BIG 3: ಶಿಕ್ಷಣದ ಕ್ರಾಂತಿ, ಬಡವರ ಸೇವೆ ಹಾಗೂ ಬಿಸಿಲು ಮ್ಯಾನ್: ಇಲ್ಲಿದ್ದಾರೆ ರಿಯಲ್ ಹೀರೋಗಳು

BIG 3: ಶಿಕ್ಷಣದ ಕ್ರಾಂತಿ, ಬಡವರ ಸೇವೆ ಹಾಗೂ ಬಿಸಿಲು ಮ್ಯಾನ್: ಇಲ್ಲಿದ್ದಾರೆ ರಿಯಲ್ ಹೀರೋಗಳು

Published : Jan 14, 2023, 01:20 PM ISTUpdated : Jan 14, 2023, 01:33 PM IST

ಬೆಂಗಳೂರಿನ ಬಿಸಿಲು ಮ್ಯಾನ್‌ ಎಂದೇ ಕರೆಯಲ್ಪಡುವ ಇಂದ್ರೇಶ್‌ ಕುಮಾರ್‌, ಬಹಳ ಕಡಿಮೆ ದರದಲ್ಲಿ ಲಿವರ್‌ ಕಸಿ ಮಾಡಿ ಬಡವರ ಸೇವೆ ಮಾಡುವ  ಡಾ. ನಾಗೇಶ್ ಹಾಗೂ ಕನಸು ಗ್ರಂಥಾಲಯ ಶುರುಮಾಡಿ ವಿದ್ಯಾರ್ಥಿಗಳಿಗೆ ದಾರಿದೀಪವಾಗಿರುವ ಪೊಲೀಸ್ ಅಧಿಕಾರಿ ಪ್ರಕಾಶ್‌ ಬಣಕಾರ್ ಈ ವಾರದ ಬಿಗ್‌ 3 ಹೀರೋಗಳು

ಬೆಂಗಳೂರಿನ ಶ್ರೀನಗರದ ನಿವಾಸಿ ಇಂದ್ರೇಶ್‌, ಬರಿಗಣ್ಣಿನಿಂದ ದಿನಪೂರ್ತಿ ಸೂರ್ಯನನ್ನು ನೋಡುತ್ತಾರೆ. ಸೂರ್ಯನನ್ನ ನಡು ಬಿಸಿಲಿನಲ್ಲೂ ನೋಡುವ ಇಂದ್ರೇಶ್ ಸಾಧನೆ ಎಲ್ಲರು ಬೆಚ್ಚುವಂತದ್ದು. ಇನ್ನು ಡಾ. ನಾಗೇಶ್  ವಿಕ್ಟೋರಿಯಾ ಗ್ಯಾಸ್ಟ್ರೋಎಂಟರಾಲಜಿ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್ ಪ್ಲಾಂಟ್ ಮಾಡಿಸಿಕೊಂಡ್ರೆ ಕೇವಲ 1ಲಕ್ಷದಲ್ಲಿ ಚಿಕಿತ್ಸೆ ಮುಗಿದೇ ಹೋಗುತ್ತೆ. ಇನ್ನು ಬಿಪಿಎಲ್ ಕಾರ್ಡ್'ದಾರರು ಕೇವಲ 25 ಸಾವಿರ ಹಾಗೂ ಎಸ್ ಸಿ/ಎಸ್ಟಿ ಸಮುದಾಯಕ್ಕೆ ಉಚಿತ ಚಿಕಿತ್ಸೆ ನೀಡಲಾಗುತ್ತೆ. ಇದಕ್ಕೆ ಕಾರಣ ಡಾ. ನಾಗೇಶ್. ಅದಕ್ಕೆ ಅವರು ಬಡವರ ಡಾಕ್ಟರ್ ಅನ್ನಿಸಿಕೊಂಡಿದ್ದಾರೆ. ಇನ್ನು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಾಗರಮಡುವು ಗ್ರಾಮದಲ್ಲಿ ಅಲ್ಲಿ ಶಿಕ್ಷಣದ ಕ್ರಾಂತಿ ಆರಂಭವಾಗಿದೆ. ಇದಕ್ಕೆ ಕಾರಣ ಪಿಎಸ್ಐ ಪ್ರಕಾಶ್ ಬಣಕಾರ್. ಅವರು ಇದೇ ಗ್ರಾಮದಲ್ಲಿ ಓದಿ ಈಗ ಬೆಟಗೇರಿ ಪೊಲೀಸ್ ಸ್ಟೇಷನ್ ಪಿಎಸ್ಐ ಆಗಿದಾರೆ. ತಮ್ಮದೇ ಸ್ನೇಹಿತರ ಬಳಗ ಕಟ್ಕೊಂಡು 2019 ರಲ್ಲಿ ಕನಸು ಅನ್ನೋ ಲೈಬ್ರರಿ ಆರಂಭಿಸಿದ್ದಾರೆ. ಸಿಟಿಯಲ್ಲಿ ಸಿಗದ ಅಪರೂಪದ ಪುಸ್ತಕಗಳು ಇಲ್ಲಿ ಸಿಗುತ್ತವೆ.

ಸ್ಯಾಂಟ್ರೋ ರವಿ ಸಿಗಲು ಮೊದಲ ಪತ್ನಿ ಕಾರಣ: ಇಲ್ಲಿದೆ ಬಂಧನದ ರೋಚಕ ಕಥೆ

29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
Read more