Sep 16, 2022, 5:36 PM IST
ವಿಜಯಪುರ (ಸೆ. 16): ವಿಜಯಪುರ (Vijayapura) ನಗರದ ಗಾಂಧಿ ವೃತ್ತದ ಬಳಿ ಇರುವ ಶತಮಾನ ಪೂರೈಸಿದ ರಾಣಿ ವಿಕ್ಟೋರಿಯಾ ಸರ್ಕಾರಿ ಶಾಲೆಯಲ್ಲಿ ಮಕ್ಕಳನ್ನ ಓದಿಸೋಕೆ ಗಟ್ಟಿ ಗುಂಡಿಗೆ ಬೇಕು. ಮಳೆಯಲ್ಲಿ ಪುಸ್ತಕ, ಬಟ್ಟೆ ತೋಯಿಸಿಕೊಂಡು ಪಾಠ ಕೇಳ್ಬೇಕು. ಕಲಿಬೇಕಾದ್ರೆ ಕರೆಂಟ್ ಹೊಡೆಸಿಕೊಳ್ಬೇಕು. ಅದ್ಯಾವಾಗ ನಮ್ಮ ಮಕ್ಕಳ ಮೇಲೆ ಕುಸಿದು ಬೀಳುತ್ತೋ ಅನ್ನೋ ಆತಂಕ ಪೋಷಕರದ್ದು. ದನಗಳನ್ನು ಕೂಡ ಇಂತ ಕೋಣೆಯಲ್ಲಿ ಕಟ್ಟೋದಕ್ಕೆ ಭಯ ಪಡುವ ಇಂತಹ ಜಾಗದಲ್ಲಿ ಏನು ಅರಿಯದ ಈ ಪುಟ್ಟ ಮಕ್ಕಳು ಭಯಯದಲ್ಲೇ ಪಾಠ ಕೇಳೋ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ವರದಿ ಮಾಡಿತ್ತು. ಬಿಗ್ 3 ವರದಿ ಬಳಿಕ ಈಗ ಶಾಲೆಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು, ಶಾಲೆ ಅಭಿವೃದ್ಧಿಪಡಿಸಲು 30 ಲಕ್ಷ ರಿಲೀಸ್ ಮಾಡಿದ್ದಾರೆ. ಈ ಕುರಿತ ಕಂಪ್ಲೀಟ್ ವರದಿ ಇಲ್ಲಿದೆ