ಬಾಗಲಕೋಟೆಯಲ್ಲಿ ಹೆಚ್ಚಾದ ವಾಮಾಚಾರ: ಮಾಟ, ಮಂತ್ರದಿಂದ ಸಾರ್ವಜನಿಕರಿಗೆ ಭಯ !

ಬಾಗಲಕೋಟೆಯಲ್ಲಿ ಹೆಚ್ಚಾದ ವಾಮಾಚಾರ: ಮಾಟ, ಮಂತ್ರದಿಂದ ಸಾರ್ವಜನಿಕರಿಗೆ ಭಯ !

Published : Sep 13, 2023, 10:44 AM IST

ಮುಳುಗಡೆ ನಗರಿ ಎಂಬ ಹೆಸರಿಗೆ ಸಾಕ್ಷಿಯಾಗಿರೋ  ಆ ಊರಲ್ಲಿ ಹಿನ್ನೀರು, ಎಲ್ಲಿ ನೋಡಿದ್ರೂ ಹಸಿರುಗಳ ತಾಣವೇ ಕಾಣ ಸಿಗುತ್ತಿತ್ತು. ಆದ್ರೆ ಈಗ ಕಳೆದೊಂದು ವರ್ಷದಿಂದ ರಸ್ತೆಯಲ್ಲಿ ಓಡಾಡೋಕೆ ಹಿಂದೆ ಮುಂದೆ ನೋಡುವಂತಾಗಿದೆ. ಯಾಕಂದ್ರೆ ಮಕ್ಕಳು, ಮಹಿಳೆಯರು ಓಡಾಡುವ ಜಾಗದಲ್ಲಿಯೇ ನಿತ್ಯ ಮಾಟ,ಮಂತ್ರ, ವಾಮಾಚಾರ ಕಂಡು ಬರ್ತಿದೆ.
 

ರಸ್ತೆಯಲ್ಲಿ ಎಲ್ಲೆಂದರಲ್ಲಿ ಕಾಣ ಸಿಗುವ ಬೊಂಬೆ, ಕುಂಕುಮ..ನಿತ್ಯ ಆತಂಕದಲ್ಲೇ ಓಡಾತ್ತಿರೋ ಮಕ್ಕಳು, ಮಹಿಳೆಯರು.. ವಾಮಾಚಾರಕ್ಕಿಳಿದವರ ವಿರುದ್ಧ ಕ್ರಮಕ್ಕೆ ಒತ್ತಾಐಇಸುತ್ತಿರೋ ಜನ.. ಈ ದೃಶ್ಯ ಕಂಡು ಬಂದಿದ್ದು ಮುಳುಗಡೆ ನಗರಿ ಬಾಗಲಕೋಟೆಯಲ್ಲಿ. ಕಳೆದೊಂದು ವರ್ಷದಿಂದ ಇಲ್ಲಿ ವಾಮಾಚಾರಗಳು (Black magic) ನಡೆಯುತ್ತಿವೆ. ಅದ್ರಲ್ಲೂ ಇತ್ತೀಚೆಗೆ ಅತಿಯಾಗಿದೆ. ಮುಖ್ಯವಾಗಿ ವಿದ್ಯಾಗಿರಿ ಮತ್ತು ನವನಗರಗಳಲ್ಲಿ ಮೂರು ರಸ್ತೆಗಳು ಸಂಧಿಸುವ ಸ್ಥಳದಲ್ಲಿ ಕರಿ ಬಟ್ಟೆಯ ಬೊಂಬೆಗಳು(Dolls), ಕುಂಕುಮ ಹಚ್ಚಿದ ಗಂಟು, ಬಾಳೆಹಣ್ಣು ಹೀಗೆ ವಿವಿಧ ವಸ್ತುಗಳನ್ನ ನಡುರಸ್ತೆಯಲ್ಲಿಯೇ ಇರಿಸಿ ವಾಮಾಚಾರ ನಡೆಸುತ್ತಿದ್ದಾರೆ. ಇವರ ಮೌಢ್ಯ ಆಚರಣೆಯಿಂದ ಜನ ರಸ್ತೆಗಳಲ್ಲಿ ಓಡಾಡೋಕು ಭಯ ಪಡುತ್ತಿದ್ದಾರೆ. ನಿತ್ಯ ಮಕ್ಕಳು ಇದೆ ರಸ್ತೆ ಮಾರ್ಗವಾಗೆ ಶಾಲೆ, ಹಾಸ್ಟೆಲ್‌ಗಳಿಗೆ ಓಡಾಡಬೇಕು. ಚಿಕ್ಕ ಮಕ್ಕಳಲ್ಲಿ ಇಂಥ ಮಾಟ, ಮಂತ್ರ, ವಾಮಾಚಾರದ ದೃಶ್ಯಗಳು ಭಯ ಹುಟ್ಟಿಸುತ್ತಿವೆ. ಇನ್ನು ಸಂಜೆ ಹೊತ್ತಲ್ಲಿ ಮಹಿಳೆಯರು(womens) ಅಷ್ಟೇ ಅಲ್ಲ ಪುರುಷರು ಕೂಡ ಈ ರಸ್ತೆಗಳಲ್ಲಿ ತಿರುಗಾಡಲು ಹಿಂಜರಿಕೆಯಿಂದಲೇ ಹೆಜ್ಜೆ ಇಡುತ್ತಿದ್ದಾರೆ. ಹೀಗಾಗಿ ಈ ವಾಮಾಚಾರಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯರು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಒತ್ತಾಯಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಪಾಲಿಕೆ ಯಡವಟ್ಟಿಗೆ ಜನ ಜೀವನ ಅಸ್ತವ್ಯಸ್ತ: ರಸ್ತೆಯನ್ನೇ ಪಾರ್ಕ್ ಮಾಡಲು ಮುಂದಾದ ಪಾಲಿಕೆ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more