ಬಿಜೆಪಿ ಶಾಸಕ ಹರೀಶ್ ಪೂಂಜಾಗೆ ಸಂಕಷ್ಟ..? ಪೊಲೀಸರನ್ನ ಮನೆಯೊಳಗೆ ಬಿಡದೇ ತಳ್ಳಾಟ..ನೂಕಾಟ..!

May 23, 2024, 10:22 AM IST

ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾಗೆ( BJP MLA Harish Poonja) ಸಂಕಷ್ಟ ಎದುರಾಗಿದ್ದು, ಶ್ರೀಘ್ರವೇ ಅವರು ಅರೆಸ್ಟ್‌(Arrest) ಆಗುವ ಸಾಧ್ಯತೆ ಇದೆ. ಅಲ್ಲದೇ ನಿನ್ನೆ ಶಾಸಕ ಹರೀಶ್ ಪೂಂಜಾ ಮನೆಮುಂದೆ ಹೈಡ್ರಾಮಾ ನಡೆದಿದೆ. ಪೊಲೀಸರಿಗೆ(Police) ಅವಾಜ್ ಹಾಕಿದ್ದಕ್ಕೆ BJP ಶಾಸಕ ಪೂಂಜಾ ಬಂಧನ ಮಾಡುವುದು ವಿಫಲವಾಗಿದ್ದು, ಪೂಂಜಾ ಬಂಧಿಸಲೂ ಬಂದಾಗ ಬಿಜೆಪಿ(BJP) ಮತ್ತು ಪೊಲೀಸರ ನಡುವೆ ಜಟಾಪಟಿ ನಡೆದಿದೆ. ಪೊಲೀಸರನ್ನ ಪೂಂಜಾ ಮನೆಯೊಳಗೆ ಬಿಡದೇ ತಳ್ಳಾಟ..ನೂಕಾಟ ನಡೆದಿದ್ದು,ಅವರ ಮನೆ ಎದುರು ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾವಣೆಗೊಂಡಿದ್ದರು. ಪೊಲೀಸರನ್ನ ಹೊರಗಡೆ ತಡೆದು ನಿಲ್ಲಿಸಿ, ನಮ್ಮನ್ನ ಬಂಧಿಸಿ ಎಂದು ಕೂಗಲಾಗುತ್ತಿತ್ತು. ಅಹಿತಕರ ನಡೆಯಬಾರದೆಂದು ಬಂಧನ ನಿರ್ಧಾರವನ್ನು  ಪೊಲೀಸರು ಕೈಬಿಟ್ಟಿದ್ದಾರೆ. ಶಾಸಕ ಪೂಂಜಾ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿ ವಾಪಸ್ ಬಂದಿದ್ದಾರೆ.

ಇದನ್ನೂ ವೀಕ್ಷಿಸಿ:  ಚುನಾವಣಾ ಅಖಾಡದಲ್ಲಿ ರತ್ನ ಭಂಡಾರ ಕೀಲಿ ಕೈ ವಿವಾದ: ಓಡಿಶಾದಲ್ಲಿ ಮೋದಿ ಭಾಷಣ..ತಮಿಳುನಾಡಿನಲ್ಲೂ ಸಂಚಲನ!