವ ಸೇತುವೆ ಸಂಪೂರ್ಣ ಕುಸಿದು ಬಿದ್ದಿದೆ. ಕುಸಿದು ಬಿದ್ದು 6 ತಿಂಗಳಾದರೂ ಸೇತುವೆ ನಿರ್ಮಿಸಿಲ್ಲ. ಹಲವು ಬಾರಿ ಪಂಚಾಯಿತಿ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಯಡವನಾಡು ಗ್ರಾಮದಲ್ಲಿ 75 ಕ್ಕೂ ಹೆಚ್ಚು ಕುಟುಂಬಗಳಿದ್ದು 50 ಕ್ಕೂ ಹೆಚ್ಚು ಮಕ್ಕಳು ಶಾಲಾ ಕಾಲೇಜಿಗೆ ಕುಶಾಲನಗರ, ಸೋಮವಾರಪೇಟೆ ಹೋಗುತ್ತಾರೆ. ಇವರೆಲ್ರೂ ಕುಸಿದು ಹೋಗಿರುವ ಈ ಸೇತುವೆಯ ಹಳ್ಳ ಇಳಿದು ನೀರು ದಾಟಿ ಹೋಗಬೇಕು. ಅದಕ್ಕಾಗಿ ಹಳೆಯ ವಿದ್ಯುತ್ ಕಂಬಗಳು ಮತ್ತು ಮರದ ದಿಮ್ಮಿಯನ್ನು ಹಳ್ಳದಲ್ಲಿ ಅಡ್ಡವಾಗಿ ಹಾಕಿ ರಸ್ತೆದಾಟಬೇಕಾದ ಪರಿಸ್ಥಿತಿ ಇದೆ. ಇಂತಹ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಇದ್ದು, ಚಿಕ್ಕಪುಟ್ಟ ಮಕ್ಕಳು ಈ ಹಳ್ಳ ದಾಟಿ ಹೋಗಿ ಬರಬೇಕಾದರೆ, ಪೋಷಕರು ಜೊತೆಗೆ ಇದ್ದು, ಈ ಹಳ್ಳವನ್ನು ದಾಟಿಸಬೇಕು. ಒಂದು ವೇಳೆ ಮಳೆ ಬಂತೆಂದರೆ ಹಳ್ಳದಲ್ಲಿ ಭಾರೀ ನೀರು ಹರಿಯುವುದರಿಂದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ದಾಟಲು ಸಾಧ್ಯವೇ ಇಲ್ಲ. ಹಳ್ಳದಲ್ಲಿ ನೀರು ಕಡಿಮೆ ಆಗುವವರೆಗೆ ಕಾದು ನಂತರ ಹಳ್ಳದಾಟಬೇಕಾದ ದುಃಸ್ಥಿತಿ ಇದೆ.

ದಸರಾ ಅಂಬಾರಿ ಹೊತ್ತಿದ್ದ ಆನೆಗೆ ಗುಂಡು ಹೊಡೆದವನ ಬಂಧನ!

23:53ಮಾಣಿಕ್ಯಾಧಾರದಲ್ಲಿ ಕೇರಳ ಬಾಲಕಿ ಸಾವು: ಆತ್ಮ*ಹತ್ಯೆಯೋ, ಆಕಸ್ಮಿಕವೋ? ರೀಲ್ ಮಾಡಿತು ಸೀಕ್ರೆಟ್ ರಿವೀಲ್!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
24:13ಹಿಂದೂ ಹುಡುಗಿಯರೇ ಹುಷಾರ್​​! ಲವ್​​​ ನೆಪದಲ್ಲಿ ದೈಹಿಕ ಸಂಪರ್ಕ, ಅವನ ಜೇಬಿನಲ್ಲಿ ಸಿಕ್ಕಿದ್ದು ಭ್ರೂಣಹತ್ಯೆ ಮಾತ್ರೆ!
02:04ಸಿದ್ಧಗಂಗಾ ಮಠಕ್ಕೆ ರಾಷ್ಟ್ರಪತಿ ಆಗಮನ ಹಿನ್ನಲೆ, ಭದ್ರತಾ ತಪಾಸಣೆ ನಡುವೆ ಶ್ರೀಗಳಿಗೆ ಸಲ್ಯೂಟ್ ಹೊಡೆದ ಶ್ವಾನ
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
24:50ಮದ್ವೆಯಾದ ವರ್ಷಕ್ಕೆ ಪತ್ನಿಯನ್ನೇ ಕೊಂದುಬಿಟ್ಟನಾ ಪತಿ? 24ರ ಯುವತಿಗೆ ಸತ್ತಮೇಲೂ ಸಿಗಲಿಲ್ಲ ಶಾಂತಿ
23:42ಕೊಡಗಿನ ಬೆಡಗಿ ರಂಜಿತಾ ಪ್ರೀತಿಗೆ 2 ತಿಂಗಳಷ್ಟೇ ವ್ಯಾಲಿಡಿಟಿ; ಬೆಂಗಳೂರು ಬಾಡಿಗೆ ಮನೆಯಲ್ಲಿ ಲವ್ವರ್ ಕೈಯಲ್ಲೇ ಮರ್ಡರ್!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more