Jul 26, 2022, 3:49 PM IST
ಶಿವಮೊಗ್ಗ (ಜು. 26): ಶಿವಮೊಗ್ಗದ ವಿನೋಬಾ ನಗರದ ಶಿವಾಲಯದ ಬಳಿ ಮಹಾನಗರ ಪಾಲಿಕೆ 70 ಮಳಿಗೆಗಳನ್ನು ನಿರ್ಮಾಣ ಮಾಡಿತ್ತು. ಈ ಮಳಿಗೆ ನಿರ್ಮಾಣ ಮಾಡಿದ್ದು ಬೀದಿ ಬದಿ ವ್ಯಾಪಾರಿಗಳು ಅನುಕೂಲಕ್ಕಾಗಿ. ಮಳಿಗೆಗಳು ಸಿದ್ಧವಾಗಿದ್ದರೂ ವ್ಯಾಪಾರಿಗಳು ಇನ್ನೂ ಬೀದಿ ಬದಿಯಲ್ಲೇ ವ್ಯಾಪಾರ ಮಾಡ್ತಿದ್ರು. ಮಳಿಗೆಗಳನ್ನು ಹಂಚಿಕೆ ಮಾಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮನಸ್ಸು ಮಾಡಿರಲಿಲ್ಲ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ಯಲ್ಲಿ ವರದಿ ಬಿತ್ತರಿಸಲಾಗಿತ್ತು.
ವರದಿ ಪ್ರಸಾರವಾಗುತ್ತಿದ್ದಂತೆ ಪಾಲಿಕೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡರು. ಆಯುಕ್ತ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು. ಫಲಾನುಭವಿಗಳ ಪಟ್ಟಿ ಕೂಡ ರೆಡಿಯಾಯ್ತು. ಇನ್ನು ಇಷ್ಟು ವರ್ಷ್ ಮಳಿಗೆಗಳ ಹಂಚಿಕೆ ಮಾಡಲು ಕೆಲವು ಕಾನೂನಿಕ ತೊಡಕಿತ್ತು. ಕೊನೆಗೂ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಲಾಯಿತು.
ವಿದ್ಯುತ್ ಅವಘಡದಿಂದ ಶಾಶ್ವತ ಅಂಗವೈಕಲ್ಯ, ವೇತನವಿಲ್ಲ, ಸೌಲಭ್ಯವಿಲ್ಲ, ಸಿಬ್ಬಂದಿಗೆ ಮೆಸ್ಕಾಂ ಅನ್ಯಾಯ
ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿಯಿಂದ ಮಹಾನಗರ ಪಾಲಿಕೆಗೆ ಪತ್ರ ಹಸ್ತಾಂತರ ಮಾಡಿ ಆದೇಶ ನೀಡಲಾಯಿತು. ಈಗ 70 ಹೊಸ ಮಳಿಗೆಗಳಲ್ಲಿ ವ್ಯಾಪಾರಸ್ಥರು ವ್ಯಾಪರ ಶುರು ಮಾಡಿದ್ದು ಈ ಬಗ್ಗೆ ಕಂಪ್ಲೀಟ್ ವರದಿ ಇಲ್ಲಿದೆ