ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ಖರ್ಚು? ಹಣ ಹೊಡೆಯಲು ಮುಂದಾದ್ರ ವಿವಿ ಕುಲಪತಿ?

ಕಾಮಗಾರಿ ನೆಪದಲ್ಲಿ ಕೋಟಿ ಕೋಟಿ ಖರ್ಚು? ಹಣ ಹೊಡೆಯಲು ಮುಂದಾದ್ರ ವಿವಿ ಕುಲಪತಿ?

Published : Nov 17, 2023, 10:49 AM IST

ಸ್ಕಾಲರ್ ಶಿಪ್, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಾಸಿಗೆ, ದಿಂಬು ಕೊಡಲು ವಿವಿಯಲ್ಲಿ ಹಣ ಇಲ್ಲ ಅಂತಾರೆ. ಆದ್ರೆ ವಿಸಿ ಕೊಠಡಿಯನ್ನ ಹೈಟೆಕ್ ಮರು ನವೀಕರಣಕ್ಕೆ ‌ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ವಿವಿ ಕುಲಪತಿ ವಿರುದ್ಧ ಕಾಲೇಜು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ.
 

ಜ್ಞಾನಭಾರತಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯ(Bangalore University) ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತೆ..ವಿಶ್ವವಿದ್ಯಾಲಯದ ಕುಲಪತಿ ಡಾ.ಜಯಕರ್ ಶೆಟ್ಟಿ(Dr.Jayakar Shetty), ವಿವಿ ಆಡಳಿತ ವಿಭಾಗದ ವಿಸಿ, ರಿಜಿಸ್ಟ್ರಾರ್ ಹಾಗೂ ಬೋರ್ಡ್ ‌ಕೊಠಡಿ ಮರು ನವೀಕರಣ ಮಾಡಲು ಮುಂದಾಗಿದ್ದಾರೆ. ಮರು ನವೀಕರಣಕ್ಕೆ 1 ಕೋಟಿ ಹಣ ಖರ್ಚು ಮಾಡಿ ಹೈಟೆಕ್ ‌ಕೊಠಡಿ ಮಾಡಲು ನಿರ್ಧರಿಸಿದ್ದು, ಕುಲಪತಿ ನಡೆ ವಿರುದ್ಧ ವಿದ್ಯಾರ್ಥಿಗಳೇ (Students)ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಕೊಡಬೇಕಾದ ಸ್ಕಾಲರ್ ಶಿಪ್ ಹಾಗೂ ಹಾಸ್ಟೆಲ್ ವಿದ್ಯಾರ್ಥಿಗಳ ಸಮಸ್ಯೆ ಬಗೆ ಹರಿಸಲು ಇವರ ಬಳಿ ಹಣ ಇಲ್ಲ. ಆದ್ರೀಗ ಒಂದು ಕೋಟಿ ಹಣದಲ್ಲಿ ನವೀಕರಣ ಕಾಮಗಾರಿ ಮಾಡಿಸುತ್ತಿದ್ದಾರೆ. ಇನ್ನು 10 ,20 ಲಕ್ಷದಲ್ಲಿ ಮುಗಿಯುವ ಕೆಲಸಕ್ಕೆ ಒಂದು ಕೋಟಿ ಖರ್ಚು ಮಾಡಲು ಹೊರಟಿದ್ದಾರೆ.. ಇದು ಮೇಲ್ನೋಟಕ್ಕೆ ಹಣ ಹೊಡೆಯುವ ಹುನ್ನಾರವಿದ್ದಂತೆ ಕಾಣುತ್ತಿದೆ ಅನ್ನೋದು ವಿದ್ಯಾರ್ಥಿಗಳ ಆರೋಪವಾಗಿದೆ. 6 ವರ್ಷಗಳ ಹಿಂದೆ ಬೆಂಗಳೂರು ವಿವಿಯ ಆಡಳಿತ ವಿಭಾಗದ ಕಟ್ಟಡವನ್ನ ಸಂಪೂರ್ಣವಾಗಿ ಮರು ನವೀಕರಣ ‌ಮಾಡಲಾಗಿತ್ತು.ಇದೀಗ ಮತ್ತೆ ನವೀಕರಣಕ್ಕೆ ಕುಲಪತಿಗಳು ಮುಂದಾಗಿದ್ದಾರೆ. ಈಗಾಗಲೇ ನವೀಕರಣ ಕೆಲಸ ಪ್ರಾರಂಭಿಸಲಾಗಿದ್ದು, ಭರದಿಂದ ಸಾಗಿದೆ. ಈ ಹಿಂದೆಯೇ ನವೀಕರಣಕ್ಕೆ ಟೆಂಡರ್ ಕರೆಯಲಾಗಿತ್ತು. ನ್ಯಾಕ್ ಕಮಿಟಿ ವಿಸಿಟ್ ಹಿನ್ನೆಲೆಯಲ್ಲಿ ನವೀಕರಣ ಕೆಲಸ ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ ಎನ್ನುತ್ತಾರೆ ಕುಲಪತಿಗಳು. ನವೀಕರಣ ‌ಕಾಮಗಾರಿ ನೆಪದಲ್ಲಿ  ಕುಲಪತಿಗಳು ಹಣ ಹೊಡೆಯಲು ಹೊರಟಿದ್ದಾರೆ ಅನ್ನೋದು ವಿದ್ಯಾರ್ಥಿಗಳ ಆರೋಪ.  ಒಂದಲ್ಲ ಒಂದು ವಿಷ್ಯಕ್ಕೆ ಸುದ್ದಿಯಾಗುತ್ತಿರುವ ಬೆಂಗಳೂರು ವಿವಿ ಈಗ ನವೀಕರಣ ವಿಷ್ಯದಲ್ಲೂ ಸದ್ದು ಮಾಡುತ್ತಿದ್ದು, ವಿದ್ಯಾರ್ಥಿಗಳ ಈ ಆರೋಪದ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ.

ಇದನ್ನೂ ವೀಕ್ಷಿಸಿ:  ರಾಜ್ಯಾಧ್ಯಕ್ಷರ ಬಳಿಕ ವಿಪಕ್ಷ ನಾಯಕನ ಆಯ್ಕೆ ಸರ್ಕಸ್‌ ! ಇಂದೇ ಬಿಜೆಪಿ ಶಾಸಕಾಂಗ ಸಭೆ ? ಯಾರಿಗೆ ಲಕ್‌ ?

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more