ಕಳೆದ ವಾರ ಒಂದು ಅಸ್ತ್ರ, ಈ ವಾರ ಇನ್ನೊಂದು ಅಸ್ತ್ರ: ಕಲಾಪದಲ್ಲಿ ಮಳೆ ಹಾನಿ ಬಗ್ಗೆ ಆದ್ಯತೆ ನೀಡಲು ಬಿಜೆಪಿ ತೀರ್ಮಾನ

Jul 22, 2024, 1:28 PM IST

ಇಂದು ಮಳೆ ಹಾನಿ ಗದ್ದಲಕ್ಕೆ ಅಧಿವೇಶನ (Assembly session) ಸಾಕ್ಷಿಯಾಗಿದೆ. ಹೋರಾಟದ ಪ್ಲ್ಯಾನ್‌ನನ್ನು ಬಿಜೆಪಿ(BJP) ಬದಲಾಯಿಸಿದಂತೆ ಕಾಣುತ್ತಿದೆ. ಮಳೆ ಹಾನಿ (Rain damage)ಬಗ್ಗೆ ಸರ್ಕಾರದ ಗಮನಸೆಳೆಯಲು ಬಿಜೆಪಿ ಮುಂದಾಗಿದೆ. ಅಧಿವೇಶನದಲ್ಲಿ ಮಳೆಹಾನಿ ಬಗ್ಗೆ ಹೆಚ್ಚಿನ ಆದ್ಯತೆ ಕೊಡಲು ತೀರ್ಮಾನಿಸಲಾಗಿದೆ. ಶಿರೂರು ಭೂಕಸಿತ, ಕರಾವಳಿ ಮಲೆನಾಡಿನಲ್ಲಿ ಮಳೆ ಹಾನಿ ಬಗ್ಗೆ ಪ್ರಸ್ತಾಪ ಮಾಡಲಾಗುವುದು. ಈಗಾಗಲೇ ಸ್ಥಳ ಪರಿಶೀಲನೆ ಮಾಡಿರುವ ಪ್ರತಿಪಕ್ಷಗಳ ಶಾಸಕರು. ಮಳೆ(Rain) ಹಾನಿ ನಿಭಾಯಿಸುವಲ್ಲಿ ಸರ್ಕಾರದ ವಿಫಲ ಎಂದು ಬಿಜೆಪಿ ಆರೋಪ ಮಾಡಿದೆ. ವಾಲ್ಮೀಕಿ ಹಗರಣದ ವಿರುದ್ಧ ಸದನದ ಹೊರಗೆ ಹೋರಾಟ, ಸದನದ ಒಳಗೆ ಜನಪರ ವಿಚಾರ ಮುಂದಿಟ್ಟು ಹೋರಾಟ ನಡೆಸಲು ತೀರ್ಮಾನಿಸಲಾಗಿದೆ. ಇನ್ನೂ SCPTPS ಅನುದಾನ ಗ್ಯಾರಂಟಿಗೆ ಬಳಕೆ ಮಾಡಿದ ವಿಚಾರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹೋರಾಟ ಮಾಡಲು ತೀರ್ಮಾನಿಸಲಾಗಿದೆ. ನಿಲುವಳಿ ಮೂಲಕ ಚರ್ಚೆಗೆ ಮುಂದಾಗಿರುವ ಬಿಜೆಪಿ.

ಇದನ್ನೂ ವೀಕ್ಷಿಸಿ:  ಟಾಕ್ಸಿಕ್' ಬಗ್ಗೆ ಹಾಲಿವುಡ್‌ನಿಂದಲೇ ಸಿಕ್ತು ಭರ್ಜರಿ ಸುದ್ದಿ! ಪ್ಯಾನ್ ವರ್ಲ್ಡ್‌ ಟಾಪ್ ಟೆಕ್ನೀಷಿಯನ್ಸ್‌ನಿಂದ ಕೆಲಸ..!